लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೊಗದಷ್ಟು ಮುಗಿಯದ ಜ್ಞಾನದ ಶಿಖರ ಬಾ ಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ🌲..

1 min read

🌷ಅತ್ಹ್ಮಿಯ ನಾಗರೀಕ ಬಂಧುಗಳೇ 🌷

🌲ಮೊಗದಷ್ಟು ಮುಗಿಯದ ಜ್ಞಾನದ ಶಿಖರ ಬಾ ಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ🌲

ಭಾರತ ದೇಶದಲ್ಲಿ ಬಹಳಷ್ಟು ಸಮಾಜ ಸುಧಾರಕರು ಜನಿಸಿ ಅವರುಗಳೆಲ್ಲ ಈ ದೇಶದ ಅನೀತಿ ಅಧರ್ಮ ಮೂಢನಂಬಿಕೆ ಯಜ್ಞ ಯಾಗದಿಗಳ ಆರ್ಯ ವೈದಿಕರ ಕ್ರೂರ ಪದ್ದತಿಯ ವಿರುದ್ಧ ಹೋರಾಟ ಮಾಡಿ ಗತಿಸಿ ಹೋಗಿದ್ದಾರೆ ಅವರಲ್ಲಿ ಪ್ರಮುಖವಾಗಿ ಕ್ರಿ ಪೂ 500ರಲ್ಲಿಗೌತಮ ಬುದ್ದರು ಬಂಡಾಯ ಹೂಡಿ ತಮ್ಮ ನಿರ್ಮಲ ಪ್ರಜ್ಞೆ ಕರುಣೆ ಶೀಲಾ ದಿಂದ ಸಮಾಜದ ದಿಕ್ಕನೆ ಬದಲಾಹಿಸಿದರು ತದ ನಂತರ 12ನೇ ಶತಮಾನದಲ್ಲಿ ವಚನ ಚಳುವಳಿ ಹುಟ್ಟಿಕೊಂಡಿತು ಅದರ ನೇತೃತ್ವವನ್ನ ಜಗ ಜ್ಯೋತಿ ಬಸವಣ್ಣನವರು ವಹಿಸಿಕೊಂಡು ಅನುಭವ ಮಂಟಪ ಸ್ಥಾಪಿಸಿ ಅದರಲ್ಲಿ ಎಲ್ಲ ಜಾತಿಯವರನ್ನು ಸೇರಿಸಿ ಕೊಂಡು ಸಮಾಜ ಪರಿವರ್ತನೆ ಗೆ ಮುಂದಾದರು ಕ್ರೂರ ಮನುಸೃತಿಯ ಪರಿಣಾಮದಿಂದ ಈ ದೇಶದ ಮೂಲ ನಿವಾಸಿಗಳಾದ sc /st /obc ಸಮುದಾಯಗಳು ಆಸ್ತಿ ಅಧಿಕಾರ ಖಡ್ಗ ಶಿಕ್ಷಣ ನಿಷೇದದ ಪರಿಣಾಮವಾಗಿ ಬಡವರಾದರೂ ಬಲಹೀನರಾದರೂ ಊರ ಆಚೆ ಬದುಕುವಂತದಾರು 1851ರಲ್ಲಿ ಮಹಾರಾಷ್ಟ್ರದ ಮಹಾತ್ಮಾ ಜ್ಯೋತಿಭಾ ಪುಲೆ ಹೆಂಡತಿ ಸಾವಿತ್ರಿ ಬಾ ಪುಲೆ ದಂಪತಿಗಳು ಮೇಲ್ವರ್ಗದ ಹೆಣ್ಣು ಮಕ್ಕಳ್ಳನ್ನು ಒಳಗೊಂಡಂಗೆ ಶೂದ್ರ ಅತಿಶೂದ್ರ( sc/st /obc )ಗಳಿಗೆ ಶಾಲೆಯನ್ನು ತೆರೆದು ಶಿಕ್ಷಣದ ಕ್ರಾಂತಿಗೆ ನಾಂದಿ ಹಾಕಿದರು ಇದರ ಪರಿಣಾಮದಿಂದ ಮಹಾರಾಷ್ಟದ ಕೊಲ್ಲಪುರದ ಸಂಸ್ಥಾನದ ರಾಜ ಶಾಹುಮಹಾರಾಜ್ ರವರು ಉದ್ಯೋಗದಲ್ಲಿ ಇತರೆ ಹಿಂದುಳಿದವರಿಗೆ ಶೇ 50%ಮೀಸಲಾತಿ ಕೊಟ್ಟು ಉದ್ಯೋಗ ಕ್ರಾಂತಿ ಮುಕಾಂತರ ಮೀಸಲಾತಿ ಜನಕರಾದರು ಅದೇ ಕಾಲಘಟ್ಟದಲ್ಲಿ ಏಪ್ರಿಲ್ 14-1891ರಲ್ಲಿ ಪರಮ ಪೂಜ್ಯ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜನಿಸಿ ಪ್ರಾಥಮಿಕ ಪ್ರೌಢ ಶಿಕ್ಷಣ ಮುಗಿಸಿ ದೇಶ ವಿದೇಶಗಳಲ್ಲಿ ಹಲವಾರು ಪದವೀಗಳನ್ನು ಪಡೆದು ಭಾರತದಲ್ಲಿ ಹೆಚ್ಚು ಪದವೀಗಳನ್ನ ಪಡೆದ ಜ್ಞಾನಿಯಾಗಿ ಹೊರಹೋಮ್ಮಿದ್ದರು ಅದೇ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಜ್ಯೋತಿಬಾ ಪುಲೆ ಶಾಹು ಮಹಾರಾಜ್ ಪೆರಿಯಾರ್ ನಾರಾಯಣ ಗುರು ನಾಲ್ವಡಿ ಕೃಷ್ಣ ರಾಜ ಒಡೆಯರು ಸಮಾಜ ಪರಿವರ್ತನ ಚಳುವಳಿಯನ್ನು ಬಹಳ ಜೋರಾಗಿ ಮುನ್ನೆಡಿಸಿದ ಪರಿಣಾಮವಾಗಿ 1918ರಲ್ಲಿ ಸೌತು ಬರೋ ಆಯೋಗದ ಮುಂದೆ ಶೋಷಿತ ವರ್ಗಗಳಾದ sc/st/obc ಮತದಾನದ ಹಕ್ಕು ಸರ್ವರಿಗೂ ಶಿಕ್ಷಣ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಆಸ್ಪರ್ಶತೆ ನಿಷೇದ ಮುಂತಾದ ಬೇಡಿಕೆಗಳ್ಳನ್ನ ಸೌತು ಬರೋ ಆಯೋಗಕ್ಕೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮನವಿ ಮಾಡಿದರ ಕಾರಣದಿಂದ 1919ಕಾಯ್ದೆ ಯಲ್ಲಿ ಶಿಕ್ಷಣ ಪ್ರತ್ತೇಕ ಮತದಾನ ಪ್ರಾಂತಿಯ ಪ್ರತಿನಿಧಿ ಮಂಡಳಿಗೆ ಆಯ್ಕೆ ಯಾಗುವ ಅವಕಾಶ ಸಿಕ್ಕಿತು ಇದನೆಲ್ಲ ಸಮಾಜಕ್ಕೆ ತಿಳಿಸಲು ಜನವರಿ 31-1920ರಲ್ಲಿ ಮೂಕನಾಯಕ ಪತ್ರಿಕೆ ಶುರು ಮಾಡಿದರು ಶೋಷಿತ ವರ್ಗಗಳಿಗೆ ಶೋಷಿತ ವರ್ಗಗಳಿಗಾಗಿ ಒಂದು ಸಂಸ್ಥೆ ಜುಲೈ 20-1924ರಲ್ಲಿ ಬಹಿಸ್ಕೃತ ಹಿತಕಾರಿಣಿ ಸಭಾ ಸ್ಥಾಪಿಸಿದರು ಇದರಿಂದ ಸಾಮಾಜಿಕ ಮತ್ತು ರಾಜಕೀಯ ಸಮಾನತೆಯನ್ನು ಗಳಿಸುವ ಮೂಲಕ ಅವರ ಆರ್ಥಿಕ ಸುಧಾರಣೆಗೆ ಉತ್ತೇಜನಾ ನೀಡುವುದಾಗಿದೆ. ಮಾರ್ಚು 20-1927ರಲ್ಲಿ ಮಹಾರಾಷ್ಟದ ಮಹಾಡ್ ನ ಚೌಡರ ಕೆರೆಯಲ್ಲಿ ನೀರು ಮುಟ್ಟುವ ಚಳುವಳಿ ಮಾಡಿದರು, 1927ರಲ್ಲಿ ಬಹಿಸ್ಕೃತ ಬಾರತಪತ್ರಿಕೆ ಪ್ರಾರಂಭಿಸಿದ್ರು ಡಿಸೇಂಬರ್ 20-1927ರಲ್ಲಿ ಜೀವ ವಿರೋಧಿ ಮನುಸೃತಿ ಯನ್ನು ಸುಟ್ಟರು ಮಾರ್ಚು 30-1930ನಾಸಿಕ್ ನಾ ಕಲರಾಂ ದೇವಸ್ಥಾನ ಪ್ರವೇಶ ಚಳುವಳಿ ನಡೆಸಿದರು ಜನತಾ ಪತ್ರಿಕೆ ಪ್ರಾರಂಭಿಸಿದರು 