AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಸನಾಳ ಕ್ಷೇತ್ರದ ಜನತೆಗಾಗಿ ಗ್ರಾಮ ಜ್ಯೋತಿ ಯೋಜನೆ ಉದ್ಘಾಟನೆ #avintvcom

1 min read
Featured Video Play Icon

ಕಸನಾಳ
ಕ್ಷೇತ್ರದ ಜನತೆಗಾಗಿ ಗ್ರಾಮ ಜ್ಯೋತಿ ಯೋಜನೆ ಉದ್ಘಾಟನೆ

ನಿಪ್ಪಾಣಿ ಮತಕ್ಷೇತ್ರದ ಕಸನಾಳ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಮಂಜೂರಾದ ಸುಮಾರು 5.40 ಲಕ್ಷ ರೂ.ವೆಚ್ಚದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಊರಿನ ಗಣ್ಯರು, ಜನಪ್ರತಿನಿಧಿಗಳು, ಮಹಿಳೆಯರು ಒಡಗೂಡಿ ಉದ್ಘಾಟಿಸಿದರು.

ಈ ಯೋಜನೆಯಿಂದ ಗ್ರಾಮದ ಶಿಂಧೆ, ಪಾಟೀಲ, ಕೋಕರೆ ತೋಟದ ಭಾಗಗಳ ಜನರಿಗೆ ಪ್ರಯೋಜನವಾಗಲಿದೆ. ಗ್ರಾಮ ಸುಂದರವಾಗಿದ್ದರೆ ದೇಶ ಅತ್ಯುತ್ತಮವಾಗಿರುತ್ತದೆ ಎಂಬ ಕನಸನ್ನು ಹೊತ್ತಿದ್ದ ಮಹಾನ್ ಚೇತನ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಕನಸನ್ನು ನನಸಾಗಿಸುವ ಸಲುವಾಗಿ, ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಯ ಉದ್ದೇಶ ಗ್ರಾಮೀಣ ಭಾಗಕ್ಕೆ ನಿರಂತರ ವಿದ್ಯುತ್ ಒದಗಿಸುವುದಾಗಿದೆ. ಈ ಯೋಜನೆಯನ್ನು ಸರ್ವರೂ ಸದುಪಯೋಗಪಡಿಸಿಕೊಂಡು, ಗ್ರಾಮೀಣ ಭಾಗಗಳಲ್ಲಿ ಗೃಹೋದ್ಯಮಗಳು ಅಭಿವೃದ್ಧಿಯ ಪಥದತ್ತ ಸಾಗಲಿ.

कसनाळ
मतदारसंघातील लोकांसाठी ग्राम ज्योती प्रकल्पाचे उद्घाटन.

निपाणी मतदारसंघातील कसनाळ गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून मंजूर झालेल्या सुमारे 5.40 लाख रुपयांचा निधीतून दीन दयाळ उपाध्याय ग्राम ज्योती प्रकल्पाचे उद्घाटन सोहळा मान्यवरांच्या हस्ते संपन्न झाला.

या योजनेपासून गावातील शिंदे, पाटील आणि कोकरे मळ्याच्या परिसरातील लोकांना उपयोग होणार आहे. गाव सुंदर असेल तर देश चांगले राहील, अशी स्वप्ने पाहणारे महान चेतन पंडित दीनयाळ उपाध्याय यांचे स्वप्न साकार करण्यासाठी केंद्र सरकारने राबविलेल्या या प्रकल्पाचा हेतू ग्रामीण भागाला शाश्वत वीज पुरविणे आहे. या प्रकल्पाचा सर्वांनी उपयोग करून घेऊन, ग्रामीण भागात ग्रहोध्योग वाढवावा.

About Author