“ಮನೆ ಬಾಗಿಲಿಗೆ ಬಂದಿತು ಮತಪೆಟ್ಟಿಗೆ.”
1 min read
ರಾಜ್ಯದ 14ನೇ ವಿಧಾನಸಭೆಗೆ ಗೃಹ ಮತದಾನ ಪ್ರಕ್ರಿಯೆ ದಿನಾಂಕ 29/04/2023ರ ಶನಿವಾರದಂದು ಆರಂಭ.
80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತ್ತು ದಿವ್ಯಾಂಗ ಚೇತನರಿಗೆ ಇದೇ ಮೇ 10ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಗೃಹ ಮತದಾನದ ಪ್ರಕ್ರಿಯೆ ದಿನಾಂಕ 29/04/2023ರ ಶನಿವಾರದಂದು ಆರಂಭವಾಯಿತು,1952 ಸ್ವಾತಂತ್ರ ಭಾರತದ ಮೊದಲ ಮಹಾ ಚುನಾವಣೆ ಆರಂಭ, ಆ ಸಮಯದಲ್ಲಿ ನನ್ನವ್ವನಿಗೆ 18- 19 ರ ಪ್ರಾಯ, ಈಗ 90ರ ಅಸು ಪಾಸು, ಓದಿದ್ದು ಎರಡನೇ ತರಗತಿಯಾದರೂ ಕೂಡ ಭದ್ರಮ್ಮ ಎಂದು ಸಹಿ ಮಾಡುವಷ್ಟು ಅಕ್ಷರ ಜ್ಞಾನವನ್ನು ಮಾತ್ರ ಸಂಪಾದಿಸಿಕೊಂಡವಳು,ಆದರೂ ಕೂಡ, ಪ್ರಜಾಪ್ರಭುತ್ವದ ತಾಯಿಬೇರುಗಳಾದ ಪಂಚಾಯಿತಿ ಚುನಾವಣೆಯಿಂದ ಹಿಡಿದು, ಲೋಕಸಭೆ,ವಿಧಾನಸಭೆಗೆ ಅಂದಿನಿಂದ ಇಂದಿನವರೆಗೂ ನೆಡೆದ ಯಾವ ಚುನಾವಣೆಯಲ್ಲೂ ಗೈರು ಹಾಜರಾಗದೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಪ್ರತಿ ಚುನಾವಣೆ ಸಮಯದಲ್ಲೂ ಪ್ರಜಾಪ್ರಭುತ್ವದ ವೈಭವಕ್ಕೆ ಸಾಕ್ಷಿಯಾಗಿ ಮತದಾನ ಮಹತ್ವವನ್ನು ಎತ್ತಿ ಹಿಡಿದವಳು ನನ್ನವ್ವ, ಮೇ 10ರಂದು ನೆಡೆಯುವ 14ನೇ ವಿಧಾನಸಭಾ ಚುನಾವಣೆಗೆ ಶುಭಕೋರುವ ರೀತಿಯಂತೆ ದಿನಾಂಕ 29/04/2023ರ ಶನಿವಾರದಂದು ಗೃಹಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತನ್ನ ನಾಗರಿಕ ಜವಾಬ್ದಾರಿಯನ್ನು ಪೂರೈಸಿದರು,ಮುಂದಿನ 15ನೇ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮತದಾನ ಮಾಡುವಂತಹ ಆಯಸ್ಸು, ಆರೋಗ್ಯ ನನ್ನವ್ವನಿಗೆ ದೊರೆಯಲಿ.
ಬರಹ ಕೃಪೆ.
ಡಿ.ಎಂ.ಮಂಜುನಾಥಸ್ವಾಮಿ
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.