AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿವರಾತ್ರಿಯಲ್ಲಿ ರಥೋತ್ಸವ ವಿಶೇಷ.ವಿಜೃಂಭಣೆಯಿಂದ ನೆರವೇರಿದ ಶ್ರೀಕಲ್ಲನಾಥೇಶ್ವರ ಜಾತ್ರೋತ್ಸವ #avintvcom

1 min read
Featured Video Play Icon

ಶಿವರಾತ್ರಿಯಲ್ಲಿ ರಥೋತ್ಸವ ವಿಶೇಷ. ವಿಜೃಂಭಣೆಯಿಂದ ನೆರವೇರಿದ ಶ್ರೀಕಲ್ಲನಾಥೇಶ್ವರ ಜಾತ್ರೋತ್ಸವ ಬಣಕಲ್ ವಿಲೇಜ್‍ನ ಕಲ್ಲನಾಥೇಶ್ವರ ಸ್ವಾಮಿಯ ಜಾತ್ರೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಶನಿವಾರ ಬೆಳಿಗ್ಗೆ ದೇವರ ಶಯ್ಯಾಧಿವಾಸ, ಸಂಜೆ ಪುಷ್ಪಾಲಂಕಾರದಿಂದ ಸಿಂಗರಿಸಲಾಗಿದ್ದ ರಥದಲ್ಲಿ ರಥೋತ್ಸವ ನಡೆಯಿತು. ಕಳೆದ ಮೂರು ದಿನಗಳಿಂದ ಪೂಜಾ ವಿಧಿವಿಧಾನಗಳು ನೆರವೇರುತ್ತಿದ್ದು ಗುರುವಾರ ರುದ್ರಾಭೀಷೇಕ, ನಿತ್ಯಪೂಜೆ, ಪುಣ್ಯಾಹ ವಾಚನ, ಗಣಪತಿ ಪೂಜೆ, ಅಂಕುರ ಅರ್ಪಣೆ, ಧ್ವಜ ಪೂಜೆ, ಧ್ವಜಾರೋಹಣ, ಉತ್ಸವ ಬಲಿ, ಮಹಾಮಂಗಳಾರತಿ ನಡೆಯಿತು. ಶುಕ್ರವಾರ ನಿತ್ಯಪೂಜೆ, ಗಿರಿಜಾ ಕಲ್ಯಾಣ, ದೇವರ ರಥಾರೋಹಣ ನೆರವೇರಿತು. ಬಣಕಲ್ ವಿಜೇಜ್, ಬಣಕಲ್, ಚೇಗು ಹಾಗು ಜಿಲ್ಲೆಯ ಹಲವೆಡೆಯಿಂದ ಮತ್ತು ಸುತ್ತಮುತ್ತಲ್ಲಾ ಭಕ್ತಾಧಿಗಳು ಆಗಮಿಸಿ ಹಣ್ಣುಕಾಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author