ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದ ಈಗಾಗಲೇ ಕ್ರಮ
1 min read
ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದ ಈಗಾಗಲೇ ಕ್ರಮ
ಮೂಡಿಗೆರೆ: ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದ ಈಗಾಗಲೇ ಕ್ರಮ ವಹಿಸಿದ್ದು, ಪಟ್ಟಣದಲ್ಲಿ ಅನೇಕ ಬದಲಾವಣೆ ತರಲು ಶ್ರಮಿಸುಲಾಗುತ್ತಿದೆ ಎಂದು ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಗೆಂಡೇಹಳ್ಳಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಆರ್‌ವಿ ಲ್ಯಾಂಡ್ರಿ ಮತ್ತು ಡ್ರೈಕ್ಲೀನ್ ಸರ್ವೀಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಸಂತೆ ಮೈಧಾನದಲ್ಲಿ ಶುಕ್ರವಾರ ನಡೆಯುವ ಸಂತೆಯಿಂದಾಗಿ ವಾಹನ ಸಂಚಾರ ಹಾಗೂ ಅಲ್ಲಿರುವ ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ರೀತಿಯಲ್ಲಿ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗೊಂಡು ರಸ್ತೆಯಲ್ಲಿ ಯಾವ ಮಾರುಕಟ್ಟೆ ಕೂಡ ಹಾಕದಂತೆ ಕ್ರಮ ವಹಿಸಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ನಮ್ಮ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಇ ಖಾತೆ ಮಾಡಿಕೊಡದ ಬಗ್ಗೆ ಆರೋಪವಿತ್ತು. ಬಾಕಿ ಉಳಿದಿದ್ದ 149 ಇ ಖಾತೆಯನ್ನು ಶೀಘ್ರವಾಗಿ ವಿಲೆ ಮಾಡಲು ಕ್ರಮ ವಹಿಸಿದ್ದರಿಂದ ಇದೀಗ 30 ಅರ್ಜಿಗಳು ಮಾತ್ರ ಬಾಕಿ ಉಳಿದಿದೆ. ಇದನ್ನು ಈ ತಿಂಗಳ ಅಂತ್ಯದಲ್ಲಿ ಎಲೆ ಮಾಡಲಾಗುವುದು ಎಂದು ಹೇಳಿದರು.
ಪಟ್ಟಣದಲ್ಲಿ ಕಸ ಸಂಗ್ರಹಿಸಲು ಪ್ರತಿದಿನ
ಮನೆ ಮನೆಗೆ ಕಸ ಸಂಗ್ರಹಿಸುವ ಆಟೋಗಳು ಮನೆ ಬಾಗಿಲಿಗೆ ಹೋದರೂ ಕೋಳಿ ಮಾಂಸದಂಗಡಿ, ಮನೆ, ಅಂಗಡಿ ಹಾಗೂ ಹೊಟೇಲ್ ಮಾಲೀಕರು ರಸ್ತೆ ಬದಿಯಲ್ಲಿ ಕಸ ಬಿಸಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಕ್ರಮ ವಹಿಸಲಾಗಿದೆ. ಅಲ್ಲದೇ ಮೀನು, ಕುರಿ, ಕೋಳಿ ಮಾಂಸದಂಗಡಿಯನ್ನು ಒಂದೇ ಕಡೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದ ಅವರು, ಇಲ್ಲಿ ಸ್ಥಾಪನೆಗೊಂಡ ಲ್ಯಾಂಡ್ರಿ ಮತ್ತು ಡ್ರೈ ಕ್ಲೀನ್ ಸರ್ವೇಸ್‌ನಿಂದ ಪಟ್ಟಣದ ಜನತೆ, ಹಾಸ್ಟೆಲ್, ಹೋಮ್ ಸ್ಟೆಗಳಿಗೆ ಅನುಕೂಲವಾಗಲಿದೆ ಹೇಳಿದರು.
ಲ್ಯಾಂಡ್ರಿ ಮತ್ತು ಡ್ರೈ ಕ್ಲೀನ್ ಸರ್ವೀಸ್ ಮಾಲೀಕ ಪ್ರಕಾಶ್, ಪ್ರದೀಪ್, ರಂಜಿನಿ ಮತ್ತಿತರರಿದ್ದರು.