AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನಿಪ್ಪಾಣಿ ಪಟ್ಟಣದ ಬಾಗಿನ ಅರ್ಪಣೆ ಸಲ್ಲಿಸಿದರು avintvcom

1 min read

ನಿಪ್ಪಾಣಿ

ನಿಪ್ಪಾಣಿಯ ಜವಾಹರ್ ಕೆರೆಗೆ ಬಾಗಿನ ಅರ್ಪಣೆ

ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ, ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ಜವಾಹರ್ ಕೆರೆಗೆ ಕ್ಷೇತ್ರದ  ಜನತೆಯ ಪರವಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಬಾಗಿನ ಅರ್ಪಣೆ ಸಲ್ಲಿಸಿದರು. ಬಳಿಕ ಮಹಾರಾಷ್ಟ್ರದ ಮೊದಲನೇ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಯಶವಂತರಾವ್ ಚವ್ಹಾಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ, ಜವಾಹರ್ ಕೆರೆ ಭರ್ತಿಯಾಗಿರುವುದು ಸಂತಸದ ಸಂಗತಿ. ಇದರಿಂದಾಗಿ ನಿಪ್ಪಾಣಿ ನಗರದ ಜನತೆಗೆ ಅನುಕೂಲರವಾಗಲಿದೆ. ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಪ್ರಥಮ ಆದ್ಯತೆ ನೀಡುತ್ತಿದೆ. ಹೀಗಾಗಿ ತುಂಬಿರುವ ಕೆರೆಯ ನೀರನ್ನು ಸರ್ವರೂ ಸದುಪಯೋಗಪಡಿಸಿಕೊಂಡು, ಹಿತ-ಮಿತವಾಗಿ ನೀರಿನ ಸದ್ಭಳಕೆ ಮಾಡುವಂತೆ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಊರಿನ ಗಣ್ಯರು, ಜನಪ್ರತಿನಿಧಿಗಳು, ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

निपाणी

निपाणी येथील जवाहर तलावाला गंगापूजन.

यावर्षी चांगला पाऊस पडून वाहत असलेल्या निपाणी शहराच्या बाहेरील जवाहर तलावाला मतदारसंघाच्या समस्त नागरिकांच्यावतीने राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी गंगा पूजन केले व त्यानंतर महाराष्ट्राचे प्रथम मुख्यमंत्री दिवंगत श्री यशवंतराव चव्हाण, यांच्या पुतळ्याला पुष्पहार अर्पण करून, नागरिकांना उद्देशून संबोधित केले.

यावर्षी चांगला पाऊस झाल्याने जवाहर तलाव भरल्याचा आनंद आहे.याचा फायदा निपाणी शहरातील लोकांना होणार आहे, भाजपा सरकार सिंचनाला प्रथम प्राधान्य देत आहे.अशाप्रकारे तलावातील भरलेल्या  पाण्याचा सदुपयोग करून घेऊन, पाण्याचा योग्य वापर करावे असे सांगितले.

 

यावेळी मान्यवर, लोकप्रतिनिधी, नगरसेवक, पक्षाचे कार्यकर्ते व स्थानिक उपस्थित होते.

 

About Author