लाइव कैलेंडर

October 2026
M T W T F S S
 1234
567891011
12131415161718
19202122232425
262728293031  
01/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 30/09/2026 ರಂದು ಶ್ರೀ ಸಿ.ಬಿ. ಶಂಕರ್‌ ಚಿಕ್ಕಹಳ್ಳ ಮಾನ್ಯ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ……

1 min read

ದಿನಾಂಕ 30/09/2026 ರಂದು ಶ್ರೀ ಸಿ.ಬಿ. ಶಂಕರ್‌ ಚಿಕ್ಕಹಳ್ಳ ಮಾನ್ಯ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ.
ಉಪಸ್ಥಿತಿ:
1. ಶ್ರೀ ಸಿ.ಬಿ. ಶಂಕರ್‌ ಚಿಕ್ಕಹಳ್ಳ ಮಾನ್ಯ ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
2. ಶ್ರೀಮತಿ ದಯಾವತಿ ಎಂ. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
3. ಶ್ರೀ ರಮೇಶ್‌ ಹೊಸಕೆರೆ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
4. ಶ್ರೀ ಅರುಣ್ ‌ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
5. ಶ್ರೀ ನಾರಾಯಣ ನಿಡಗೋಡು ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
6. ಶ್ರೀ ಗುರುವಪ್ಪ ಹಳ್ಳದಗಂಡಿ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
7. ಶ್ರೀ ಶ್ರೀನಿವಾಸ್‌ ಕುನ್ನಳ್ಳಿ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
8. ಶ್ರೀ ನವೀನ್‌ ಕೆಂಜಿಗೆ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
9. ಶ್ರೀ‌ ಭರತ್ ಬಿಳಗುಳ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
10. ಶ್ರೀಮತಿ ಜಯಮ್ಮ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
11. ಶ್ರೀಮತಿ ಜಯಶ್ರೀ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಚಿಕ್ಕಮಗಳೂರು
12. ಶ್ರೀ ಸುದೀಪ್‌, ಶಿಕ್ಷಕರು ಐ.ಟಿ.ಐ. ಕಾಲೇಜು ಮೂಡಿಗೆರೆ
13. ಶ್ರೀಮತಿ ನಯನ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
14. ಶ್ರೀ ಇಂದ್ರೇಶ್‌ ಶಿರಸ್ತೇದಾರ್‌ ಆಹಾರ ಇಲಾಖೆ
15. ಸಹಾಯಕ ಕಾರ್ಯಪಾಲಕ ಅಭಿಯಂತರರು ಮೆಸ್ಕಾಂ ಇಲಾಖೆ
16. ಶ್ರೀ ಮಂಜುನಾಥ್, ಸಂಚಾರ ನಿಯಂತ್ರಕರು ಕೆ.ಎಸ್.ಆರ್.ಟಿ.ಸಿ. ಮೂಡಿಗೆರೆ
17. ಭಾರತ್‌ ಜೋಡೋ ಯುವ ಸಂಘದ ಮೆಂಟರ್‌ ಗಳು ಮೂಡಿಗೆರೆ ತಾಲ್ಲೂಕು

ಸ್ವಾಗತ: ಶ್ರೀಮತಿ ದಯಾವತಿ ಎಂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಭಾರತ್‌ ಜೋಡೋ ಮೆಂಟರ್‌ ಗಳಿಗೆ ಸ್ವಾಗತ ಕೋರುತ್ತಾ, ಸಭೆಯನ್ನು ನಡೆಸಿಕೊಡುವಂತೆ ಮಾನ್ಯ ಅಧ್ಯಕ್ಷರನ್ನು ಕೋರಿದರು.
ಗೃಹಲಕ್ಷ್ಮಿ ಯೋಜನೆ:
ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 29191 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 26749 ಅರ್ಹ ಫಲಾನುಭವಿಗಳಾಗಿರುತ್ತಾರೆ. ಜೂನ್-2026 ಮಾಹೆಯಲ್ಲಿರೂ.53498000/- ಗೃಹಲಕ್ಷ್ಮೀ ಯೋಜನೆಯ ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ವಿವಿಧ ಕಾರಣಗಳಿಂದ ಗೃಹಲಕ್ಷ್ಮೀ ಯೋಜನೆಯಿಂದ ಹೊರಗೆ ಉಳಿದ NPCI-114, IT/GST-557, ತಿದ್ದುಪಡಿ/ಮರಣ-525, ಇ-ಕೆ.ವೈ.ಸಿ. ಬಾಕಿ 14, ಹೊಸ ಫಲಾನುಭವಿಗಳು 11, ಪಾವತಿಯಾಗದಿರುವ ಫಲಾನುಭವಿಗಳ ಸಂಖ್ಯೆ 1221 ಇರುತ್ತದೆ.
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದು, ಗೃಹಲಕ್ಷ್ಮೀ ಫಲಾನುಭವಿಗಳು ಪರಿಷ್ಕರಣೆ ಸಂದರ್ಭದಲ್ಲಿ ಅಗತ್ಯ ದಾಖಲಾತಿಗಳನ್ನು ಇಟ್ಟುಕೊಂಡು ಸಹಕರಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

