AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿಯನ್ನು ಹಂಚುವುದರ ಮೂಲಕ ಗೆದ್ದವರಿಗೆ ಶುಭಕೋರಿದ್ದಾರೆ. avintvcom

1 min read
Featured Video Play Icon

ಏನೂ ಬೈ ಎಲಕ್ಷನ್ ಅಲ್ಲಿ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿಯು ಬಾರಿ ಅಂತರದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಸೊಲಿಸಿದ ಹಿನ್ನೆಲೆಯಲ್ಲಿ  ‌ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು  ಸಿಹಿಯನ್ನು ಹಂಚುವುದರ ಮೂಲಕ ಗೆದ್ದವರಿಗೆ ಶುಭಕೋರಿದ್ದಾರೆ.

ವಾ.ಓ.೧

ಹೌದು ಬಿಜೆಪಿ ಪಕ್ಷವು   ಸತತವಾಗಿ ಜಯದ ಮುಂದೆ ಹೊಗುತ್ತಿದ್ದು ಅದರಂತೆ ಈ ಭಾರಿಯ ಬೈ ಎಲೆಕ್ಷನ್ ಅಲ್ಲಿಯೂ ಸಹ ಮುಂದೆ ಸಾಗಿದೆ. ಇನ್ನೂ ಕುತೂಹಲ ಕೆರಳಿಸಿದ ಆರ್ ಆರ್ ನಗರ ಮುನಿರತ್ನ  ಮತ್ತು ಶಿರಾ  ಕ್ಷೇತ್ರದ ರಾಜೇಶ್ ಗೌಡ ರವರು ಬಾರಿ ಅಂತರದಿಂದ ಗೆಲವು ತಂದುಕೊಟ್ಟದ್ದು ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಈ ಬಲದಿಂದಾಗಿಯೇ ಬೆಂಗಳೂರು ಗ್ರಾಮಾಂತರ  ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಮುಖಂಡರು ಹಾಗೂ ಕಾರ್ಯಕರ್ತರು  ಬಿಜೆಪಿ ಗೆ ಜೈಕಾರ ಕೂಗುತ್ತಾ ಪಟ್ಟದ ಹಳೆಯ ಬಸ್ಸು ನಿಲ್ದಾಣದಲ್ಲಿ ಜನರಿಗೆ ಸಿಹಿಯನ್ನು ಹಂಚುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.

ವಾ.ಓ.೨

ಇನ್ನೂ  ಈ ಜಯದ  ಸಂತಸವನ್ನು ಅದೇರೀತಿ ತಾಲ್ಲೂಕಿನ ವಿಜಯಪುರ ಪಟ್ಟಣದ ಗಾಂಧಿಚೌಕ ಸರ್ಕಲ್ ನಲ್ಲಿಯೂ ಸಹ ಬಿ ಜೆ ಪಿ  ಮುಖಂಡರುಗಳು ಕಾರ್ಯಕರ್ತರು ಸಿಹಿ ತಿಂಡಿ ಹಂಚಿ ಸಂಭ್ರಮಪಟ್ಟರು

ಬೈಟ್ :-    ಬಿ ಜೆ ಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಸುಂದ್ರೇಶ್  ಅವರು ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ವ್ಯಕ್ತ ಪಡಿಸಿದ್ದಾರೆ.  ಏನೂ ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಜಯಭೇಸಿದ್ದು  ಈ ಜಯಕ್ಕೆ ಯಡಿಯೂರಪ್ಪನವರ ಶ್ರಮ ಹಾಗೂ ಸರಕರಾದ ಕಾರ್ಯವೈಖರಿಯನ್ನು ನೋಡಿ ಜನತೆ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನ ಜಯದ ಸಮೀಕ್ಷೆಯನ್ನು ಬಿಜೆಪಿ ಇಂದು ಅಳಿಸಿದೆ, ಶಿರಾ ಸತತವಾಗಿ ಬಿಜೆಪಿ ಸೊತ್ತಿದ್ದು ಈ ಭಾರಿ ಹೊಸ ಪ್ರತಿಭೆಯನ್ನು ತಂದಿದ್ದೇವೆ ಅಲ್ಲಿನ ಜನತೆ  ಅವರನ್ನು ಸಹ ಗೆಲ್ಲಿಸಿದ್ದಾರೆ, ಇದರ ಜೊತೆಗೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಯೂ ಸಹ ಬಿಜೆಪಿಯ ಪುಟ್ಟಣ್ಣ ಅವರು ಗೆದ್ದಿರುವುದು ಮತ್ತಷ್ಟು ಖುಷಿಯಾಗಿದೆ ಎಂದು ತಿಳಿಸಿದರು.

” ವರದಿ ರಾಜು ಗೌಡ  ದೇವನಹಳ್ಳಿ ತಾಲ್ಲೂಕು ”

 

About Author