लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎’ಹೋರಾಟದ ಆಶಯ ಮರೆತರೆ ಕನ್ನಡಕ್ಕೆ ಅಪಾಯ
‎ಮೈಸೂರು: ಕರ್ನಾಟಕ ಏಕೀಕರಣ ಹೋರಾಟದ
‎ಆಶಯ ಮರೆತರೆ ಕನ್ನಡಕ್ಕೆ ಆಪಾಯ ಎಂದು
ಕರ್ನಾಟಕ ಸುಗಮ ಸಂಗೀತ ಪರಿಷತ್‌
ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಎಚ್ಚರಿಸಿದರು.
‎ಹೂಟಗಳ್ಳಿ ಕೆಎಚ್‌ಬಿ ಕಾಲೋನಿಯ ಶ್ರೀ
‎ಅನಂತೇಶ್ವರ ಭವನದಲ್ಲಿ ಕಾವ್ಯಶ್ರೀ ಚಾರಿಟಬಲ್
‎ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
‎ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್
ಇಂಟರ್‌ನ್ಯಾಷನಲ್, ಜಿ.ಎಸ್.ಹೈಟೆಕ್
ಸಲ್ಯೂಷನ್ಸ್ ಸಂಯುಕ್ತಾಶ್ರಯದಲ್ಲಿ ಭಾನು
ವಾರ ಏರ್ಪಡಿಸಿದ್ದ ‘ದ ಈವೆಂಟ್ ಆಫ್ ಸ್ಟಾರ್
‎ಆಫ್ ಕರ್ನಾಟಕ’ದ ಸರ್ವಾಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಮಾತನಾಡುವ
ಜನ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ
ಹೋಗಿದ್ದರು. ಅವರನ್ನೆಲ್ಲಾ ಒಗ್ಗೂಡಿಸಿದ್ದು
ಏಕೀಕರಣ ಚಳವಳಿ, ಭಾಷಾವಾರು ಪ್ರಾಂತ್ಯಗಳ
‎ರಚನೆಯ ಆಧಾರದ ಮೇಲೆ ಬೀದರ್‌ನಿಂದ
‎ಚಾಮರಾಜನಗರದವರೆಗೆ
‎ಕನ್ನಡಿಗರು
‎ಒಂದಾಗಿ ಬಾಳುತ್ತಿದ್ದಾರೆ. ಇದನ್ನು ಅರ್ಥ
‎ಮಾಡಿಕೊಳ್ಳಬೇಕು ಎಂದರು.
‎ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.
‎ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
‎ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್
‎ಕಾರ್ಯಕ್ರಮ ಉದ್ಘಾಟಿಸಿದರು. ಹುಬ್ಬಳ್ಳಿ
‎ಶ್ರೇಯಾ ಜನಸೇವಾ ಫೌಂಡೇಷನ್‌ ರಾಜ್ಯಾಧ್ಯಕ್ಷ
‎ವಿ.ಜಿ.ಪಾಟೀಲ್, ಜಿಲ್ಲಾ ಕಸಾಪ ಉಪಾಧ್ಯಕ್ಷ
‎ಟಿ.ತ್ಯಾಗರಾಜು, ಡಾ.ಪುನೀತ್ ರಾಜ್‌ ಕುಮಾರ್
‎ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಟಿ.
‎ಗೋವಿಂದರಾಜ್, ಬೆಂಗಳೂರು ದಕ್ಷಿಣ
‎ಲಯನ್ಸ್‌ ಕ್ಲಬ್‌ ಅಧ್ಯಕ್ಷ ಬಿ.ಆರ್.ವೆಂಕಟೇಶ್ವರಲು
‎ನಾಯ್ಡು, ಎಂ.ಆರ್.ಶಿವಕುಮಾರ್, ಮೂಡಿ
‎ಗೆರೆಯ ಕಾಫಿನಾಡು ಸಮಾಜ ಸೇವಾ ಸಂಘದ
ಅಧ್ಯಕ್ಷ ಹಸೈನಾ‌ರ್ ಬಿಳಗುಳ, ಹುಬ್ಬಳ್ಳಿ ಕೌಟಿಲ್ಯ
‎ಗಣಿತ ಅಕಾಡೆಮಿ ನಿರ್ದೇಶಕ ಆರ್.ಬಿ.
‎ನವೀನ್ ಹಾಜರಿದ್ದರು..
‎ಹಸೈನಾರ್ ಬಿಳಗೊಳ.ಮೂಡಿಗೆರೆ..
‎ಎಂ.ಕೆ.ಅಬ್ದುಲ್ ರಹಿಮಾನ್..ಬಿಳಗೊಳ.ಮೂಡಿಗೆರೆ.
‎ಹಾಗು ಎಲ್ಲಾ ಜಿಲ್ಲೆಯ ಸಾದಕರಿಗೆ ಸನ್ಮಾನ ಮಾಡಲಾಯಿತು..
‎ಮೂಡಿಗೆರೆಯಿಂದ ಮೊಹಮದ್ ಬಿಳಗುಳ.ಹೆಚ್.ಅಬ್ದುಲ್ಲ ಬಿಳಗೊಳ..ಹನೀಫ಼್ ಮಹಮದ್ ಇದ್ದರು.
‎ನಾಗರತ್ನ ಗುಂಡಪ್ಪ ಪ್ರಾರ್ಥಿಸಿದರು.
‎ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ರಾಜ್ಯ ಪ್ರಧಾನ
‎ಕಾರ್ಯದರ್ಶಿ ಸಂಗೀತಾ ಮಠಪತಿ
‎ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ
‎ಕಾರ್ಯದರ್ಶಿ ಕೀರ್ತಿ ಮಠಪತಿ ಸ್ವಾಗತಿಸಿದರು.
‎ವಾಗೀಶ್ವರ ಭಜನಾ ಮಂಡಳಿಯ ಸದಸ್ಯರಾದ
‎ಕೆ.ಸುಶೀಲಾ ರಾವ್ ನೇತೃತ್ವದಲ್ಲಿ ಜಾನಪದ
‎ಗೀತೆ, ಪಿ.ಕೆ.ಲಕ್ಷ್ಮೀ ದಿನೇಶ್, ಶ್ವೇತ ದಿನೇಶ್
ಭಾವಗೀತೆ, ಚನ್ನರಾಯಪಟ್ಟಣ ಹಾಗೂ ನೂರಾರು ಜನ ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed