“ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಖಂಡನೀಯ : ಡಿ.ಆರ್.ದುಗ್ಗಪ್ಪಗೌಡ.”
1 min read![](https://avintv.com/wp-content/uploads/2023/10/IMG-20231004-WA0013-1024x473.jpg)
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳು ಕಳಸ ಪಟ್ಟಣದ ಮುಖ್ಯ ರಸ್ತೆಯಲ್ಲಿಪ್ರತಿಭಟನಾ ಮೆರವಣಿಗೆಯ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಮಾತನಾಡಿ ಶತಮಾನಗಳ ಹಿಂದಿನಿಂದಲೂ ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಅಡ್ಡಿ ಉಂಟುಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆ ಇದ್ದಾಗ ಮೈಸೂರ್ ಪ್ರಾಂತ್ಯವನ್ನು ಜುಟ್ಟು ಹಿಡಿದ ಆಂಗ್ಲರು ಮತ್ತು ತಮಿಳರೆ ರಚಿಸಿದ 1892ಹಾಗೂ1924ರ ಒಪ್ಪಂದಗಳು ತಮಿಳುನಾಡಿನ ಅನುಕೂಲತೆಗಾಗಿಯೇ ಆಗಿರುವ ಒಪ್ಪಂದಗಳು ಕರ್ನಾಟಕಕ್ಕೆ ನೀರಾವರಿ ವಿಚಾರದಲ್ಲಿ ಮಾರಕವಾಗಿವೆ. ತಮಿಳುನಾಡಿನ ಅನುಮತಿ ಇಲ್ಲದೆ ಕರ್ನಾಟಕದ ಕಾವೇರಿಯಲ್ಲಿ ಹಾಗೂ ಅದರ ಉಪನದಿಗಳಲ್ಲಿ ಹಳ್ಳ ಕೊಳ್ಳಗಳಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ, ಹೂಳು ಸಹ ತೆಗೆಯುವಂತಿಲ್ಲ ಎಲ್ಲ ರೀತಿಯ ನಿಬಂಧನೆಗಳನ್ನು ಹೇರಲಾಗಿದೆ. ಆದರೆ ತಮಿಳುನಾಡಿನ ನೀರಿನ ಬಳಕೆಗೆ ಯಾವುದೇ ನಿರ್ಬಂಧಗಳಿಲ್ಲ, ಧಾರಾಳ ಪ್ರಮಾಣ ಹೊಸ,ಹೊಸ ಅಣೆಕಟ್ಟುಗಳನ್ನು ಕಟ್ಟಬಹುದು, ನೀರು ಮಿತಿ ಇಲ್ಲದೆ ಬಳಸಿಕೊಳ್ಳಲು ಯಾವುದೇ ನಿರ್ಬಂಧಗಳಿಲ್ಲ.
ಕರ್ನಾಟಕದ ಕಾವೇರಿ ವಿಚಾರದಲ್ಲಿ 1947ರ ನಂತರ 60 ವರ್ಷಗಳಿಂದ ಆಳ್ವಿಕೆ ನಡೆಸಿದ ಕಾಂಗ್ರೆಸ್ ಹಾಗೂ 16 ವರ್ಷ ಬಿಜೆಪಿ ಕೇಂದ್ರ ಸರ್ಕಾರ ಬ್ರಿಟಿಷ್ ಪ್ರಭುತ್ವ ಇದ್ದಾಗ ತಮಿಳರ ಅನುಕೂಲಕ್ಕೆ ತಂದಿರುವ ಒಪ್ಪಂದ ರದ್ದು ಮಾಡಿ ಜಲಕ್ಷಾಮದ ಪರಿಸ್ಥಿತಿಯಲ್ಲಿ ಪ್ರಧಾನಿಗಳು ಮಧ್ಯಪ್ರವೇಶಿಸಿ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಅವೈಜ್ಞಾನಿಕ ಆದೇಶ ತಡೆಹಿಡಿದು ಅಂತರ್ ರಾಜ್ಯ ಜಲ ವಿವಾದವನ್ನು ವೈಜ್ಞಾನಿಕವಾಗಿ ತೀರ್ಮಾನಿಸಲು ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ, ಸಂಸತ್ ಸದಸ್ಯರು, ಹಾಗೂ ರಾಜ್ಯಸಭಾ ಸದಸ್ಯರು ಒತ್ತಡ ತರಬೇಕೆಂದು ಒತ್ತಾಯಿಸಿದರು. ನಂತರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
![](https://avintv.com/wp-content/uploads/2023/10/IMG-20230930-WA0075-1024x473.jpg)
ಈ ಸಂದರ್ಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ರಾಜು, ರೈತ ಸಂಘದ ಅಧ್ಯಕ್ಷ ಎಸ್.ಪಿ.ರಾಜು,ಸಂವಿಜಯ, ಜಯಪಾಲ್, ಕರವೇ ಅಧ್ಯಕ್ಷ ಪೂರ್ಣೇಶ್, ಅಣ್ಣಪ್ಪ, ರೈತ ಸಂಘದ ಜಗದೀಶ್, ನಾರಾಯಣಗೌಡ, ಪದ್ಮರಾಜ್, ಪಾರ್ಶ್ವನಾಥ್ ಮುಂತಾದವರಿದ್ದರು.
🎙️ವರದಿ.🎙️
![](http://avintv.com/wp-content/uploads/2023/10/IMG_20230918_000421-1.jpg)
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.