AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ವ್ಯವಸ್ಥೆ ಕುರಿತಾಗಿ “ಜ್ಞಾನತಾಣ” ಕಾರ್ಯಕ್ರಮavintvcom

1 min read

ಕರೋಶಿ

ಸತತ ಪರಿಶ್ರಮ ಹಾಗೂ ಶ್ರದ್ಧೆ ವಿದ್ಯಾರ್ಥಿಗಳ ಕಲಿಕೆಯ ಮೂಲಮಂತ್ರ.

 

ಇಂದು ಕರೋಶಿ ಗ್ರಾಮದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವತಿಯಿಂದ ಆಯೋಜಿಸಿದ್ದ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ ಕುರಿತಾಗಿ “ಜ್ಞಾನತಾಣ” ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಈ ಸುಸಂದರ್ಭದಲ್ಲಿ ಗ್ರಾಮೀಣ ಭಾಗದ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಹಾಗೂ 5 ರಿಂದ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟ್ಯಾಬ್ , ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ರಿಯಾಯಿತಿ ದರದಲ್ಲಿ ವಿತರಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಜಿ ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಜಿ ಯವರ ನೇತೃತ್ವದ  ತಂಡ ಸಮಾಜದ ಏಳಿಗೆಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಕಳೆದ 10 ವರ್ಷಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರ ಸೇವಾ ಕಾರ್ಯಕ್ಕೆ ಮನಃಪೂರ್ವಕ ಧನ್ಯವಾದಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜಿಲ್ಲಾ ನಿರ್ದೇಶಕರಾದ ಶ್ರೀ ಕೃಷ್ಣಾ.ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮಹೇಶ ಭಾತೆ, ಊರಿನ ಗಣ್ಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

करोशी

सतत परिश्रमामुळेच विद्यार्थ्यांना  यश.

आज करोशी गावात श्री क्षेत्र धर्मस्थळाच्या ग्रामीणाभिवृद्धी योजनेच्या वतीने आयोजित ग्रामीण विद्यार्थ्यांना कन्नड माध्यमांतून इंटरनेट शिक्षण व्यवस्था बाबत “ज्ञानताण” कार्यक्रम राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी उद्घाटन करून, कार्यक्रमास उद्देशून संबोधित केले.

याप्रसंगी ग्रामीण भागात धर्मस्थळ बचत गटातील सदस्यांच्या मुलांना तसेच 5वी ते 10वी वर्गामध्ये शिक्षण  घेत असलेल्या विद्यार्थ्यांसाठी टॅब आणि पदवीधर विद्यार्थ्यांना लॅपटॉप सवलतीच्या दरात वितरण केले.

धर्मस्थळ धर्माधिकारी श्री डॉ. वीरेंद्र हेगडे जी, आणि मातोश्री श्री हेमावती वी. हेगडे जी, यांच्या नेतृत्वाखालील संघाने गेल्या 10 वर्षांपासून उत्तर कर्नाटक जिल्ह्यातील सामाजिक आणि शैक्षणिक विकासात मोलाचे योगदान दिले आहेत. यासाठी त्यांच्या सेवेबद्दल त्यांचे मनापासून आभार मानले.

यावेळी धर्मस्थळ ग्रामीणाभिवृद्धी जिल्हा संचालक श्री कृष्ण टी, माजी जिल्हा पंचायत सदस्य श्री महेश भाते, गावातील मान्यवर, विद्यार्थी व ग्रामस्थ उपस्थित होते.

About Author