ಕಡೂರು ಪಟ್ಟಣದಲ್ಲಿ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ….
1 min read
ಕಡೂರು ಪಟ್ಟಣದಲ್ಲಿ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ
ಕಡೂರು: 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷೆ ಜಯಮ್ಮ ಅವರನ್ನು ಅಲಂಕೃತ ವಾಹನದ ಸಾರೋಟಿನಲ್ಲಿ ಪೂರ್ಣಕುಂಭ ಹೊತ್ತ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆ ಮಹಿಳೆಯರು ಭವ್ಯ ಮೆರವಣಿಗೆಯ ಮೂಲಕ ಶುಕ್ರವಾರ ಸಮ್ಮೇಳನದ ವೇದಿಕೆಯವರೆಗೆ ಕರೆತರಲಾಯಿತು.
ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಮ್ಮೇಳನಾಧ್ಯಕ್ಷೆ ಜಯಮ್ಮನವರು ಮೆರವಣಿಗೆಯಲ್ಲಿ ಅಲಂಕೃತಗೊಳಿಸಿದ್ದ ಸಾರೋಟಿನಲ್ಲಿ ಆಸೀನರಾಗಿಸಿ ಕಳಸ ತಾಲ್ಲೂಕಿನ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮುನ್ತಾಜ್ ಬೇಗಂ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಸಮ್ಮೇಳನಾಧ್ಯಕ್ಷರ ಅಲಂಕೃತ ಸಾರೋಟಿನಲ್ಲಿ ಜತೆಗೂಡಿದರು.
ಮೆರವಣಿಗೆಯು ಪಟ್ಟಣದ ಬಿ.ಎಚ್. ರಸ್ತೆಯ ಮೂಲಕ ಕೆ.ಎಲ್.ವಿ. ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಮಹಾದ್ವಾರದವರೆಗೆ ನಡೆಸಲಾಯಿತು. ಡೊಳ್ಳು, ವೀರಗಾಸೆ, ಗೊಂಬೆಮೇಳ ಕಲಾತಂಡಗಳು ಭಾಗವಹಿಸಿದ್ದವು. ಶಾಸಕ ಕೆ.ಎಸ್.ಆನಂದ್ ಅಂಬೇಡ್ಕರ್ ವೃತ್ತದ ಬಳಿ ಸಮ್ಮೇಳನಾಧ್ಯಕ್ಷೆ ಜಯಮ್ಮ ಅವರಿಗೆ ಗೌರವ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ತಾಲ್ಲೂಕಿನ ಪ್ರಾಥಮಿಕ ಕೇಂದ್ರದ
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮೆರವಣಿಗೆಯಲ್ಲಿ ಸಾಗಿದರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕನ್ನಡ ಕನ್ನಡಪರ ಘೋಷಣೆಗಳೊಂದಿಗೆ ಹೆಜ್ಜೆಹಾಕಿದರು. ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಅವಕಾಶ ಕಲ್ಪಿಸಿಕೊಟ್ಟರು. ಸಂಜೆ ಸಮ್ಮೇಳನದ ವೇದಿಕೆಯಲ್ಲಿ ಚಿಕ್ಕಮಗಳೂರಿನ ಪೂರ್ವಿ ಸಂಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಕಾವ್ಯ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಮುನ್ನ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ದತ್ತಾತ್ರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಭಂಡಾರಿಶ್ರೀನಿವಾಸ್ ನಾಡಧ್ವಜಾರೋಹಣ
ಮಾಡಿದರೆ, ಕಸಾಪ ಜಿಲ್ಲಾಧ್ಯಕ್ಷ ಸೂ-ರಿಶ್ರೀನಿವಾಸ್ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯ ಅಧ್ಯಕ್ಷ ಆಸಂಧಿಕಲ್ಲೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಪರಮೇಶ್, ಸಿಡಿಪಿಒ ಶಿವಪ್ರಕಾಶ್, ಯರದಕೆರೆ ರಾಜಪ್ಪ, ಟಿ.ಡಿ. ಸತ್ಯನ್, ಮರುಗುದ್ದಿ ಮನು, ನಂಜುಂಡಸ್ವಾಮಿ, ಲತಾರಾಜಶೇಖರ್, ಸೈಯಾದ್ ಯಾಸೀನ್, ಗುರುರಾಜ್ ಹಾಲ್ಕಟ್, ಕೆ. ರೂಪನಾಯ್ಕ್ , P ಎಚ್.ಮಂಜುನಾಥ್, ಬಿ.ಶಿವಕುಮಾರ್, ಸಿಂಗಟಗೆರೆ ಸಿದ್ದಪ್ಪ, ಕೆ.ಜಿ.ಲೋಕೇಶ್ವರ್, ಮೋಹನ್ ಮಂಜುನಾಥ್ ಸೇರಿದಂತೆ ನಿವೃತ್ತ ನೌಕರರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಜಿಲ್ಲೆಯ ಕಸಾಪ ಘಟಕದ ಪದಾಧಿಕಾರಿಗಳು ಹಾಜರಿದ್ದರು.

