लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕವಿ ವಿ.ಸಿ.ಐರಸಂಗ ಹಾಗೂ ಪತ್ರಕರ್ತ ರವಿ ಬೆಳಗೆರೆ ನಿಧನ: ಸಚಿವರಾದ ಶೆಟ್ಟರ್ ಸಂತಾಪ avintvcom

1 min read
Featured Video Play Icon

ಕವಿ ವಿ.ಸಿ.ಐರಸಂಗ ಹಾಗೂ ಪತ್ರಕರ್ತ ರವಿ ಬೆಳಗೆರೆ ನಿಧನ: ಸಚಿವರಾದ ಶೆಟ್ಟರ್ ಸಂತಾಪ

ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ನ.13:

ಧಾರವಾಡ ಹೆಸರಾಂತ ಕವಿ ವಿ.ಸಿ.ಐರಸಂಗ ಹಾಗೂ ನಾಡಿನ ಪ್ರಸಿದ್ಧ ಪತ್ರಕರ್ತ ರವಿ ಬೆಳಗೆರೆ ಅವರ ನಿಧನಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ದಶಕಗಳಿಂದ ಆಕಾಶವಾಣಿ ಮೂಲಕ ಕೇಳುಗರಿಗೆ ಪರಿಚಿತರಾಗಿರುವ ಕವಿ  ವಿ.ಸಿ‌.ಐರಸಂಗ ಅವರು ಸಹೃದಯರ ಮನ ಗೆದ್ದಿದ್ದರು. ಪ್ಯಾಕೆಟ್ ಪುಸ್ತಕಗಳನ್ನು ಸೈಕಲ್ ಮೂಲಕ ಮಾರಾಟ ಮಾಡುತ್ತ, ಮಲ್ಲಕಂಬದಲ್ಲಿಯೂ ಸಾಧನೆ ಮಾಡುತ್ತ ಮಾದರಿ ಬದುಕು ನಡೆಸಿದ್ದರು.

ಪತ್ರಕರ್ತ ರವಿ ಬೆಳಗೆರೆ ಅವರು ಬಳ್ಳಾರಿಯಲ್ಲಿ ಜನಿಸಿ, ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಹಲವು ದಶಕಗಳ ಸೇವೆಗೈದು , ಹಾಯ್ ಬೆಂಗಳೂರ್ ಪತ್ರಿಕೆ ಮೂಲಕ ನಿರ್ಭೀತ ಪತ್ರಿಕೋದ್ಯಮ ಮುಂದುವರೆಸಿ, ಪತ್ರಿಕೆ,ಸಾಹಿತ್ಯ, ಸಂಗೀತ, ಕಲೆ ಎಲ್ಲವುಗಳ ಆಳ ಜ್ಞಾನ, ಆಕರ್ಷಕ ಅಭಿವ್ಯಕ್ತಿ ಶೈಲಿ  ಹೊಂದಿದ್ದರು.

ಈ ಇಬ್ಬರೂ ಮಹನೀಯರ ನಿಧನ ನಾಡಿಗೆ ಉಂಟಾಗಿರುವ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ,ಅಭಿಮಾನಿಗಳು, ಓದುಗರಿಗೆ ಈ ದುಃಖ ಸಹಿಸುವ ಶಕ್ತಿ ಬರಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ

About Author

More Stories

You may have missed