AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಮತಿ ಸಂಗೀತಾ ಬಂಡು ಚಾವರೆ ಕುಟುಂಬಕ್ಕೆ ಬೆಳಗಾವಿ ಜಿಲ್ಲಾಡಳಿತ ನ್ಯಾಯ ದೊರಕಿಸಿಕೊಡಲಿ avintv.com

1 min read
Featured Video Play Icon

ಅನ್ಯಾಯಕ್ಕೆ ಒಳಗಾದ ರಾಯಬಾಗ ತಾಲ್ಲೂಕಿನ ನಸಲಾಪುರ ಗ್ರಾಮದ ಶ್ರೀಮತಿ ಸಂಗೀತಾ ಬಂಡು ಚಾವರೆ ಕುಟುಂಬಕ್ಕೆ  ಬೆಳಗಾವಿ ಜಿಲ್ಲಾಡಳಿತ ನ್ಯಾಯ ದೊರಕಿಸಿಕೊಡಲಿ: ಪತ್ರಕರ್ತ ಹಾಗೂ ಹೋರಾಟಗಾರ ಶ್ರೀ ಬಸವರಾಜು ಮನವಿ    ಸ್ಥಳ: ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣ

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಸಲಾಪುರ ಗ್ರಾಮದ ಶ್ರೀಮತಿ ಸಂಗೀತಾ ಬಂಡು ಚಾವರೆ ಮತ್ತು ಕುಟುಂಬ, ಹೆಣ್ಣುಮಕ್ಕಳು ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮ ಲೆಕ್ಕಾದಿಕಾರಿಗಳು ಹಾಗೂ ನಸಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು  ಪ್ರಭಾವಿಗಳ ಒತ್ತಡಕ್ಕೆ ಮಣಿದು ನಮಗೆ ಅನ್ಯಾಯ ಮಾಡಿರುತ್ತಾರೆ. ಆದ್ದರಿಂದ ನ್ಯಾಯ ದೊರಕಿಸಿ ಕೊಡಬೇಕು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಹೋರಾಟಗಾರರು ಇವರು ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟು ಇವರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಕೂಡಲೇ ಬೆಳಗಾವಿ ಜಿಲ್ಲಾಡಳಿತ ಇವರಿಗೆ ನ್ಯಾಯ ದೊರಕಿಸಿಕೊಟ್ಟು ಕೆಳಮಟ್ಟದ ಅಧಿಕಾರಿಗಳಿಗೆ ಬುದ್ದಿ ಹೇಳುವಂತೆ ಮನವಿ ಮಾಡಿ ಈ ನೊಂದ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಎಂದು ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ರೈತ ಹೋರಾಟಗಾರ್ತಿ ಜಯಶ್ರೀ ಗುರವಯ್ಯನವರ್, ನೊಂದ ಕುಟುಂಬದ ಸದಸ್ಯರು ಹಾಜರಿದ್ದರು🖋️🙏 ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು ಹಾಗೂ ಹೋರಾಟ ಗಾರರು. ವೀರಾಪುರ.

About Author