AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. avintv.com

1 min read
Featured Video Play Icon

ಗ್:- ಪ್ರತಿಭಾ ಪುರಸ್ಕಾರ ಸ್ಥಳ:- ನಿಡಗುಂದಾ  ವರದಿ:- ಶಿವಕುಮಾರ್ ತಳವಾರ (ಕಲಬುರಗಿ)ಚಿಂಚೋಳಿ ತಾ.ವರದಿಗಾರರು

ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದ ಎಸ್.ಟಿ. ಭವನ ಸರಕಾರಿ ಅಸ್ಪತ್ರೆಯಲ್ಲಿ ಕರ್ನಾಟಕ ಮಾದಿಗರ ಸಂಘ(ರಿ) ಜಿಲ್ಲಾ ಸಮಿತಿ, ಕಲಬುರಗಿ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹೌದು

ಈ ಒಂದು  ಕಾರ್ಯಕ್ರಮಕ್ಕೆ ದಿವ್ಯಸಾನಿಧ್ಯ ವಹಿಸಿದ ಪರಮಪೂಜ್ಯ ಶ್ರೀ. ಕರುಣೇಶ್ವರ ಸ್ವಾಮಿಗಳು ಹಾಗೂ ಸೇಡಂ ಶಾಸಕರು ಮತ್ತು ಈಶಾನ್ಯ ಕ.ಸಾ.ರ.ಸಂ. ಕಲಬುರಗಿ ಅಧ್ಯಕ್ಷರಾದ ರಾಜಕುಮಾರ ಪಾಟೀಲ್ ತೇಲ್ಕೂರ ರವರು ದಿಪ ಬೇಳಗುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸಾಲು ಹೂವಿನ ಹಾರ ಹೊದಿಸಿ ಕಂಚಿನ ಪದಕ ನಿಡಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ  ರಾಜಕುಮಾರ ಪಾಟೀಲ್ ತೇಲ್ಕೂರ್ ಮಾತನಾಡಿ, ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರಿಂದ, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮ ರಿತಿಯಲ್ಲಿ ವಿಧ್ಯಾಭ್ಯಾಸ ಮಾಡಿ ಶಾಲೆಗೆ ಸಮಾಜಕ್ಕೆ ಒಳ್ಳೆಯ ಕಿರ್ತಿ ತರಬೇಕು ಪ್ರತಿಭಾವಂತರಾಗಿ, ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಟ್ಟು ಮುಂದೆ ತಮ್ಮ ಭವಿಷ್ಯದಲ್ಲಿ ಡಾ. ಅಬ್ದುಲ್ ಕಲಾಂ ರವರಂತೆ ವಿಜ್ಞಾನಿಯಾಗಿ, ಸಮಾಜ ಸೇವಕರ ಜಿವನ ಚರಿತ್ರೆ ಅರಿತುಕೊಳ್ಳಬೇಕು ಉತ್ತಮ ಶಿಕ್ಷಕನಾಗಿ ಸಮಾಜದ ಸೇವೆ ಮಾಡಿ ತಮ್ಮ ಪೋಷಕರ ಹೆಸರುಯನ್ನು ಹೆಸರುವಾಸಿಯಾಗಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದರು.

ಅದೇ ರಿತಿ ಮಾದಿಗ ಸಮಾಜದ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಸುನೀಲ್ ಸಲಗರ್ ಮಾತನಾಡಿ ಈ ಒಂದು ಕಾರ್ಯಕ್ರಮ ನಡೆಸಿಕೊಡಲು ನಮ್ಮ ಸಮಾಜದ  ಕಿರಿಯರು ಹಾಗೂ ನಮ್ಮ ಎಲ್ಲಾ ಆಪ್ತ ಮಿತ್ರರು ಸಹಾಯ ಮಾಡಿದ್ದಾರೆ ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ರಿತಿಯಿಂದ ವಿಧ್ಯಭ್ಯಾಸ ಮಾಡಿ ಸಮಾಜದ ಕಿರ್ತಿ ತರಬೇಕು ಎಂದು ಹೆಳಿದರು

ಈ ಸಂದರ್ಭದಲ್ಲಿ  ಕಂಚಾಳಕುAಟಿ ನಂದಿ ಮಠದ ಕರುಣೇಶ್ವರ ಸ್ವಾಮಿಗಳು, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ಗೋಪಾಲರಾವ ಕಟ್ಟಿಮನಿ, ಸಾಹಿತಿಗಳಾದ ಜಿತುರೇಶಾ, ಜಿ.ಪಂ.ಸದಸ್ಯ ಶಿವಶರಣಪ್ಪ ಶಂಕರ, ಲಕ್ಷಿö್ಮÃನಾರಾಯಣ ಚಿಮ್ಮಚೋಡಕರ್, ದೇವಿಂದ್ರಪ್ಪ ಹೋಳ್ಕರ್, ಸುನೀಲ್ ಸಲಗರ್, ವಿಜಯಕುಮಾರ ಕೊರಡಂಪಳ್ಳಿ, ವಿನೋದ್ ಓಂಕಾರ, ಮುನ್ನಾ ಪಟೇಲ್, ಇತರರು ಪಾಲಗೊಂಡಿದ್ದರು

About Author