ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಕಲ್ಲುಗುಡ್ಡದಲ್ಲಿ ಪರಮ ಪೂಜ್ಯ ಭೋದಿ ಸತ್ವ ಬಾಬಾಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರ ೧೩೫ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು,ಈ ಕಾರ್ಯಕ್ರಮವನ್ನು, ಸಾವಿತ್ರಿ ಬಾಯಿ ಫುಲೆ ಪುರಸ್ಕೃತರಾದ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಆಯುಷ್ಮನ್ ಸಾವಿತ್ರಿ ಮೇಡಂ ಉದ್ಘಾಟಿಸಿ ಮಾತನಾಡಿದರು, ಅಂಬೇಡ್ಕರ್ ರವರ ಜೀವನ ಮತ್ತು ಸಾಧನೆ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ವಕೀಲರಾದ ಕೆ.ಸಿ.ಚಂದ್ರಶೇಖರ್, ರಾಮಚಂದ್ರ, ಚಂದ್ರಾ ಕಲಾ, ಲಕ್ಷ್ಮಣ್, ಉಮೇಶ್, ಶ್ರೀನಿವಾಸ, ಶಿವಕುಮಾರ್, ಚಂದ್ರ, ಸಂತೋಷ್, ಭಾಗವಹಿಸಿದ್ದರು ಕಾರ್ತಿಕ್ ನಿರೂಪಿಸಿದರು ಮೋಹನ್ ರವರು ಸ್ವಾಗತಿಸಿದರು

