लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಫಲಾನುಭವಿಗೆ ಹಸ್ತಾಂತರ ಮಾಡುವಂತೆ ತೀರ್ಪು ನೀಡಿರುವುದು ಕಾನೂನು ಹೋರಾಟಕ್ಕೆ, ಸತ್ಯಕ್ಕೆ ನ್ಯಾಯಕ್ಕೆ ಸಿಕ್ಕ ಜಯವಾಗಿದೆ…..

1 min read

‎ಪರಿಶಿಷ್ಟಜಾತಿ ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಪರಿಶಿಷ್ಟಜಾತಿಯ ಕಾನೂನು ಬದ್ಧ ಸಂವಿಧಾನಿಕ ಮೀಸಲು ಹಕ್ಕುಗಳಿಗಾಗಿ ನ್ಯಾಯಾಲಯ ಮೂಲಕ ನ್ಯಾಯ ಪಡೆಯ ಬೇಕಾಗಿರುವುದು ದುರಂತವೇ ಸರಿ ಆದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಆಗದ ಕೆಲಸ ಮೂಡಿಗೆರೆಯ ಬಡ ದಲಿತರ ಪರ ಮಾನ್ಯ ಕರ್ನಾಟಕ ಹೈಕೋರ್ಟ್ ನ್ಯಾಯದ ಪರ ತೀರ್ಪು ನೀಡಿ ನ್ಯಾಯಾಲಯದ ಪರ ಜನರಿಗೆ ಕಾನೂನಿನ ಮೇಲೆ ಇನ್ನಷ್ಟು ನಂಬಿಕೆ,ಆತ್ಮವಿಶ್ವಾಸ ಬರುವಂತೆ ಮಾಡಿದೆ. ಕಳೆದ ಆರು ವರ್ಷಗಳಿಂದ ಮೂಡಿಗೆರೆ ಪಟ್ಟಣ ಪಂಚಾಯತ್ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳಿಗೆ ಮೀಸಲಾತಿ ಆಧಾರದ ಮೇಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳಿಗೆ ಹರಾಜು ಮಾಡಿ ಹಣ ಕಟ್ಟಿಸಿಕೊಂಡು ಕಾನೂನು ಬದ್ಧವಾಗಿ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿ ಮೀಸಲಾತಿ ಅಡಿಯಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ಪೊಲೀಸ್ ಸ್ಟೇಷನ್ ಮುಂಭಾಗದ ಮಳಿಗೆ ಸಂಖ್ಯೆ 03ಕ್ಕೆ ಹರಾಜು ಪ್ರಕ್ರಿಯಲ್ಲಿ ಪಾಲ್ಗೊಂಡು ಮಳಿಗೆ ಪಡೆದುಕೊಂಡಿದ್ದರು ಸಹ ಆರು ವರ್ಷ ಕಳೆದರೂ ಮಳಿಗೆ ಹಸ್ತಾಂತರ ಮಾಡದಿರುವುದನ್ನು ಪ್ರಶ್ನಿಸಿ ಫಲಾನುಭವಿ ಕಾನೂನು ಸಮರ ನಡೆಸಿದ ಫಲವಾಗಿ ಇದೀಗ ಹೈಕೋರ್ಟ್ ಬಡ ದಲಿತರಿಗೆ ಮಳಿಗೆ ಹಸ್ತಾಂತರ ಮಾಡಲು ಇದುವರೆಗೆ ವಿಳಂಬ ಧೋರಣೆ ತಾಳಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಜಿಲ್ಲಾ ಯೋಜನಾ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿರವರಿಂದ ತನಿಖಗೆ ಆದೇಶಿಸಿ ವರದಿ ಸಲ್ಲಿಸುವಂತೆ, ಹಾಗೂ ವಿಳಂಬ ಮಾಡಿರುವ ಅಧಿಕಾರಿಗಳಿಂದ ಅರ್ಜಿದಾರರಿಗೆ 1 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದೆ ಅಲ್ಲದೇ ತೀರ್ಪು ನೀಡಿದ ದಿನಾಂಕದಿಂದ ಒಂದು ತಿಂಗಳ ಒಳಗೆ ಬಿಡ್ಡುದಾರರಿಗೆ ಯಾವ ಮಳಿಗೆ ಹರಾಜು ಪ್ರಕ್ರಿಯಲ್ಲಿ ಪಡೆದು ಕೊಂಡಿದ್ದರು ಅದೇ ಮಳಿಗೆಯನ್ನು ಹಾಲಿ ಇರುವವರನ್ನು ತೆರವುಗೊಳಿಸಿ ಫಲಾನುಭವಿಗೆ ಹಸ್ತಾಂತರ ಮಾಡುವಂತೆ ತೀರ್ಪು ನೀಡಿರುವುದು ಕಾನೂನು ಹೋರಾಟಕ್ಕೆ, ಸತ್ಯಕ್ಕೆ ನ್ಯಾಯಕ್ಕೆ ಸಿಕ್ಕ ಜಯವಾಗಿದೆ.

ಈ ಮೂಲಕ ಮೂಡಿಗೆರೆಯ ದಲಿತ ವಿರೋಧಿ ಮನಸ್ಥಿತಿಯ ಆಡಳಿತಕ್ಕೆ ಕಾನೂನು ತನ್ನದೇ ರೀತಿಯಲ್ಲಿ ದಲಿತ ದೌರ್ಜನ್ಯಕ್ಕೆ ಉತ್ತರ ನೀಡಿದೆ. ಇನ್ನಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆಡಳಿತ ವರ್ಗ ಎಚ್ಚೆತ್ತು ಸಾಂವಿಧಾನಿಕ ಕಾನೂನಿನ ಅನ್ವಯ ಕಾರ್ಯ ನಿರ್ವಹಿಸಲಿ ಈ ಪ್ರಕರಣದಲ್ಲಿ ಫಲಾನುಭವಿಯ ನೋವನ್ನು ಅರಿತು ನಮ್ಮ ಪರವಾಗಿ ನ್ಯಾಯ ಒದಗಿಸಿದ ಹೈಕೋರ್ಟ್ ಹಾಗೂ ನ್ಯಾಯಾಲಯದಲ್ಲಿ ನಮ್ಮ ನೋವನ್ನು ಸಮರ್ಥವಾಗಿ ಮನವರಿಕೆ ಮಾಡಿ ನ್ಯಾಯ ಸಿಗುವಂತೆ ನಮ್ಮ ಪರವಾಗಿ ವಾದ ಮಂಡಿಸಿ ನ್ಯಾಯ ದೊರಕಿಸಿ ಕೊಟ್ಟ ನಮ್ಮ ಹೈಕೋರ್ಟ್ ವಕೀಲರಾದ ಹೆಚ್.ಎನ್ ಮಂಜುನಾಥ್ ಪ್ರಸಾದ್ ಅವರಿಗೆ ನಾವು ಅಭಿನಂದನೆ ಸಲ್ಲಸುತ್ತೇವೆ.

ರಮೇಶ್.ಕೆಳಗೂರು…

ಲಕ್ಷ್ಮಣಕುಮಾರ್.ಬಿ.ಕೆ.

ಶಿವಪ್ರಸಾದ್.

‎ಇದ್ದರು.

About Author

Leave a Reply

Your email address will not be published. Required fields are marked *

You may have missed