1935ರ ಭಾರತ ಕಾಯ್ದೆ ಯಲ್ಲಿ ಶೋಷಿತರಿಗೆ ಮತದಾನದ ಹಕ್ಕು ಅಸ್ಪುರ್ಶತಾ ನಿಷೇದ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸಿಕ್ಕಿದ ಪರಿಣಾಮ 1936ರಲ್ಲಿ ಸ್ವತಂತ್ರಕಾರ್ಮಿಕ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ 17ಸ್ಥಾನಗಳಿಗೆ ಸ್ಪರ್ದಿಸಿ 15ರಲ್ಲಿ ಗೆದ್ದು ಉಳಿದಂತೆ ಕಾಂಗ್ರೆಸ್ ನವರು ಗೆದ್ದರು ಮತ್ತೆ ಮುಂದಿನ 1942ರಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ ಎಂಬ ರಾಜಕೀಯ ಪಕ್ಷ,ಅಷ್ಟರಲ್ಲಿ ಬ್ರಿಟಿಷರು ಬಾರತ ಬಿಟ್ಟು ಹೋಗಲು ತೀರ್ಮಾನಿಸಿದರಿಂದ ನೀವು ನಿಮಗಾಗಿ ಒಂದು ಸಂವಿಧಾನ ರಚನೆ ಮಾಡಿಕೊಳ್ಳಿ ಎಂದಾಗ 1946ರಲ್ಲಿ ಸಂವಿಧಾನ ರಚನಾ ಸಭೆಗೆ ಚುನಾವಣೆ ಬಾಂಬೆ ಕ್ಷೇತ್ರದಿಂದ ಬಾಬಾ ಸಾಹೇಬರು ಸ್ಪರ್ದಿಸಿ ಕಾಂಗ್ರೆಸ್ ನವರಿಂದ ಸೋಲನ್ನ ಅನುಭವಿಸುತಾರೆ ಮತ್ತೆ ಮುಸ್ಲಿಂ ಲೀಗಿನ ಸಹಾಯದಿಂದ ಮತ್ತೆ ಜೈಸೂರು ಕುನ್ನಾ ಕ್ಷೆತ್ರದಿನದ ನಿತ್ತು ಗೆಲ್ಲುತಾರೆ ಆದರೆ ಅವತ್ತಿನ ನೆಹರು ಸರ್ಕಾರ ಆ ಕ್ಷೆತ್ರವನ್ನ ಪೂರ್ವ ಪಾಕಿಸ್ಥಾನಕ್ಕೆ ಬಿಟ್ಟು ಕೊಟ್ಟಿದರ ಕಾರಣ ಅಂಬೇಡ್ಕರ್ ರವರುಸಂವಿಧಾನ ರಚನಾ ಸಮಿತಿಗೆ ಹೋಗುವ ಅವಕಾಶ ವಂಚಿತರಾಗುತಾರೆ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತೆ ಮತ್ತೆ ಬ್ರಿಟಿಷರ ಸಹಾಯದಿಂದ 1947ರಲ್ಲಿ ಪುನಾ ಕ್ಷೇತ್ರದಿಂದ ಗೆದ್ದು ಸಂವಿಧಾನ ರಚನಾ ಸಮಿತಿಗೆ ಹೋಗುವ ಅವಕಾಶ ಸಿಕ್ಕಿದ್ದರಿಂದ ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾದರು ಸಂವಿದಾನವನ್ನ 2ವರ್ಷ 11ತಿಂಗಳು 17ದಿನಒಟ್ಟು 165ದಿನಗಳಲ್ಲಿ ಬರೆದು ನವೆಂಬರ್ 26-1949ರಂದು ದೇಶದ ಅರ್ಪಿಸಿದರು ಸಂವಿದಾನದಲ್ಲಿ 396ಅನುಚ್ಚೆದಗಳು 8ಅನುಸುಚಿಗಳು ಇವೆ ಸಂವಿದಾನವನ್ನ ನಾಲ್ಕು ಕಂಬದ ಮೇಲೆ ನಿಲ್ಲಿಸಲಾಗಿದೆ ಸ್ವಾತಂತ್ರ್ಯ,ಸಮಾನತೆ, ನ್ಯಾಯ, ಮತ್ತು ಬ್ರಾತುತ್ವ,ಎಂಬ ಅಂಶಗಳನ್ನು ಒಳಗೊಂಡ ಸಂವಿದಾನ ಜನವರಿ 26-1950ರಂದು ಜಾರಿಯಾಯಿತು 2000ಸಾವಿರ ವರ್ಷಗಳ ಮನು ಧರ್ಮ ಶಾಸ್ರಕ್ಕೆ ತದ್ದುವಿರುದ್ಧವಾದ ಮಾನವತ ಸಂವಿದಾನವನ್ನ ದೇಶಕ್ಕೆ ಅರ್ಪಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಿಂದೆ ರಾಜ ರಾಣಿ ಹೊಟ್ಟೆಯಲ್ಲಿ ಹುಟ್ಟುತಿದ್ದ ಅದನ್ನ ಆಪರೇಷನ್ ಮಾಡಿದ್ದೇನೆ ಇವತ್ತಿನಿಂದ ರಾಜ ಮತದಾನದ ಬೂತು ಪೆಟ್ಟಿಗೆಯ ಮುಕಾಂತರ ಹುಟ್ಟುತಾರೆ ಎಂದು ಹೇಳಿದರು ಭಾರತವವನ್ನು ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ ವಾಯಿತು ಇದರ ಪರಿಣಾಮದಿಂದ ಮಹಿಳೆ ಅಡುಗೆ ಮನೆಗೆ ಸೀಮಿತ ವಾಗಿದ್ದವರು ಸಂವಿಧಾನದ ಬಲದಿಂದ ಪುರುಷ ನಷ್ಟೇ ಸರಿ ಸಮಾನವಾದ ಅಧಿಕಾರ ದುಡುಮೆಗೆ ಶಕ್ತಿ ತುಂಬಿದರು 2000ವರ್ಷದಿಂದ ಅಧಿಕಾರ ವಂಚಿತ ಸಮುದಾಯಗಳು ಆಸ್ತಿ ಅಧಿಕಾರ ಸಂಪತ್ತು ಶಿಕ್ಷಣ ಮೀಸಲಾತಿ ಪಡೆದು ಉನ್ನತ ಸ್ಥಾನಮಾನಕ್ಕೆ ಅವಕಾಶ ಸಂವಿಧಾನದಿಂದ ಅನುಕೂಲವಾಯಿತು 1955ರಲ್ಲಿ ಪ್ರಬುದ್ಧ ಭಾರತ ಪತ್ರಿಕೆ ಪ್ರಾರಂಭಿಸಿದರು 1956ರಲ್ಲಿ ಅಕ್ಟೊಬರ್ 14ರಂದು 5ಲಕ್ಸ ಅನುಯಾಯಿಗಲೋಟ್ಟಿಗೆ ಮಹಾರಾಷ್ಟ್ರದ ನಾಗಪುರದಲ್ಲಿ ಈ ನೆಲದ ದಮ್ಮವಾದ ಬೌದ್ದ ದಮ್ಮವನ್ನ ಸೇರಿದರು 1956ಡಿಸೇಂಬರ್ 5ರಂದು ಬುದ್ಧ ಮತ್ತು ಆತನ ದಮ್ಮ ವನ್ನು ಬರೆದು ಮುಗಿಸಿ 1956ಡಿಸೇಂಬರ್ 6ರಂದು ಲಕ್ಷ oತರಅನುಯಾಯಿಗಳನ್ನ ಬಿಟ್ಟು ಅಗಲಿದರು ಅಂಬೇಡ್ಕರ್ ರವರ ಪರಿಶ್ರಮದಿಂದ ಇಂದು ಭಾರತ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ದೇಶವಾಗಿದೆ ಹಾಗಾಗಿ ಬಾಬಾ ಸಾಹೇಬರನ್ನ ಪ್ರಜಾಪ್ರಭುತ್ವದ ಪಿತಾ ಮಹಾ ಮತ್ತು ಆದುನಿಕ ಭಾರತದ ನಿರ್ಮಾತೃ ಎಂದು ಕರೆಯೋಣ🙏🙏🙏🙏🙏
✍️………….
ಪಿ ಕೆ ಮಂಜುನಾಥ ಮೂಡಿಗೆರೆ
ಜೈಭೀಮ್, ಜೈ ಭಾರತು, ಜೈ ಸಂವಿದಾನ,

About Author

More Stories

Leave a Reply

Your email address will not be published. Required fields are marked *

You may have missed