ಶಶಿಕಲಾ ಜೊಲ್ಲೆ ಜಿ, ಯವರು ಮಾತನಾಡಿದರು.“ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಅಮೋಘ ಗೆಲುವು ಸಾಧಿಸಲಿದೆ” #avintvcom
1 min readಗದಗ
“ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಅಮೋಘ ಗೆಲುವು ಸಾಧಿಸಲಿದೆ”
ಇಂದು ಗದಗ ನಗರದಲ್ಲಿ, ಪಕ್ಷದ ವತಿಯಿಂದ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಸಭೆಯನ್ನು ಗಣ್ಯರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಮಟ್ಟದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಿ, ಹಳ್ಳಿಯಿಂದ ದಿಲ್ಲಿಯ ತನಕ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಈ ಸಮಾವೇಶದ ಉದ್ದೇಶವಾಗಿದೆ. ಜನಪರ ಪಕ್ಷವಾಗಿರುವ ಬಿಜೆಪಿಯ ಮೂಲಮಂತ್ರವೇ ಅಭಿವೃದ್ಧಿಯಾಗಿದೆ. ಹೀಗಾಗಿ ಉಳಿದೆಲ್ಲಾ ರಾಜಕೀಯ ಪಕ್ಷಗಳಿಗಿಂತ ಬಿಜೆಪಿ ಪಕ್ಷ ಭಿನ್ನವಾಗಿದ್ದು, ಜನರಿಗೆ ಪ್ರಾಮಾಣಿಕವಾಗಿ ಸರ್ಕಾರದ ಸೌಲಭ್ಯ ತಲುಪಿಸುವ ಏಕೈಕ ಪಕ್ಷವಾಗಿದೆ. ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಪ್ರಜೆಗಳ ಮನೆ ಬಾಗಿಲಿಗೆ ಮುಟ್ಟುತ್ತಿದೆ. ಇದರಿಂದ ರಾಜ್ಯದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಅಮೋಘ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆಂದು ಹೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ ಜಿ, ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಶ್ರೀ ಸಿ.ಸಿ.ಪಾಟೀಲ್ ಜಿ, ಕೃಷಿ ಸಚಿವರಾದ ಶ್ರೀ ಬಿ.ಸಿ ಪಾಟೀಲ್ ಜಿ, ಸಂಸದರಾದ ಶ್ರೀ ಶಿವಕುಮಾರ್ ಉದಾಸಿ ಜಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮೋಹನ್ ಮಾಳಶೆಟ್ಟಿ, ರಾಜ್ಯ ಯುವಮೋರ್ಚಾದ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಎಂ. ರಾಜೇಂದ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶದ ಸಂಯೋಜಕರಾದ ಶ್ರೀ ಸಿದ್ಧರಾಜು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಗಣ್ಯರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
गदग
पंचायत निवडणुकी देखील भाजपच जिंकणार
आज गदग शहरात पक्षाच्या वतीने आयोजित गाव-स्वराज परिषद बैठक मान्यवरांच्या नेतृतुवत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी वृक्षाला पाणी घालून उद्घाटन केले व कार्यक्रमास उद्देशून संबोधित केले.
गाव पातळीवर भाजपाला बळकट करणे आणि खेड्यातून पक्षाची सत्ता दिल्ली पर्यंत आणणे हा या परिषदेचा उद्देश आहे. सर्वसामान्य जनतेचा पक्ष असलेला भाजपाचा ध्येयच विकास करणे आहे. भाजपा पक्ष इतर सर्व राजकीय पक्षांपेक्षा वेगळा आहे आणि एकमेव असा पक्ष आहे जो लोकांपर्यंत सरकारी सुविधा देते. भाजपा सरकारचे लोकप्रिय योजना नागरिकांच्या दारापर्यंतपोहचत आहेत. राज्यात आगामी पंचायत निवडणुका ही भाजपा जिंकणार असा विश्वास व्यक्त केले.
यावेळी गृहमंत्री श्री बसवराज बोम्मायी जी, खाण व भूसंपादन मंत्री श्री सी.सी. पाटील जी , कृषिमंत्री श्री.बी.सी. पाटील जी, खासदार श्री शिवकुमार उदासी जी, प्रदेश भाजपा अध्यक्ष श्री मोहन माळशेट्टी, प्रदेश युवा मोर्चा अध्यक्ष डा. संदीप कुमार, प्रदेश भाजपा उपाध्यक्ष श्री एम.राजेंद्र, भाजपा सरचिटणीस आणि ग्रामस्वराज्य अधिवेशन समन्वयक श्री सिद्धराजु, प्रदेश पदाधिकारी, जिल्हा प्रधान कार्यदर्शी, मान्यवर, स्थानिक नेते आणि पक्षाचे कार्यकर्ते उपस्थित होते.


