AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಂಗನಕುಡಿಗೆ ಶಾಲೆ ಮಕ್ಕಳೊಂದಿಗೆ ಪೊಲೀಸ್ ರ ಸಂವಾದ.ರಸ್ತೆ ಸುರಕ್ಷತೆ ಗೆ ಮಕ್ಕಳು ಹೆಚ್ಚಿನ ಗಮನ ಹರಿಸಬೇಕು#avintvcom

1 min read
Featured Video Play Icon

……..ಕಳಸ…….

ಗಂಗನಕುಡಿಗೆ ಶಾಲೆ ಮಕ್ಕಳೊಂದಿಗೆ ಪೊಲೀಸ್ ರ ಸಂವಾದ.. . ರಸ್ತೆ ಸುರಕ್ಷತೆ ಗೆ ಮಕ್ಕಳು ಹೆಚ್ಚಿನ ಗಮನ ಹರಿಸಬೇಕು. ಶಾಲೆಗೆ ಬರುವಾಗ ಹಿಂದಿರುಗುವಾಗ ಸುರಕ್ಷಿತ ವಾಗಿ ಇರಬೇಕು ಎಂದು ಕಳಸ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಡಾ.ಸಿ. ಆರ್.ಮೋಹನ್ ಕುಮಾರ್ ತಿಳಿಸಿದರು. ಅವರು ಸೋಮುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಗಂಗನಕುಡಿಗೆ.ಶ್ರೀ ಗಂಧ ಪರಿಸರ ಸಂಘ ಹಮ್ಮಿ ಕೊಂಡಿದ್ದ ರಸ್ತೆ ಸುರಕ್ಷತೆಹಾಗೂ ಸಂರಕ್ಷಣೆ ಬಗ್ಗೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಪಠ್ಯ ಕ್ರಮ ಹೊರತು ಪಡಿಸಿ ಎಲ್ಲಾ ಕ್ಷೇತ್ರ ಗಳ ಪರಿಚಯ ಹಾಗೂ ಮಾದರಿ ವ್ಯಕ್ತಿಗಳೊಂದಿಗೆ ಬೆರತು ಉತ್ತಮ ನಾಗರೀಕ ರಾಗಲು ಪ್ರೇರೇಪಿಸುವ ಪ್ರೇರಣಾ ನುಡಿ ಮುತ್ತುಗಳನ್ನು ಹಾಡಿದರು. ಹಾಗೂ ಮಕ್ಕಳೊಂದಿಗೆ ರಸ್ತೆ ಸುರಕ್ಷತೆ. ಮಕ್ಕಳ ಹಕ್ಕುಗಳು. ಮದ್ಯ ವ್ಯಸನ. ಮೊಬೈಲ್. ಜೀವನ ಕ್ರಮ. ಶಾಲೆಯ ಆವರಣ ದಲ್ಲಿ ಅಸಬ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.. ಶಾಲೆಯ ಮುಖ್ಯ ಶಿಕ್ಷಕ. ಪಿ. ಆರ್. ಕುಮಾರ ಸ್ವಾಮಿ ಸ್ವಾಗತಿಸಿ. ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ಶಾಲೆ ಯಲ್ಲಿ ಸಂಪನ್ಮೂಲ ವ್ಯಕ್ತಿ ಗಳನ್ನು ಕರೆಸಿ ವಿದ್ಯರ್ಥಿ ಗಳಿಗೆ ಸಂಪೂರ್ಣ ರಸ್ತೆ ಸುರಕ್ಷತೆ. ಮತ್ತು ಜೀವನಾನುಕ್ರಮ ದ ಬಗ್ಗೆ ವಿಶೇಷ ವಾದ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ಮತ್ತು ವಿದ್ಯರ್ಥಿ ಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮ ದಲ್ಲಿ ಶಾಲಾ ಅಭಿರುದ್ದಿ ಸಮಿತಿ ಯ ಅಧ್ಯಕ್ಷ ರಾದ ಗೋಪಾಲ್ ಅಧ್ಯಕ್ಷತೆ ವಹಿಸಿ ಶುಭ ಕೋರಿದರು. ಶಿಕ್ಷಕಿರಾದ.ಶ್ರೀಮತಿ ಶಾಂತ . ಶ್ರೀಮತಿ ನಾಗರತ್ನಮ್ಮ. ಬಿಸಿ ಊಟ ಸಿಬ್ಬಂದಿ ಶ್ರೀಮತಿ ಭವ್ಯ. ಶ್ರೀಮತಿ ಸರಸ್ವತಿ. ಶಾಲಾ ಶಿಕ್ಷಕಿ ಶ್ರೀಮತಿ ಶಕುಂತಳ ವಂದಿಸಿದರು . ಕು!!ತೇಜಾ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿದರು ವಿದ್ಯರ್ಥಿಗಳಿಗೆ ಇಕೋ ಕ್ಲಬ್ ವತಿಯಿಂದ ಮಾಸ್ಕ್ ವಿತರಿಸಿದರು ಚಿತ್ರ ಕಲೆ ಸ್ಪರ್ಧೆ ಯಲ್ಲಿ ವಿಜೇತ ರಾದವರಿಗೆ ಪಾರಿತೋಷಕ ವಿತರಿಸಿದರು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author