ಗೃಹಜ್ಯೋತಿ ಯೋಜನೆ:
ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 25999 ಗೃಹಜ್ಯೋತಿ ಫಲಾನುಭವಿಗಳು ಇದ್ದು, 22337 ಫಲಾನುಭವಿಗಳಿಗೆ ಸರ್ಕಾರದಿಂದ ರೂ. 9786439/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡಲಾದ ಮೊತ್ತ ರೂ.44530/- ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್‌ ಗಿಂತ ಅಧಿಕ ವಿದ್ಯುತ್‌ ಬಳಸಿರುವ ಫಲಾನುಭವಿಗಳ ಸಂಖ್ಯೆ 3534 ಇದ್ದು, ರೂ.366582/- ಬಿಲ್‌ ಪಾವತಿಸಿಕೊಳ್ಳಲಾಗಿದೆ. ಗೃಹಜ್ಯೋತಿ ಪರಿಷ್ಕರಣೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ 2644 ಬಾಕಿ ಇರುವುದಾಗಿ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡಿರುವಂತೆ ಅಂಗನವಾಡಿಗಳಿಗೂ ಸಹ ಉಚಿತ ವಿದ್ಯುತ್‌ ನೀಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

 

 

ಅನ್ನಭಾಗ್ಯ ಯೋಜನೆ:
ಆಹಾರ ಶಿರಸ್ತೇದಾರರು ಸಭೆಗೆ ಅನ್ನ ಭಾಗ್ಯ ಯೋಜನೆಯ ಪ್ರಗತಿ ವರದಿ ಮಂಡಿಸಿದರು. ಸೆಪ್ಟೆಂಬರ್‌-2026 ರ ಮಾಹೆಯಲ್ಲಿ 20249 ಬಿ.ಪಿ.ಎಲ್. ಪಡಿತರ ಚೀಟಿಗೆ 2545 ಕ್ವಿಂಟಾಲ್‌ ಅಕ್ಕಿ ವಿತರಿಸಿದ್ದು, ಮೊತ್ತ ರೂ.5904400 ಆಗಿರುತ್ತದೆ. ಅಕ್ಟೋಬರ್‌ ಮಾಹೆಯಿಂದ ರಾಗಿ ವಿತರಣೆ ಮಾಡುತ್ತಿದ್ದು, ಪ್ರತಿ 10 ಕೆ.ಜಿ. ಅಕ್ಕಿಗೆ ಬದಲಾಗಿ 7 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ರಾಗಿ ವಿತರಿಸುವುದಾಗಿ ಸಭೆಯಲ್ಲಿ ಮಾಹಿತಿ ನೀಡಿದರು.
ಅಕ್ಟೋಬರ್‌ 20 EKYC ಮಾಡಿಸಲು ಕೊನೆಯ ದಿನಾಂಕವಾಗಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ EKYC ಮಾಡುತ್ತಿದ್ದು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳು EKYC ಮಾಡಿಸುವಂತೆ ಮಾಹಿತಿ ನೀಡಲು ಮಾನ್ಯ ಅಧ್ಯಕ್ಷರು ಸೂಚಿಸಿದರು.
ಮೂಡಿಗೆರೆ ತಾಲ್ಲೂಕು ಮಲೆನಾಡು ಪ್ರದೇಶವಾಗಿದ್ದು, ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣ ಕೂಲಿ ಕಾರ್ಮಿಕರು ಹಳೆಯ 4 ಚಕ್ರದ ವಾಹನವನ್ನು ಖರೀದಿಸಿ ಎಲ್ಲರೂ ಒಟ್ಟಾಗಿ ಕೆಲಸಕ್ಕೆ ಹೋಗುವ ರೂಢಿಯನ್ನು ಬೆಳೆಸಿಕೊಂಡಿದ್ದು, 4 ಚಕ್ರ ವಾಹನ ಹೊಂದಿರುವವರ BPL ರೇಷನ್‌ ಕಾರ್ಡ್‌ ರದ್ದುಪಡಿಸುವ ಬಗ್ಗೆ ಪ್ರಾಂತ್ಯವಾರು ಆದೇಶ ಹೊರಡಿಸಲು ಸರ್ಕಾರವನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಯುವನಿಧಿ ಯೋಜನೆ:
ಯುವನಿಧಿ ಯೋಜನೆಯಡಿ 533 ವಿಧ್ಯಾರ್ಥಿಗಳು ನೊಂದಣಿಯಾಗಿದ್ದು, ಈವರೆಗೂ ಪದವಿ ವಿಭಾಗದಲ್ಲಿ 4958 ಹಾಗೂ ಡಿಪ್ಲೊಮೋ ವಿಭಾಗದಲ್ಲಿ 60 ವಿಧ್ಯಾರ್ಥಿಗಳು ನೊಂದಣಿಯಾಗಿರುತ್ತಾರೆ. ಆಗಸ್ಟ್-2026 ರ ಮಾಹೆಯವರೆಗೆ ಸರ್ಕಾರದಿಂದ ಒಟ್ಟು ರೂ.14964000/- ಅನುದಾನ ಬಿಡುಗಡೆಯಾಗಿರುತ್ತದೆ.

