AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮತ್ತೊಂದು ಗೋದ್ರಾ ದುರಂತ ನಡೆಯಬಹುದೆಂದು ಮಾಹಿತಿ ಸಿಕ್ಕಿದೆ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತನಿಖೆ ನಡೆಸುವಂತೆ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ.”

1 min read

ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮತ್ತೊಂದು ಗೋದ್ರಾ ದುರಂತ ನಡೆಯಬಹುದೆಂದು ಮಾಹಿತಿ ಸಿಕ್ಕಿದೆ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಯ ಬಗ್ಗೆ ಉಡುಪಿಯಲ್ಲಿ ದಿನಾಂಕ 03/1/2024ರ ಬುಧವಾರದಂದು ಪ್ರತಿಕ್ರಿಯಿಸಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ,ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಅನುಭವಿ ರಾಜಕಾರಣಿ ಹರಿಪ್ರಸಾದ್ ಮಾತಿನಂತೆ ಗೋದ್ರಾ ದುರಂತ ಮರುಕಳಿಸಿದರೆ ಅದಕ್ಕೆ ಶ್ರೀರಾಮ ಮಂದಿರ ನಿರ್ಮಾಣವನ್ನು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್‌ ನೇರ ಕಾರಣವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಕಿಡಿಕಾರಿದರು.

ರಾಮಮಂದಿರ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಾಗಿಲ್ಲ.ಸರಕಾರದ ನೇರ ಹಸ್ತಕ್ಷೇಪವೂ ಇಲ್ಲ. ಭಕ್ತರ ದೇಣಿಗೆಯಿಂದ ತಲೆ ಎತ್ತಿದೆ.ರಾಮಮಂದಿರ ಸಮಸ್ತ ಹಿಂದೂಗಳ ಮಂದಿರವಾಗಿದೆ.ಕೆಲವರು ರಾಜಕೀಯ ಕಾರಣಕ್ಕೆ ಬಿಜೆಪಿ ರಾಮಮಮಂದಿರವನ್ನು ಟೀಕಿಸುತ್ತಿದ್ದಾರೆ ಎಂದರು.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *