AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಲ್ಯಾಂಪ್ಸ್ ಸಹಕಾರ ಸಂಘದ ಚುನಾವಣೆಯಲ್ಲಿ ಶ್ರೀನಿವಾಸ್ ತಂಡದ 12 ಅಭ್ಯರ್ಥಿಗಳ ಭರ್ಜರಿ ಜಯ.”

1 min read

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಪಟ್ಟಣದ ಲ್ಯಾಂಪ್ಸ್ ಸಹಕಾರ ಸಂಘದ 12 ಸ್ಥಾನಕ್ಕೆ ದಿನಾಂಕ 08/01/2024ರ ಭಾನುವಾರ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದ್ದು,ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀನಿವಾಸ್ ತಂಡದ 12 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಮೂಡಿಗೆರೆ ಕ್ಷೇತ್ರದಿಂದ ಚಂದ್ರೇಶ್,ಕೃಷ್ಣ,ಕೇಶವ, ವಿಜೇಂದ್ರ,ನಾಗೇಂದ್ರ,ರವೀಂದ್ರ,ಸೀನಾ,ಆಲ್ದೂರು ಕ್ಷೇತ್ರದಿಂದ ಶಂಕರ್,ರೇಖಾ,ಮಹೇಶ್ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಪುಷ್ಪಾ,ಸವಿತಾ ಜಯಗಳಿಸಿದ್ದಾರೆ. ಸಂಜೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿಮಾನಿಗಳು ಶುಭ ಹಾರೈಸಿ ಸಂಭ್ರಮಿಸಿದರು.

ಅಭ್ಯರ್ಥಿಗಳು ಜಯ ಗಳಿಸಿದ ಬೆನ್ನಲ್ಲೇ ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ,ಲ್ಯಾಂಪ್ಸ್ ಸಹಕಾರ ಸಂಘದ ಅಭಿವೃದ್ಧಿಗಾಗಿ ಮತದಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಈಗಾಗಲೇ ದುಡಿಯಲು ಬಂಡವಾಳವಿಲ್ಲ.ಅದನ್ನು ಹೊಸದಾಗಿ ಪ್ರಾರಂಭಿಸಬೇಕಾಗಿದೆ.ಅರಣ್ಯ ಉತ್ಪನ್ನದ ಕಡೆ ಒತ್ತು ನೀಡಿ ಬಂಡವಾಳ ಅಧಿಕಗೊಳಿಸುವ ಮೂಲಕ ಸಮುದಾಯ ಹಾಗೂ ಸೊಸೈಟಿ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸಲು ಸಜ್ಜಾಗಿದ್ದಾರೆಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್.ಜಯರಾಂಗೌಡ, ಸಿ.ಬಿ.ಶಂಕರ್,ರಘು ಮಗ್ಗಲಮಕ್ಕಿ,ಕುನ್ನಳ್ಳಿ ರವಿ, ಅಹಮ್ಮದ್ ಬಾವ,ಯಾಕೂಬ್,ಹರೀಶ್ ಹೊರಟ್ಟಿ, ಸುಧೀರ್ ಚಕ್ರಮಣಿ,ಸುರೇಶ್ ಮತ್ತಿತರರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *