लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡದಿಂದ ಬದುಕಬಲ್ಲೆ ಎಂಬ ವಾತಾವರಣದಿಂದ ಕನ್ನಡ ಭಾಷೆ ಜನರೇ ಉಳಿಸುತ್ತಾರೆ ಕಡೂರಿನಲ್ಲಿ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ….

1 min read

ಕನ್ನಡದಿಂದ ಬದುಕಬಲ್ಲೆ ಎಂಬ ವಾತಾವರಣದಿಂದ ಕನ್ನಡ ಭಾಷೆ ಜನರೇ ಉಳಿಸುತ್ತಾರೆ

ಕಡೂರಿನಲ್ಲಿ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕಡೂರು: ಕನ್ನಡದಿಂದ ಬದುಕಬಲ್ಲೆ ಎಂಬ ವಾತಾವರಣ ಸೃಷ್ಟಿಯಾದರೆ ಕನ್ನಡ ಭಾಷೆಯನ್ನು ಜನರೇ ಉಳಿಸುತ್ತಾರೆ ಎಂಬ ವಾಸ್ತವ ಸಂಗತಿಯನ್ನು ಗಮನಿಸಬೇಕಿದೆ ಎಂದು ಖ್ಯಾತ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕಡೂರಿನಲ್ಲಿ ಶನಿವಾರ ಆರಂಭವಾದ ಎರಡು ದಿನಗಳ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ವಿವೇಕವಾಗಿ ನಮ್ಮಲ್ಲುಳಿಯಬೇಕು. දෙව ಅಭಿಮಾನವಲ್ಲ- ಸ್ವಾಭಿಮಾನದ ಪ್ರತೀಕವಾಗಬೇಕು.ಕನ್ನಡ ಸಂಸ್ಕೃತಕ್ಕೆ ಹುಟ್ಟಿದ ಮಗಳಲ್ಲ, ಇದನ್ನು ಭಾಷಾ ತಜ್ಞರು ಶೃತಪಡಿಸಿದ್ದಾರೆ. ಇದರಿಂದ ಸಂಸ್ಕೃತದ ಘನತೆ ಕಡಿಮೆಯಾಗುವುದಿ ಲ್ಲ.ಸಂಸ್ಕೃತದ ವಿರೋಧವೂ ಅಲ್ಲ ಎಂಬುದನ್ನು ಗಮನಿಸಬೇಕು. ಜನಸಾಮಾನ್ಯರಿಂದ ಕನ್ನಡ ಉಳಿದಿದೆ. ಕನ್ನಡವನ್ನು ಬಳಸಿದರೆ ಉಳಿಯುತ್ತದೆ. ಕನ್ನಡ ಶಾಲೆಗಳನ್ನು ಉಳಿಸಬೇಕು. ಉಳಿಸುತ್ತೇವೆ ಎಂಬುದು ಸರ್ಕಾರದ ಘೋಷಣೆ. ಆದರೆ ಕನ್ನಡ ಶಾಲೆಗಳು ಮುಚ್ಚುತ್ತಲೇ ಇದೆಯೆಂಬುದು ವಾಸ್ತವ ಎಂದರು.

ಕನ್ನಡವನ್ನು ಕಟ್ಟಿದವರು ಜಾತ್ಯಾತೀತರು. ಕನ್ನಡವನ್ನು ಜಾತಿ ಧರ್ಮದ ಕಾರಣಕ್ಕಾಗಿ ಒಡೆಯುವುದು ಕನ್ನಡ ಭಾಷೆಗೆ ಮಾಡುವ ಆವಮಾನವೇ ಸರಿ. ನಿಜಾರ್ಥದಲ್ಲಿ ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಕನ್ನಡ ಸಾಹಿತ್ಯ ಸೌಹಾರ್ಧತೆಯನ್ನು ಪ್ರತಿಪಾದಿಸಿದೆಯೇ ವಿನಃ ಪ್ರಭಂಜನೆಯನ್ನಲ್ಲ. ಇತ್ತೀಚೆಗೆ ಭಾಷಿಕ ಭ್ರಷ್ಟಾಚಾರ ಹೆಚ್ಚುತ್ತಿದೆ.ಇದೂ

ಸಹ ಕನ್ನಡಕ್ಕೆ ಮಾಡುವ ದ್ರೋಹ. ಇವೆಲ್ಲವನ್ನೂ ಮೆಟ್ಟಿ ಕನ್ನಡ ನಿಲ್ಲಬೇಕು. ಕನ್ನಡದ ವಿವೇಕವನ್ನು ಸರಿಯಾಗಿ ಅರ್ಥೈಸಿಕೊಳ್ಳುವವರೇ ನಿಜ ಕನ್ನಡಿಗರು. ಸೌಹಾರ್ದತೆ ಮತ್ತು ಸಮಾನತೆಯ ಮಹತ್ವವನ್ನು ಯುವಜನತೆಗೆ ತಿಳಿಸಬೇಕು ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯವಷ್ಟೆ ಅಲ್ಲದೆ ಈ ನೆಲದ ಅವಲೋಕನದ ವೇದಿಕೆಯೂ ಆಗಬೇಕು. ಡಾ.ವೆಂಕಟಲಕ್ಷ್ಮಮ್ಮ ಅವರ ಸಮಾಧಿ ದುಸ್ಥಿತಿಯನ್ನು ಕಂಡು : ಕಂಡು ಶಾಸಕರ ಅನುದಾನದಿಂದ ಐದು ಲಕ್ಷ ರೂಪಾಯಿ ಒದಗಿಸಿದ್ದೇನೆ. ಸಮಾಧಿ ರಕ್ಷಣೆಯ ಕಾರ್ಯವನ್ನು ಮಾಡುವುದು ನಿಶ್ಚಿತ. ಇದರ ಜೊತೆ ಬರಗಾಲ ಪೀಡಿತ ಪ್ರದೇಶವಾದ ಕಡೂರು ಪ್ರದೇಶಕ್ಕೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಆಶಾಕಿರಣವಾಗಿ ದೊರೆತದ್ದು ಭದ್ರಾ ಯೋಜನೆ. ಆಯೋಜನೆಗೆ

1281 ಕೋಟಿ ಅನುದಾನ ಮಂಜೂರಾದರೂ ಕಾರ್ಯಾರಂಭವಾಗಲಿಲ್ಲ 5400 ಕೋಟಿ ಕೊಡುತ್ತೇವೆಂಬ ಕೇಂದ್ರದ ಮಾತು ಮಾತಾಗಿಯೇ ಉಳಿಯಿತು. ಕಾಮಗಾರಿ ವಿಳಂಬವಾಯ್ತು, ನಾನು ಶಾಸಕನಾದ ನಂತರ ಈ ಭದ್ರಾ ಉಪಕಣಿವೆ ಯೋಜನೆಗೆ ವೇಗ ದೊಕಿಸುವಲ್ಲಿ ಶ್ರಮಿಸಿದೆ.

ಕಳೆದ ಮಾರ್ಚಿಯಲ್ಲಿ ನಬಾರ್ಡ್ ಮೂಲಕ 455 ಕೋಟಿ ಹಣವನ್ನು మంజూరు ಮಾಡಿಸುವಲ್ಲಿ ಯಶಸ್ವಿಯಾಗುವ మూలక ಕಡೂರು ಕ್ಷೇತ್ರಕ್ಕಾಗುತ್ತಿದ್ದ ಅನ್ಯಾಯವನ್ನು ಸರಿಪಡಿಸಿದೆಯೆಂಬ ತೃಪ್ತಿ ನನ್ನದಾಗಿದೆ.2028 ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಧೈಯ ನನ್ನದಾಗಿದೆ. ನಿರುದ್ಯೋಗ ನಿವಾರಣೆಯಲ್ಲಿ ಗಾರ್ಮೆಂಟ್ಸ್ ಆರಂಭವಾಗಿ 6 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆತಿರುವುದು ಸಂತಸದ ವಿಚಾರವಾಗಿದೆ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕಕಾರಿಯಾಗಿದೆ. ನಾನು ಪುರಸಭೆ ಅಧ್ಯಕ್ಷನಾಗಿದ್ದಾಗ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಶ್ರಮಿಸಿದ್ದೇನೆ. ಎಲ್ಲ ಜಬಪ್ರತಿನಿಧಿಗಳು ಇದೇ ಮೇಲ್ಪಂಕ್ತಿ ಅನುಸರಿಸಿದರೆ ಕನ್ನಡ ಶಾಲೆಗಳು ಉಳಿಯುತ್ತವೆ. ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಶ್ರೀಮಂತಿಕೆಯ ಅನಾವರಣದ ಜೊತೆ ನಮ್ಮ ಜಿಲ್ಲೆಯ ಹಾಗೂ ತಾಲ್ಲೂಕಿನ ಹಲವಾರು ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆಯೂ ಆಗಬೇಕೆಂಬ ಆಶಯವನ್ನಿಟ್ಟುಕೊಂಡು ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನ ಕಡೂರಿನ ಜನಮನದಲ್ಲಿ ಅವಿಸ್ಮರಣೀಯವಾಗುಳಿಯಬೇಕೆಂಬ ಆಶಯ ನಮ್ಮದಾಗಿದೆ ಎಂದರು.

ಸಮ್ಮೇಳನದಲ್ಲಿ ಒಂದಷ್ಟು ಕಥೆಮತ್ತು ಕವನಗಳು, ಕಡಲಮಕ್ಕಳು. ಲತಾ ರಾಜು ಅವರ ನಿರಾಳ ಹಾಗೂ ನಮಗೆ ಸಮಯವಿಲ್ಲ ಈ ನಾಲ್ಕು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸಿಂಗಟಗೆರೆ ಸಿದ್ದಪ್ಪ ಮತ್ತು ಪ್ರಿಯದರ್ಶಿನಿ ಅವರಿಗೆ కన్నడ సిరి వక్క నిండి గౌరవి లాయిడు.

ರವಿರಾಜ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಸುನಿತಾ ಕಿರೇಕ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಇಮ್ರಾನ್ ಬೇಗ್, ತಾಲ್ಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಯರದಕೆರೆ ವಿ.ರಾಜಪ್ಪ, ಎಸ್.ಎಸ್.ವೆಂಕಟೇಶ್, ನಿರೂಪಕಿ ರೂಪಾನಾಯ್ಕ ಇದ್ದರು.

About Author

Leave a Reply

Your email address will not be published. Required fields are marked *

You may have missed