ನಗುವುದಕ್ಕೆ ನಗುವಿಸುವುದಕ್ಕೆ ದೊಡ್ಡ ವೇದಿಕೆ ಸಣ್ಣ ವೇದಿಕೆ ಎಂಬ ಬೇಧವಿಲ್ಲ
1 min read
ನಗುವುದಕ್ಕೆ ನಗುವಿಸುವುದಕ್ಕೆ ದೊಡ್ಡ ವೇದಿಕೆ ಸಣ್ಣ ವೇದಿಕೆ ಎಂಬ ಬೇಧವಿಲ್ಲ
ಚುಟುಕು ಕವಿ ಬಿಳಿಗಿರಿ ವಿಜ್ ಕುಮಾರ್
ದಿನಾಂಕ 21-03-2025 ರಂದು ಕಡೂರಿನ ಕಲ್ಲಾಪುರ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ನಗುವಿನೊಂದಿಗೆ ದಿನ ನಿತ್ಯದ ಜೀವನ , ಜನ ಸಾಮಾನ್ಯರ ಬದುಕಿಗೆ ಪೂರಕವಾಗಿ ಹಾಸ್ಯ ಹುರುಪನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಈ ನಿಟ್ಟಿನಲ್ಲಿ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಆಹ್ಲಾದಕರ ಭಾವನೆ ಮೂಡಿಸಿ ಪರೀಕ್ಷೆಯ ಭಯ ಮತ್ತು ಆತಂಕಗಳನ್ನು ಓಡಿಸಿ ಸಂತಸಮಯ ಕಲಿಕೆಗೆ ದಾರಿ ದೀಪವಾಗಲಿದೆ ಎಂದು ತಮ್ಮ ಹಾಸ್ಯದ ಉದಾಹರಣೆ ಮತ್ತು ಗಾಯನದ ಮೂಲಕ ಹೆಳಿದರು.
ಉದ್ಢಾಟನೆ ಮಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್ ನಾಯ್ಕ ರವರು ಮಾತನಾಡಿ ದೈನಂದಿನ ಜಂಜಾಟದಲ್ಲಿ ಹಾಸ್ಯ ಪ್ರಜ್ನೆ ಪ್ರಮುಖವಾಗಿರುತ್ತದೆ ಎಂದು ತಿಳಿಸಿದರು.
ಶಿಕ್ಷಕರು ಹಾಗೂ ಕರ್ನಾಟಕ ಜ್ನಾನ ವಿಜ್ನಾನ ಸಮಿತಿ ಜಿಲ್ಲಾಧ್ಯಕ್ರಾದ ಮುಗಳಿಕಟ್ಟೆ ಲೊಕೇಶ್ ರವರು ಮಾತನಾಡಿ ಮಕ್ಕಳ ಮನಸ್ಸನ ಕುರಿತು ಚುಟುಕು ಚುಟುಕಾಗಿ ಕುಟುಕುವಂತಹ ಹಾಸ್ಯ ಇಂದಿನ ಶಾಲಾ ಮಕ್ಕಳಿಗೆ ಮುತ್ತಿನ ಮಣಿಯ ಮಾಲೆಯಂತೆ ಒಂದೊಂದು ವಾಕ್ಯಗಳು ಸರಳ ಮತ್ತು ಜೀವನದ ಪ್ರಸಂಗಗಳನ್ನು ಬಿಂಬಿಸುತ್ತವೆ ಎಂದು ಹೇಳಿದರು. ಶಿಕ್ಷಕರಾದ ಮಹೇಂದ್ರ ಕುಮಾರ್ ನಿರೂಪಿಸಿದರು. ಶಾಲಾ ಮಕ್ಕಳಿಂದ ಪ್ರಾರ್ಥನೆ, ಹಿರಿಯ ಶಿಕ್ಷಕಿ ರತ್ನ , ರಘುವೀರ್ , ಅಶ್ವಿನಿ, ಉಪಸ್ಥಿತರಿದ್ದರು.