लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
21/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“”ಅವಿನ್ ಟಿವಿ ಸುದ್ದಿ ಜಾಲ””ಹುಟ್ಟೂರಲ್ಲಿ ಸಂಭ್ರಮ..

*ಮಣಿಪುರ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ ಎಂ ಸಂದೀಪ್ ಬೆಟ್ಟಗೆರೆ ಆಯ್ಕೆ.*
ಮುಂಬರುವ ಮಣಿಪುರ ರಾಜ್ಯದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ ಎಂ ಸಂದೀಪ್ ಬೆಟ್ಟಗೆರೆ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ, ಜೊತೆಯಲ್ಲಿ ತೆಲಂಗಾಣ ರಾಜ್ಯದ ನೂತನ ಎಐಸಿಸಿ ಸ್ವತಂತ್ರ ಉಸ್ತುವಾರಿಯಾಗಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಕಳೆದ 26 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿರುವ ಬಿ ಎಂ ಸಂದೀಪ್ ಚಿಕ್ಕಮಗಳೂರು ನಗರ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ 2009 ರಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ನಲ್ಲಿ ಜವಾಬ್ದಾರಿ ತೆಗೆದುಕೊಂಡು ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸಿರುತ್ತಾರೆ, ತಮ್ಮ ಸಕ್ರಿಯ ರಾಜಕಾರಣದಿಂದ ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯದರ್ಶಿಯಾಗಿ, ಚುನಾವಣಾ ಉಸ್ತುವಾರಿಯಾಗಿ ವಿವಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ, ಸುಮಾರು 20 ರಾಜ್ಯಗಳಲ್ಲಿ ಸೇವೆ ಸಲ್ಲಿಸಿರುವ ಬಿ ಎಂ ಸಂದೀಪ್‌ ಅವರ ಸೇವೆಯನ್ನು ಗುರುತಿಸಿರುವ ರಾಷ್ಟ್ರೀಯ ಕಾಂಗ್ರೇಸ್‌ ಹೈಕಮಾಂಡ್ ಮುಂದೆ ಸಂಘಟನೆಯನ್ನು ಬಲಪಡಿಸಲು ಮಣಿಪುರ ರಾಜ್ಯದ ಜವಾಬ್ದಾರಿಯನ್ನು ಬಿ ಎಂ ಸಂದೀಪ್ ಅವರ ಹೆಗಲಿಗೇರಿಸಿದೆ.
ಬಿ ಎಂ ಸಂದೀಪ್ ಅವರು ಮೂಲತಃ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದವರಾಗಿದ್ದು ಪ್ರಸ್ತುತ ಚಿಕ್ಕಮಗಳೂರಿನಲ್ಲಿ ನೆಲೆಸಿರುತ್ತಾರೆ. ಮುಂಬರುವ ಮಣಿಪುರ ರಾಜ್ಯದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಹಾಗೂ ತೆಲಂಗಾಣ ರಾಜ್ಯದ ನೂತನ ಎಐಸಿಸಿ ಉಸ್ತುವಾರಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಬಿ ಎಂ ಸಂದೀಪ್ ಅವರನ್ನು, ಬೆಟ್ಟಗೆರೆ ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಸಂಬಂಧಿಕರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

 

ವರದಿ…

ನೂತನ್.ಬಿ.ಜೆ…ಬೆಟ್ಟಗೆರೆ..

About Author

Leave a Reply

Your email address will not be published. Required fields are marked *