ಏಪ್ರಿಲ್ 14 ರಿಂದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಸರ್ಕಾರ, ಸಂಘ ಸಂಸ್ಥೆಗಳು , ಹಲವಾರು ಜಾತಿ, ಧರ್ಮದ ವೇದಿಕೆಗಳಲ್ಲಿ ತಿಂಗಳು ಪೂರ್ತಿ ನಡೆಯುತ್ತದೆ…..
1 min read
ಏಪ್ರಿಲ್ 14 ರಿಂದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಸರ್ಕಾರ, ಸಂಘ ಸಂಸ್ಥೆಗಳು , ಹಲವಾರು ಜಾತಿ, ಧರ್ಮದ ವೇದಿಕೆಗಳಲ್ಲಿ ತಿಂಗಳು ಪೂರ್ತಿ ನಡೆಯುತ್ತದೆ. ವಿಶೇಷವೆಂದರೆ ಯಾವ ವ್ಯವಸ್ಥೆ ವಿರುದ್ಧ ಡಾ ಬಿ.ಆರ್. ಅಂಬೇಡ್ಕರ್ ಜೀವನ ಪರ್ಯಂತ ಹೋರಾಟ ನಡೆಸಿದರೊ, ಕಳೆದ ವರ್ಷ ಈ ದೇಶದ ಸಂವಿಧಾನ ಅಂಬೇಡ್ಕರ್ ಬರೆದಿಲ್ಲ. ಸಂವಿಧಾನವನ್ನು ಬದಲಾಯಿಸಬೇಕು ಎಂದು ಅಂಬೇಡ್ಕರ್ ವಿರುದ್ಧ ಅಪಕೀರ್ತಿ ಮಾಡಿದವರೇ ” ಸಂವಿಧಾನ ಸನ್ಮಾನ್ ಅಭಿಯಾನ ” ಕಾರ್ಯಕ್ರಮವನ್ನು ದೇಶದ ತುಂಬಾ ಹಮ್ಮಿಕೊಂಡು ನಿಜವಾದ ಅಂಬೇಡ್ಕರ್ ಅನುಯಾಯಿಗಳು ನಾವೇ ಹೊರೆತು ಕಾಂಗ್ರೆಸ್ ಅಥವಾ ಇತರ ಪಕ್ಷಗಳು ಅಲ್ಲ ಎಂದು ನಂಬಿಸಿ ಐತಿಹಾಸಿಕ ಅರ್ಧ ಸುಳ್ಳುಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇದು ತಾವು ಮಾಡಿದ ದ್ರೋಹವನ್ನು ಮರೆಮಾಚುವ ಕುತಂತ್ರವಾಗಿದೆ.
ಸ್ವತಂತ್ರ ಬಂದು ಹಲವಾರು ವರ್ಷಗಳವರೆಗೆ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಯಾವ ರಾಜಕೀಯ ಚುನಾವಣೆ ಸಂದರ್ಭದಲ್ಲಿ ಅಥವಾ ನಂತರವಾಗಲಿ ಪ್ರಸ್ತಾಪಿಸುತ್ತಿರಲಿಲ್ಲ. 70 ರ ದಶಕದ ನಂತರ ಕಮ್ಯುನಿಸ್ಟ್ ಹೋರಾಟದ ಪ್ರಭಾವದಿಂದ ಕೆಲವೊಂದಡೆ ದಲಿತ ಸಂಘಟನೆಗಳು ಹುಟ್ಟಿಕೊಂಡವು. ಅದೇ ರೀತಿ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಯಿತು. ರಾಜ್ಯಾದ್ಯಂತ ಹಳ್ಳಿ ಹಳ್ಳಿಯಲ್ಲಿ ಶೋಷಣೆಯ ವಿರುದ್ಧ ಬಹುದೊಡ್ಡ ಆಂದೋಲನಗಳು ನಡೆಸಿ, ಸಂಘಟಿತ ಹೋರಾಟಗಳ ಮೂಲಕ ಸರ್ಕಾರಕ್ಕೆ ಸಿಂಹ ಸ್ವಪ್ನವಾದ ಕಾಲಘಟ್ಟ. ಆದರೆ ಅಂಬೇಡ್ಕರ್ ಅವರ ಯಾವುದೇ ಸಾಹಿತ್ಯ ಬಂದಿರಲಿಲ್ಲ. 80ರ ದಶಕದ ಕೊನೆಯಲ್ಲಿ ಶರತ್ ಪವರ್ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಡಾ. ಬಿ. ಆರ್.ಅಂಬೇಡ್ಕರ್ ರವರ ಬರಹ ಮತ್ತು ಭಾಷಣಗಳ ಸಂಪುಟವನ್ನು ಸರ್ಕಾರದ ಪರವಾಗಿ ದೇಶದಲ್ಲಿ ಮೊಟ್ಟಮೊದಲಾಗಿ ಪ್ರಕಟಿಸಿದರು. ಮುಂದೆ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಪ್ರಾದೇಶಿಕ ಭಾಷೆಗಳಲ್ಲಿ ಸಂಪುಟಗಳನ್ನು ಪ್ರಕಟಿಸಿದವು. ಈ ರೀತಿಯಾಗಿ ಭಾರತದ ಎಲ್ಲರ ಕೈಗೆ ಅಂಬೇಡ್ಕರ್ ಅವರ ಸಾಹಿತ್ಯ ತಲುಪಿದೆವು. ಜೊತೆಗೆ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ,ಅವಕಾಶ ವಂಚಿತ ಸಮುದಾಯಗಳ ಮಾತ್ರವಲ್ಲ,ಮಹಿಳೆಯರು, ರೈತರು, ಕಾರ್ಮಿಕರು, ಎಲ್ಲಾ ವಿಭಾಗಗಳ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ಸಾಧ್ಯವಾಯಿತು.
