AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಂಗನವಾಡಿ ನೌಕರರ ಸಂಘ ಮತ್ತು ಅಕ್ಷರ ದಾಸೋಹ ನೌಕರರ ಸಂಘ ಚಿಂಚೋಳಿ ವಿವಿಧ ಬೇಡಿಕೆಗಳು #avintvcom

1 min read
Featured Video Play Icon

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಅಂಬೇಡ್ಕರ್ ವೃತದಿಂದ ಬಸ್ ಡಿಪೂವರೆಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಅಕ್ಷರ ದಾಸೋಹ ನೌಕರರ ಸಂಘ ಚಿಂಚೋಳಿ ತಾಲೂಕ ಸಮಿತಿ ವತಿಯಿಂದ ಜಂಟಿಯಾಗಿ ವಿವಿಧ ಬೇಡಿಕೆಗಳು ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಶೇಟ್ಟಿ ಎಂಪಳ್ಳಿ ಮಾತನಾಡಿ ರೈತ ವಿರೋಧಿ ಕಾರ್ಮಿಕ ವಿರೋಧಿ ಶಾಸನಗಳು ಸಂಹಿತೆಗಳು ಸುಗ್ರೀವಾಜ್ಞೆ ಕೈ ಬೀಡಬೇಕು.
ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಪ್ರತಿ ಕುಟುಂಬಕ್ಕೆ 7500 ನೀಡಬೇಕು ನೇರ ನಗದು ವರ್ಗಾವಣೆ ತಲಾ 10ಕೆಜಿ ಉಚಿತ ಪಡಿತರ ನೀಡಬೇಕು.
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಖಾತ್ರಿ ಪಿಂಚಣಿ ಜಾರಿಗೆ ಮಾಡಬೇಕು. ವಿಧ್ಯುತ್ ದರ ಏರಿಕೆ ತಡೆಯಬೇಕು.ರಾಜ್ಯದ ಜಿಎಸ್ಟಿ ಹಣ ರಾಜ್ಯಕ್ಕೆ ಪರಿಹಾರಕ್ಕಾಗಿ ನೀಡಬೇಕು.ಅತಿವೃಷ್ಟಿಯಿಂದ ಹಾನಿಯಾದ ಬೆಳೆ ಪರಿಹಾರ ಪ್ರತಿ ಎಕರೆಗೆ 25000ರೂ ನೀಡಬೇಕು.ಅತಿವೃಷ್ಟಿ ಯಿಂದ ಪ್ರವಾಹ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ನೀಡಬೇಕು.ಕಬ್ಬು ಬೇಳೆಗಾರರಿಗೆ ಪ್ರತಿ ಟನ್ 5000ರೂ ನೀಡಬೇಕು ಎಂದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಸೌಭಾಗ್ಯಮ ಮಠಪತಿ ಮಾತನಾಡಿ ಅಂಗನವಾಡಿ ನೌಕರರಿಗೆ 21000ರೂ ಹೆಚ್ಚಿಸಬೇಕು.ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರ ರಕ್ಷಿಸಬೇಕು.ಅಂಗನವಾಡಿ ಕೇಂದ್ರಗಳಲ್ಲಿಯೆ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿ ಹೆಚ್ಚುವರಿ ಕೆಲಸ ನಿರ್ಭಂದಿಸಬೇಕು.ಈಗಾಗಲೇ ನಿವೃತ್ತಿಯಾದವರಿಗೆ ನಿವೃತ್ತಿ ವೇತನ ಬೀಡುಗಡೆ ಮಾಡಬೇಕು .
ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಮಾಡಬೇಕು ಎಂದರು.
ತದನಂತರ ಅಕ್ಷರ ದಾಸೊಹ ನೌಕರರ ಸಂಘದ ಕಾರ್ಯದರ್ಶಿಯಾದ ವಿಜಯಲಕ್ಷ್ಮಿ ಮಾತನಾಡಿ ಬಿಸಿಊಟ ಸಮಸ್ಯೆಗಳು ಸಮಸ್ಯೆಯಾಗೆ ಉಳಿದಿವೆ ನಮ್ಮ ಸಮಸ್ಯೆಗಳು ಸರಕಾರಕ್ಕೆ ತಲುಪಿಸಿದರು ಯಾವದೆ ರಿತಿಯ ಸಮಸ್ಯೆ ಬಗೆಹರಿಸಿತ್ತಿಲ್ಲಾ ಬಿಸಿಊಟದ ಮಹಿಳೆಯರು ಬೆಳಗ್ಗೆ 10:00ಗಂಟೆಗೆ ಶಾಲೆಗೆ ಬಂದು ಅಡುಗೆ ಜೊತೆ ಶಾಲೆಯಲ್ಲಿನ ಬೆಳೆದ ಹುಲ್ಲು ಕಿಳುವದು ಕಸ ಹೊಡೆಯುವದು ಚಹಾ ತರುವದು ಇನ್ನಿತರರ ಕೆಲಸಗಳನ್ನು ನಮ್ಮಗೆ ಹಚ್ಚುತ್ತಾರೆ ಜೊತೆಗೆ ಶಿಕ್ಷಕರಿಗೂ ನಾವೆ ಅಡುಗೆ ಮಾಡಿ ಕೊಡಬೇಕು ಇನ್ನೂ ಎಪ್ರಿಲ್ ಮೇ ಮತ್ತು ಮಾರ್ಚ ತಿಂಗಳಿನ ಯಾವದೆ ಸಂಬಳವಿಲ್ಲಾ ಎಂದು ತಮ್ಮ ಅಳಲನ್ನು ತೊಡಿಕೊಂಡು ನಮ್ಮ ಬೆಡಿಕೆ ಇಡೆರದಿದ್ದರೆ ನಮ್ಮ ಹೊರಾಟ ಯಾವದೆ ಕಾರಣಕ್ಕೂ ನಿಲ್ಲಿಸುವುದಿಲ್ಲಾ ಎಂದು ಹೆಳಿದರು
ಈ ಸಂದರ್ಭದಲ್ಲಿ
ಶಾಂತಬಾಯಿ ಕಲ್ಲೂರ,ಹಣಮಂತರೆಡ್ಡಿ,ರತ್ನಾಬಾಯಿ ಉಡುಪಿ, ಮಹಾದೇವಿ, ಕಮಲಾಬಾಯಿ,ಜಾಫರಖಾನ,ಸಿದ್ದಲಿಂಗಯ್ಯ ಸ್ವಾಮಿ, ಇತರರು ಇದ್ದರು

About Author