AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಾ.ಬಿ ಆರ್ ಅಂಬೇಡ್ಕರ್ ಭಾರತ ದೇಶದ ಎಲ್ಲ ವರ್ಗಗಳ ಸರಿಸಮಾನತೆ ಇರುವ ಸಮಾಜವನ್ನು ರೂಪಿಸಲು ಶ್ರಮಿಸಿದ್ದಾರೆ.#avintvcom

1 min read
Featured Video Play Icon

ಡಾ.ಬಿ ಆರ್ ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ಇಂದು ಭಾರತ ದೇಶದ ಎಲ್ಲ ವರ್ಗಗಳ ಸರಿಸಮಾನತೆ ಇರುವ ಸಮಾಜವನ್ನು ರೂಪಿಸಲು ಶ್ರಮಿಸಿದ್ದಾರೆ.ಸಂವಿಧಾನ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು ದೇಶದ ಸನ್ನಡತೆಗೆ ದಾರಿದೀಪವಾಗಿದೆ.ಹಾಗೂ ಇದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಶ್ರೀ ಬಸವೇಶ್ವರ  ರೂರಲ್ ಎಜುಕೇಶನ್ ಡೆವಲಪ್ಮೆಂಟ್ ಟ್ರಸ್ಟ್ ಕಾರ್ಯದರ್ಶಿಗಳು ಹಾಗೂ ವೀರಶೈವ ಲಿಂಗಾಯತ ಒಕ್ಕೂಟ ರಾಜ್ಯಧ್ಯಕ್ಷರು ಆದ  ಡಾ.ಶರಣಪ್ಪ ಎಂ ಕೊಟಗಿ ಅವರು ಹೇಳಿದ್ದಾರೆ.ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂದಂತಹ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾದ ಕುಮಾರಿ ಐಶ್ವರ್ಯ ಹಿರೇಮಠ್ ಅವರು ಸಂವಿಧಾನವು ಸಮಾಜದ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಭಾಗವಾಗಿದೆ ಹಾಗೂ ಸಂವಿಧಾನದ ಪ್ರಾಮುಖ್ಯತೆ ಅದರ ಮೌಲ್ಯಗಳ ಬಗ್ಗೆ ಮತ್ತು ಸಂವಿಧಾನದಲ್ಲಿ ಮಹತ್ವಪೂರ್ಣವಾದ ಅಂಶಗಳ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸವನ್ನು ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಶರಣಪ್ಪ ಎಂ ಕೊಟಗಿ ಮುಖ್ಯ ಅತಿಥಿಗಳಾಗಿ ಐಶ್ವರ್ಯ ಹಿರೇಮಠ್ ಮತ್ತು ಕಾರ್ಯಕ್ರಮದಲ್ಲಿ ಡಾ.ಮಹಾಂತೇಶ ಹಿರೇಮಠ ಹಾಗೂ ನವೀನ ಕರೆರ್ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author