1891 ರಿಂದ 1956 ರ ವರೆಗೆ 65 ವರ್ಷ ಜೀವಿತಅವಧಿಯನು ಎದುರಿಸಿ ಹಿಮ್ಮೆಟ್ಟಿಸಿ ಯುಗ ಪಲ್ಲಾಟ ಮಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ . ಆದರೆ ಇಂದು ಮಾನವ ಹಕ್ಕುಗಳು ದಮನಕಾರಿ ಹಂತದಲ್ಲಿರುವುದು ದೌರ್ಭಾಗ್ಯ ಸಂಗತಿ. ನಮ್ಮ ಆಹಾರ ಪದ್ಧತಿ, ನಮ್ಮ ಪ್ರತಿಯೊಂದು ಜೀವನಶೈಲಿ ಇನ್ನೊಬ್ಬರ ಆದೇಶದಂತೆ ಇರಬೇಕೆಂಬುದೇ ಮತಾಂತರ ಅಪೇಕ್ಷೆ. ಜಾತಿ ಧರ್ಮ ಹಾಗೂ ಜನಾಂಗೀಯ ಸಂಘರ್ಷ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ರಾರಾಜಿಸುತ್ತಿದೆ. ಆದರೆ ನಮ್ಮನ್ನು ಆಳುವವರ ಗುರಿ ಉದ್ದೇಶ ಒಂದೆ. ಸಂವಿಧಾನವನ್ನು ಬದಲಾಯಿಸಬೇಕು.ಸನಾತನ ಧರ್ಮ( ಹಿಂದೂ )ಸ್ಥಾಪಿಸಬೇಕು.
ಆದರೆ ಅಂಬೇಡ್ಕರ್ ಅನುಯಾಯಿಗಳು ಅವರ ಆಶಯಗಳಿಗೆ ತಕ್ಕಂತೆ ತತ್ವ ಸಿದ್ಧಾಂತವನು ತೂರಿ, ತಮ್ಮ ಸ್ವಾರ್ಥ,ಲಾಭ ಉದ್ದೇಶದಿಂದ ಮುಗ್ಧ ಜನರನ್ನು ಬಲಿ ಕೊಡಲು ಹೊರಟಿದ್ದಾರೆ. ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಮಹಿಳೆಯರ ಹಕ್ಕುಗಳು, ಕಾರ್ಮಿಕರ ಹಕ್ಕುಗಳು, ರೈತಾಪಿ ವರ್ಗದ ಕಾಯ್ದೆಗಳು, ನೀರಾವರಿ ಯೋಜನೆಗಳು, ಬ್ಯಾಂಕಿನ,ರೈಲ್ವೆ, ವಿಮೆ, ಆರೋಗ್ಯ ಈ ಎಲ್ಲಾ ಕ್ಷೇತ್ರಗಳಿಗ ಬರವಣಿಗೆ ಮೂಲಕ ತಮ್ಮ ಮಸೂದೆಗಳನ್ನು ಮಂಡಿಸಿ ಕಾರ್ಯಗತಗೊಳಿಸಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನ ಈಗಾಗಲೇ 106 ತಿದ್ದುಪಡಿಗಳನ್ನು ಕಂಡಿದ್ದು, ಅಂಬೇಡ್ಕರ್ ರವರ ವಿಚಾರಗಳನ್ನು ಬುಡಮೇಲು ಮಾಡಿ ಸನಾತನವಾದಿಗಳು ಅವರನ್ನು ದೈವೀಕರಣ ಮಾಡಲು ಹೊರಟಿರುವ ಈ ಸಂದರ್ಭದಲ್ಲಿ ಅವರ ಆದರ್ಶಗಳನ್ನು ಮತ್ತು ವಿಚಾರಧಾರೆಗಳನ್ನುಎಲ್ಲಾ ಹಳ್ಳಿಯ ಶೋಷಿತ ಮತ್ತು ದಮನಿತರಿಗೆ ಮನಮುಟ್ಟುವಂತೆ ಅರ್ಥೈಸಿ, ಮೊದಲು ನಾಯಕತ್ವ ವಹಿಸಿಕೊಳ್ಳುವವರು ವಿಚಾರಕ್ಕೆ ತಕ್ಕಂತೆ ಆಚರಣೆ ಮಾಡಿದ್ದಲ್ಲಿ ಅಂಬೇಡ್ಕರ್ ಅವರಿಗೆ ನಾವು ಕೊಡುವ ನಿಜವಾದ ಗೌರವ.
ಕೃಷ್ಣಪ್ಪ. ಕೆ.ಕೆ
TUCI ಕಾರ್ಮಿಕ ಸಂಘಟನೆ