ಶಕ್ತಿ ಯೋಜನೆ:
ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಆಗಸ್ಟ್-2026 ರ ಮಾಹೆಯಲ್ಲಿ ಪ್ರಸ್ತುತ 380229 ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸಿದ್ದು, ರೂ.18988061/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು. ಹಾಗೂ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಶಕ್ತಿ ಯೋಜನೆಯಡಿ ಪ್ರಯಾಣ ದರ ರೂ. 666596889/- ಆಗಿರುತ್ತದೆ.
ಬಾಳೂರಿನಿಂದ ಮೂಡಿಗೆರೆಯ ಬಟ್ಟೆ ಅಂಗಡಿಗಳಲ್ಲಿ ಕೆಲಸಕ್ಕಾಗಿ ಬರುವ ಮಹಿಳೆಯರು ಮೂಡಿಗೆರೆಯಿಂದ ಬಾಳೂರಿಗೆ 4-00 ಗಂಟೆಗೆ ಬಸ್‌ ಇದ್ದು, ನಂತರ ಬಸ್‌ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಸಂಜೆ 6-00 ಗಂಟೆಗೆ ಕೊಟ್ಟಿಗೆಹಾರಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಿದ್ದಲ್ಲಿ ತುಂಬಾ ಅನುಕೂಲವಾಗಲಿದ್ದು, ಬಸ್‌ ವ್ಯವಸ್ಥೆ ಮಾಡುವಂತೆ ಕೋರಿರುವುದಾಗಿ ಮಾನ್ಯ ಅಧ್ಯಕ್ಷರು ಸಭೆಯಲ್ಲಿ ತಿಳಿಸುತ್ತಾ, ಇಲಾಖಾಧಿಕಾರಿಗಳಿಗೆ ಬಸ್‌ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಇತರೆ ವಿಷಯಗಳು:
ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡುತ್ತಾ ಸರ್ಕಾರದ ಸೂಚನೆಯಂತೆ ಭಾರತ್‌ ಜೋಡೋ ಯುವ ಸಂಘ ರಚನೆಗಾಗಿ ಮೂಡಿಗೆರೆ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಲ್ಲಿ ಮೆಂಟರ್‌ ಗಳನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ಸಂಘಕ್ಕೆ ಸದಸ್ಯರುಗಳನ್ನು ನೊಂದಣಿ ಮಾಡಲಾಗಿರುತ್ತದೆ. ಸಂಘದಲ್ಲಿ ಕನಿಷ್ಠ 100 ರಿಂದ 150 ಸದಸ್ಯರನ್ನು ನೊಂದಣಿ ಮಾಡಲು ಅವಕಾಶವಿರುತ್ತದೆ. ಹಾಗೂ ಒಂದು ಸಂಘದಲ್ಲಿ 15 ಜನ ಸದಸ್ಯರುಗಳನ್ನೊಳಗೊಂಡಂತೆ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಬೇಕಾಗಿದ್ದು, ಈ ಸಮಿತಿಯಲ್ಲಿ 3 ಸದಸ್ಯರು ಪ.ಜಾತಿ/ಪ.ಪಂಗಡದವರಾಗಿರಬೇಕು 1 ಮಹಿಳಾ ಸದಸ್ಯರು ಕಡ್ಡಾಯ. 4 ಸದಸ್ಯರು ಓಬಿಸಿ ವರ್ಗದವರಾಗಿರಬೇಕು 1 ಮಹಿಳಾ ಸದಸ್ಯರು ಕಡ್ಡಾಯ. 8 ಸದಸ್ಯರು ಸಾಮಾನ್ಯ ವರ್ಗದವರಾಗಿರಬೇಕು 3 ಮಹಿಳಾ ಸದಸ್ಯರು ಕಡ್ಡಾಯವಾಗಿ ಇರಬೇಕು ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

 

ಅಧ್ಯಕ್ಷರು ಸದಸ್ಯ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ
ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

About Author

Leave a Reply

Your email address will not be published. Required fields are marked *

You may have missed