AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಮಖಂಡಿ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಮೀಶಿ ಅವರು ಅಧಿಕಾರವನ್ನು ಸ್ವೀಕರಿಸಿದರು.avintvcom

1 min read

ಸ್ಲಗ್,

ಜಮಖಂಡಿ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಮೀಶಿ ಅವರು ಅಧಿಕಾರವನ್ನು ಸ್ವೀಕರಿಸಿದರು.

 

ಆ್ಯಂಕರ,

ನಗರಸಭೆಯಲ್ಲಿ ನಡೆದ ನೂತನ ಅಧಿಕಾರವನ್ನು ಸ್ವಿಕರಿಸುವ ಮೊದಲು             ಶಾಸಕ ಆನಂದ ನ್ಯಾಮಗೌಡ ಅವರು ಅಧ್ಯಕ್ಷರ ಕೊಠಡಿಯನ್ನು ಉದ್ಘಾಟಿಸಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲಿಸಿ ಮತ್ತು ಮಹಾಲಕ್ಷ್ಮಿ ಪೋಟೋಗೆ ಹಾಗೂ ದಿ.ಸಿದ್ದು ನ್ಯಾಮಗೌಡರ ಪೋಟೋಗೆ ಪೂಜೆಯನ್ನು ಸಲಿಸಿದರು.

ಸಿದ್ದು ಮೀಶಿ ಅವರು ನೂತನ ಅಧ್ಯಕ್ಷರ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು. ದಿವಂಗತ ಸಿದ್ದು ನ್ಯಾಮಗೌಡರ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಹಾಗೂ ಶಾಸಕ ಆನಂದ ನ್ಯಾಮಗೌಡ ಅವರ ಮಾರ್ಗದರ್ಶನದಲ್ಲಿ ಜಮಖಂಡಿ ನಗರವನ್ನು ಅಭಿವೃದ್ಧಿ ಮಾಡುತ್ತೇನೆ. ಅವರು ಮಾಡಿದ ಅಭಿವೃದ್ಧಿ ಕಾರ್ಯದಿಂದ ನಗರಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಆಯ್ಕೆಯಾಗಿದ್ದಾರೆ. ಇನ್ನೂ ಜಮಖಂಡಿ ನಗರವನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸುತ್ತೇನೆ ಹಾಗೂ ನಾಗರಿಕರ ಸಹಕಾರವು ಸಹ ಮುಖ್ಯವಾಗಿದೆ ಎಂದರು.

ಉಪಾಧ್ಯಕ್ಷನಿ ಮಲ್ಲವ ಪಾಯಗೊಂಡ ಮಾತನಾಡಿ. ಶಾಸಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇನೆ ಎಂದರು.

ಸಂದರ್ಭದಲ್ಲಿ ಶಾಸಕ ಆನಂದ ನ್ಯಾಮಗೌಡ. ರುದ್ರಸ್ವಾಮಿ ಮಠದ ಸ್ವಾಮೀಜಿಗಳಾದ ಸಹಜಾನಂದ ಅವಧೂತರು. ಕೃಷ್ಣಾನಂದ ಅವಧೂತರು. ಜಕನೂರ ಮಠದ ಮಾಧುಲಿಂಗ ಶ್ರೀಗಳು ಹಾಗೂ ನೂತನವಾಗಿ ನಗಸಭೆಗೆ ಆಯ್ಕೆಕೊಂಡ  ಸದಸ್ಯರು  ಮತ್ತು ನಗರಸಭೆಯ ಅಧಿಕಾರಿಗಳು ಇದ್ದರು.

ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಸೇರಿ ಪಟ್ಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದ್ದರು.

About Author