ನ್ಯಾಯಬೆಲೆ ಅಂಗಡಿ ಬೇರೆ ಕಟ್ಟಡಕ್ಕೆ ಸ್ಥಳಾಂತರಕ್ಕೆ ಆಗ್ರಹ ಪಡಿತರ ಹೊತ್ತು ಸಾಗುವಾಗ ಬಿದ್ದು ಗಾಯಗೊಂಡ ಮಹಿಳೆ
1 min read
ನ್ಯಾಯಬೆಲೆ ಅಂಗಡಿ ಬೇರೆ ಕಟ್ಟಡಕ್ಕೆ ಸ್ಥಳಾಂತರಕ್ಕೆ ಆಗ್ರಹ ನ್ಯಾಯಬೆಲೆ ಅಂಗಡಿ ಸಮೀಪ ವಾಹನ ಸಂಚಾರ ಇಲ್ಲದ ಹಿನ್ನಲೆ ಪಡಿತರ ಹೊತ್ತು ಸಾಗುವಾಗ ಬಿದ್ದು ಗಾಯಗೊಂಡ ಮಹಿಳೆ ತರುವೆ ಗ್ರಾ.ಪಂ ವ್ಯಾಪ್ತಿಯ ಕೊಟ್ಟಿಗೆಹಾರದಲ್ಲಿರುವ ನ್ಯಾಯಬೆಲೆ ಅಂಗಡಿ ಕಟ್ಟಡವನ್ನು ಸ್ಥಳಾಂತರಿಸಬೇಕು ಎಂದು ಕೊಟ್ಟಿಗೆಹಾರz ಪ್ರೆಂಡ್ಸ್ ಆಟೋ ಸಂಘ ಮತ್ತುÀ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರೆಂಡ್ಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ ಕೊಟ್ಟಿಗೆಹಾರದ ಖಾಸಗಿ ವ್ಯಕ್ತಿಯೊಬ್ಬರ ಕಟ್ಟಡದಲ್ಲಿ ನ್ಯಾಯಬೆಲೆ ಅಂಗಡಿ ಇದ್ದು ಪಡಿತರ ಪಡೆಯಲು ಬರುವ ಪಡಿತರದಾರರು ಪಡಿತರವನ್ನು ಮನೆಗೆ ಕೊಂಡೊಯ್ಯಲು ಆಟೋ ಸೇರಿದಂತೆ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿ ಸಮೀಪ ಆಟೋ ಹೋಗಲು ಅವಕಾಶ ಇಲ್ಲ. ಇದರಿಂದಾಗಿ ಪಡಿತರದಾರರು ಮುಖ್ಯರಸ್ತೆಯವರೆಗೆ ಪಡಿತರವನ್ನು ಹೊತ್ತುಕೊಂಡೆ ಬರಬೇಕಾಗಿದೆ. ಆದ್ದರಿಂದ ಈ ನ್ಯಾಯಬೆಲೆ ಅಂಗಡಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರೆಂಡ್ಸ್ ಆಟೋ ಸಂಘದ ಸದಸ್ಯ ದೇವೇಂದ್ರ ಮಾತನಾಡಿ ನ್ಯಾಯಬೆಲೆ ಅಂಗಡಿಯ ಬಳಿ ಬಾಡಿಗೆ ವಾಹನಗಳು ಹೋಗಲು ಅವಕಾಶ ಇಲ್ಲದೆ ಇರುವುದರಿಂದ ಗುರುವಾರ ದ್ಯಾವನಗೂಲಿನ ಮಹಿಳೆಯೊಬ್ಬರು ಪಡಿತರ ಹೊತ್ತುಕೊಂಡು ಮೆಟ್ಟಿಲನ್ನು ಇಳಿಯುವಾಗ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹಲವು ದಿನಗಳ ಹಿಂದೆ ಆಜಾದ್ನಗರದ ಮಹಿಳೆಯೊಬ್ಬರು ಬಿದ್ದಿದ್ದರು. ಆದ್ದರಿಂದ ಬೇರೆ ಕಟ್ಟಡಕ್ಕೆ ಕೊಟ್ಟಿಗೆಹಾರದ ನ್ಯಾಯಬೆಲೆ ಅಂಗಡಿಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಣಕಲ್ ಸಹಕಾರ ಸಂಘದ ಕಾರ್ಯ ನಿರ್ವಾಹಣಾಧಿಕಾರಿ ನಿಶಾಂತ್, ಈ ಬಗ್ಗೆ ಕೊಟ್ಟಿಗೆಹಾರದ ನ್ಯಾಯಬೆಲೆ ಅಂಗಡಿಗೆ ಸಹಕಾರ ಸಂಘದ ಅಧ್ಯಕ್ಷರೊಡನೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ‘ಸಾರ್ವಜನಿಕರಿಂದ ನ್ಯಾಯಬೆಲೆ ಅಂಗಡಿ ಸ್ಥಳಾಂತರದ ದೂರು ಬಂದರೆ ಬೇರೆಡೆಗೆ ಕಟ್ಟಡ ಸ್ಥಳಾಂತರಿಸುವ ಬಗ್ಗೆ ಚಿಂತಿಸಿ ಕ್ರಮ ಕೈಗೊಳ್ಳಲಾಗುವುದು’ -ಇಂದ್ರೇಶ್, ಆಹಾರ ನಿರೀಕ್ಷಕರು, ಮೂಡಿಗೆರೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. ಅವಿನ್ ಟಿವಿ.


