लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
23/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹನಿ ನೀರು ಕೂಡ ಅತ್ಯಮೂಲ್ಯ ವಿ ಪಿ ನಾರಾಯಣ್. ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಎಂಪೀಎಂ ಟ್ರಸ್ಟ್ ವತಿಯಿಂದ ವಿಶ್ವ ಜಲ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಮಾಡಲಾಗಿತ್ತು ಕಾರ್ಯಕ್ರಮದ ಉದ್ದೇಶ ಮತ್ತು ಕಾರ್ಯಕ್ರಮ ಮಹತ್ವವನ್ನ ಕುರಿತಂತೆ ಶ್ರೀಮತಿ ಭಾಗ್ಯನಾರಾಯಣ್ ರವರು ಪ್ರಾಸ್ತಾವಿಕ ನುಡಿಯ ಮೂಲಕ ವಿಎಂಪಿಎಂ ಟ್ರಸ್ಟ್ ಬೆಳೆದು ಬಂದ ಹಾದಿ ಮತ್ತು ಕಾರ್ಯಕ್ರಮಗಳ ಪ್ರಯೋಜನ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲಿ ವಿಶ್ವಜಲ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ವೆಂಕಟೇಶ್ ಉದ್ಘಾಟಿಸಿ ಮಾತನಾಡಿ ಕುಡಿಯುವ ನೀರು ಹಾಗೂ ಬೋರ್ವೆಲ್ ನೀರುಗಳಲ್ಲಿ ಇರುವಂತಹ ಫ್ಲೋರೈಡ್ ಅಂಶಗಳ ಬಗ್ಗೆ ಮತ್ತು ಶುದ್ಧ ಜಲ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ತಾವು ಪಡೆದುಕೊಂಡ ತರಬೇತಿಯ ಬಗ್ಗೆ ಸಾರ್ವಜನಿಕ ಉಪಯೋಗವಾಗುವಂತೆ ಮಾಹಿತಿಯನ್ನು ನೀಡಿದರು..

ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಕರ್ತವ್ಯ ನೀರಿನ ಸಂರಕ್ಷಣೆ ಮಾಡುವಂತೆ ನಾವು ಜಲಮೂಲಗಳನ್ನು ಹಾಗೂ ಹಳ್ಳ ಕೊಳ್ಳಲಗಳನ್ನು ಕೂಡ ಸಂರಕ್ಷಿಸಬೇಕು ಹಾಗೂ ಹಳ್ಳ ಕೊಳ್ಳಗಳಲ್ಲಿ ಕಸಗಳು ಹಾಗೂ ಅನವಶ್ಯಕ ವಸ್ತುಗಳನ್ನ ಹಾಕದಂತೆ ಜಾಗ್ರತೆ ವಹಿಸಬೇಕೆಂದು ಕೆಜಿಎಫ್ ಅಧ್ಯಕ್ಷರಾದ ಹಳಸೆ ಶಿವಣ್ಣರವರು ತಿಳಿಸಿದರು .ಹೇಮಾವತಿ ನದಿ ಮೂಲವನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ನದಿಯನ್ನು ನದಿಯ ಪುನಶ್ಚೇತನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ತಾಲೂಕು ಬೆಳೆಗಾರರ ಸಂಘ ಮೂಡಿಗೆರೆ ಅಧ್ಯಕ್ಷರಾದ ಬಾಲಕೃಷ್ಣರವರು ಮಾತನಾಡಿದರು. ಕಾರ್ಯಕ್ರಮ ದಲ್ಲಿ ವಿಶ್ವಜಲ ದಿನಾಚರಣೆ ಹಾಗೂ ವಿಶ್ವ ಜಲದ ಮಹತ್ವ ಮತ್ತು ಅಂತರ್ಜಲದ ನೀರಿನ ಕುಸಿತ ಮತ್ತು ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಉಷ್ಣತೆ ಬದಲಾವಣೆಗಳು ಇವುಗಳೆಲ್ಲ ವಿಷಯಗಳ ಕುರಿತಂತೆ ಮಾನವನ ಕರ್ತವ್ಯ ಮತ್ತು ನಿಷ್ಠೆ ನೀರಿನ ಸದ್ಬಳಕೆ ಮಾಡಿಕೊಳ್ಳುವಂತೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ನವೀನ್ ಆನೆದಿಬ್ಬ ವಿಶ್ವ ಜಲದ ಕುರಿತಂತೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪ್ರತಿಯೊಂದು ನದಿ ಒಡಲಿಗೆ ಮೋಟಾರ್ ಗಳನ್ನ ಅಳವಡಿಸಿ ನದಿ ನೀರನ್ನು ಬತ್ತಿಸಲಾಗುತ್ತಿದೆ ಒಂದೆಡೆ ಬೆಳೆಗಾರರಿಗೆ ನೀರುಣಿಸುವ ಅವಶ್ಯಕತೆಯಾಗಿದ್ದರೆ ಇನ್ನೊಂದೆಡೆ ನದಿ ನೀರು ಬತ್ತುತಿದೆ ಇವುಗಳಿಗೆಲ್ಲ ಕೃಷಿಕರೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಹಾಗೂ ನದಿಯನ್ನು ಉಳಿಸಿಕೊಂಡು ತಮ್ಮ ಬೆಳೆಯನ್ನು ಉಳಿಸಿಕೊಳ್ಳಬೇಕು ಎಂದು ಕರವೇ ತಾಲೂಕು ಅಧ್ಯಕ್ಷರಾದ ವಿನೋದ್ ಬಿದರಹಳ್ಳಿ ರವರು ತಿಳಿಸಿದರು ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಚಿಂತಕ ಎಂಎಸ್ ನಾಗರಾಜು ರಾಜ್ಯಾಧ್ಯಕ್ಷರು ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮೂಡಿಗೆರೆ ಮಾತನಾಡಿ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಮಾಡಲು ಪ್ರಯತ್ನಿಸುತ್ತಿದ್ದು ಕಾರ್ಯಕ್ರಮದಡಿಯಲ್ಲಿ ಹಲವಾರು ಕೈಗಳ ಶ್ರಮವಿರುತ್ತದೆ ಮತ್ತು ಕಾರ್ಯಕ್ರಮವನ್ನು ಮಾಡುವ ಉದ್ದೇಶ ಸಾರ್ವಜನಿಕರಿಗೆ ಅರಿವು ಮತ್ತು ಸಮಾಜದಲ್ಲಿ ಬದಲಾವಣೆಯನ್ನು ತರುವ ಉದ್ದೇಶದಿಂದ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಪ್ರತಿಯೊಂದು ಹನಿಯ ನೀರಿನಾ ಹಿಂದೆ ಅದರ ಮಹತ್ವವಿದ್ದು ಪ್ರತಿಯೊಂದು ಹನಿ ನೀರು ಉಳಿಸುವ ಪ್ರಯತ್ನವನ್ನ ಎಲ್ಲರೂ ಮಾಡಬೇಕು ಎಂದರು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಕ್ಷ್ಮಣ್ ಗೌಡ ಡಿಕೆ ಮಾತನಾಡಿ ಕನ್ನಡದ ನೆಲ ಜಲ ಮತ್ತು ಭಾಷೆಯನ್ನ ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ ಹಾಗೆಯೇ ಪ್ರತಿಯೊಬ್ಬರೂ ಕೂಡ ನೀರು ಪೋಲಾಗದಂತೆ ಮತ್ತು ನೀರು ಪೋಲಾಗುವುದನ್ನು ಕಂಡು ಬಂದಲ್ಲಿ ಅದನ್ನು ತಡೆಯುವಂತೆ ಕರೆ ನೀಡಿದರು ಕೃಷಿ ಚಿಂತಕ ಬಿಎಲ್ ಪ್ರಭಾಕರ್ ಮಾತನಾಡಿ ಇತರೆ ದೇಶಗಳಲ್ಲಿ ನೀರಿನ ವಿಚಾರವಾಗಿ ಯಾವುದೇ ರೀತಿಯ ಸಂಘರ್ಷಗಳಿಲ್ಲ ಭಾರತದಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದರು ಹಾಗೆ ವಿಶೇಷವಾಗಿ ನದಿ ನೀರು ಮತ್ತು ನೀರಿನ ಸಂರಕ್ಷಣೆ ಪರಿಸರ ಸಂರಕ್ಷಣೆ ಕುರಿತಂತೆ ಹಿರಿಯ ವಕೀಲರಾದ ವೆಂಕಟೇಶ ಬಿವಿರವರು ಪರಿಸರವನ್ನ ಉಳಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಆಗಿರುವಂತ ಕಾಯ್ದೆ ಕಾನೂನುಗಳ ಬಗ್ಗೆ ಮತ್ತು ಅವುಗಳನ್ನು ಯಾವ ಯಾವ ಹಂತದಲ್ಲಿ ನ್ಯಾಯಾಲಯ ಕ್ರಮ ಕೈಗೊಳ್ಳಲು ಸೂಚಿಸಿರುವ ಬಗ್ಗೆ ವಿವರವಾಗಿ ತಿಳಿಸಿದರು ಕಾರ್ಯಕ್ರಮದ ಕೇಂದ್ರಬಿಂದು ಮತ್ತು ಕಾರ್ಯಕ್ರಮದ ಉದ್ದೇಶವಾಗಿ ಪಟ್ಟಣ ಪಂಚಾಯಿತಿಯಲ್ಲಿ ನೀರು ಘಂಟಿಕರಿಗೆ ವಿ ಎಂಪೀಎಂ ಟ್ರಸ್ಟ್ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು

ಕಾರ್ಯಕ್ರಮವನ್ನು ಸುಚಿತ್ರ ಪ್ರಸನ್ನ ರವರು ನಿರೂಪಿಸಿದರು ಕಾರ್ಯಕ್ರಮದಲ್ಲಿ ಕಸಾಪ ಕಸಬಾ ಹೋಬಳಿ ಅಧ್ಯಕ್ಷರಾದ ರವಿ ಕುನ್ನಳ್ಳಿ. ಬಣಕಲ್ ಹೋಬಳಿ ಅಧ್ಯಕ್ಷರಾದ ಲೋಕೇಶ್ ಊರುಬಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರತ್ನಮ್ಮ ಬಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಹೊಸಕೆರೆ ರಮೇಶ್ ಸದಸ್ಯರಾದ ಹಂಝ.ಆಶಾ . ಕುರ್ಶಿದ್ ಬಾನು ಪ .ಪ. ಮುಖ್ಯ ಅಧಿಕಾರಿ ಕಲಾವತಿ ಸವಿತಾ ಸಮಾಜ ಮಹಿಳಾ ಅಧ್ಯಕ್ಷರಾದ ಕವಿತಾ ಲೋಕೇಶ್ ಸವಿತಾ ಸಮಾಜ ತಾಲ್ಲೂಕು ಅಧ್ಯಕ್ಷ ಮಹೇಶ್ ನಿವೃತ್ತ ಶಿಕ್ಷಕಿ ನಾಗರತ್ನ . ಇಂಚರ ರಾಜೇಶ್ ಬಾಲಕೃಷ್ಣ ರಘು ಇತರರು ಇದ್ದರು.

About Author

Leave a Reply

Your email address will not be published. Required fields are marked *

preload imagepreload image
21:12