लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬದುಕು ಬಂದ ಹಾಗೆ ಸ್ವೀಕರಿಸು

ಪರಿಚಿತ ವ್ಯಕ್ತಿಗಳು ಎದುರು ಬಂದಾಗ ನಮ್ಮ ಮೊದಲ ಪ್ರಶ್ನೆ ಹೇಗಿದ್ದೀರಾ? ಎಂದು. ಅವರು ಸಾಮಾನ್ಯವಾಗಿ ನೀಡುವ ಉತ್ತರ ಚೆನ್ನಾಗಿದ್ದೇನೆ ಎಂದಾಗಿರುತ್ತದೆ. ಯಾರೂ ಕೂಡ ಯಾರಿಗೂ ಹೇಗೆ ಬದುಕುತ್ತಿದ್ದೀಯ ಎಂದು ಕೇಳುವ ದುಸ್ಸಾಹಸಕ್ಕೆ ಕೈ ಹಾಕುವುದೇ ಇಲ್ಲಾ, ಕಾರಣ ಎಲ್ಲಿ ಅವರ ಸಮಸ್ಯೆಗಳ ಸರಮಾಲೆಯನ್ನು ತಂದು ನಮ್ಮ ಕುತ್ತಿಗೆಗೆ ಹಾಕಿ ಅದನ್ನು ಸರಿಪಡಿಸಿ ಎಂದು ಗಂಟು ಬೀಳುವರೋ ಎಂಬ ಭಯ. ಹಾಗಂತ ಈ ಭಯ ಅವರಿಗೆ ಇರುವುದು ತಪ್ಪಲ್ಲ. ಕಾರಣ ಎಲ್ಲರ ಜೀವನದಲ್ಲೂ ಬಗೆಹರಿಸಲಾರದಷ್ಟು ಸಮಸ್ಯೆಗಳ ಸರಮಾಲೆ ಇದ್ದೇ ಇರುತ್ತದೆ. ಕೆಲವರು ಹಾಸಿಗೆ ಇದ್ದಷ್ಟು ಕಾಲು ಚಾಚುವ ಅಭ್ಯಾಸ ರೂಢಿಸಿಕೊಂಡಿದ್ದು ಜೀವನದಲ್ಲಿ ಮೆಲ್ಲನೆ ಹೆಜ್ಜೆ ಇಡುತ್ತಿರುತ್ತಾರೆ.

ಇನ್ನು ಹಲವರು ಬೇರೆಯವರ ಆಡಂಬರ ಜೀವನ ಶೈಲಿ ಕಂಡು ಬೆರಗಾಗಿ ಮೋಹಗೊಂಡು ನಾನು ಅವರಂತೆ ಬದುಕು ಸಾಗಿಸಬೇಕು ಎಂಬ ಮನೋಭಾವನೆ ತಳೆದು ಸಾಲದ ಶೂಲಕ್ಕೆ ತಮ್ಮ ಇಡೀ ಜೀವನವನ್ನೇ ಒಡ್ಡಿ ಬದುಕು ಸಾಗಿಸುತ್ತಿರುತ್ತಾರೆ. ಇದು ದುರಂತ ವಲ್ಲದೆ ಮತ್ತಿನ್ನೇನು? ಭೂಮಿಗೆ ಬಂದ ಪ್ರತಿಯೊಂದು ಜೀವಿಯೂ ಬದುಕು ಕಟ್ಟಿಕೊಳ್ಳುತ್ತವೆ.

ಬದುಕುತ್ತವೆ. ಮನೆ ನಿರ್ಮಿಸಿ, ಆಹಾರ ಹುಡುಕಿ ತಂದು ಶೇಖರಿಸಿಟ್ಟು ಮಕ್ಕಳ ಲಾಲನೆ ಪಾಲನೆಯನ್ನು ಮಾಡುತ್ತವೆ. ಹಾಗೆಯೇ ಅವುಗಳಿಗೆ ಸ್ವತಂತ್ರವಾಗಿ ಬದುಕುವ ರೀತಿಯನ್ನು

ಕಲಿಸುತ್ತವೆ. ಆದರೆ ಯಾವ ಜೀವಿಯೂ ಹಣ ಸಂಪಾದನೆಗೆ ಇಳಿಯುವುದಿಲ್ಲ.

ಹಣ ಆಡಂಬರದ ಬದುಕಿಗಾಗಿ ಹಂಬಲಿಸುವುದಿಲ್ಲ. ಹೀಗಿದ್ದಾಗ ಮನುಷ್ಯ ಒಬ್ಬನೇ. ಸಂಪಾದನೆಗಾಗಿ ಹಪ ಹಪಿಸುತ್ತಾನೆ. ” ಸಾಕು” ಎಂಬ ಪದವನ್ನು ತನ್ನ ಜೀವನದ ಶಬ್ದಕೋಶ ದಿಂದ ಅಳಿಸಾಕಿರುತ್ತಾನೆ. ಭಗವಂತನು ನೀಡಿರುವ ಬುದ್ದಿ ಶಕ್ತಿಯನ್ನು ಲೌಕಿಕತೆಗಾಗಿ ಮಾತ್ರಾ ಉಪಯೋಗಗೊಳಿಸುವ ಜೊತೆಗೆ ತನ್ನ ತನವನ್ನೇ ಮರೆತಿರುತ್ತಾನೆ. ಹಾಗಾದರೆ ನಾವು ಬದುಕಬೇಕು. ಹಾಗಾಗಿ ಹಣದ ಹಿಂದೆ ಹೋಗುತ್ತಿದ್ದೇವೆ.

ಯಾವುದಕ್ಕೂ ಕೊರತೆ ಎಂಬುದು ನಮಗೂ ಹಾಗೂ ನಮ್ಮ ಮಕ್ಕಳ ಮುಂದಿನ ಜೀವನಕ್ಕೂ ಯಾವುದೇ ಕೊರತೆ ಇರಬಾರದು ಇದು ಶ್ರೀ ಸಾಮಾನ್ಯನಿಂದ ಹಿಡಿದು ಶ್ರೀಮಂತನವರೆಗಿನ ಎಲ್ಲರ ಬಾಯಲ್ಲೂ ಬರುವ ಉತ್ತರ. ಹಾಗಾದರೆ, ಬದುಕು ಬದುಕುವುದು ಹೇಗೆ? ಬದುಕಿದ್ದೇನೆ ಎನ್ನುವುದಕ್ಕಿಂತ ಜೀವಿಸಬೇಕು ನಾವು ಪ್ರತಿ ಘಳಿಗೆ, ಪ್ರತಿ ಕ್ಷಣ ಆಸ್ವಾದಿಸಬೇಕು.

ಕವಿ ಮಹನೀಯರಲ್ಲಿ ಒಬ್ಬರಾದ “H S ವೆಂಕಟೇಶ್ ಮೂರ್ತಿ ರವರು ಹೇಳುವಂತೆ, ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ. ಎಂಬ ಕವಿತೆಯ ಸಾಲುಗಳು ಎಷ್ಟು ಸತ್ಯವಲ್ಲವೇ? ನೋವು ಎಂಬುದು ಯಾರಿಗಿಲ್ಲ? ಸಮಸ್ಯೆ ಎಂಬುದು ಯಾರಿಗಿಲ್ಲ? ಪ್ರತಿ ಸಮಸ್ಯೆಗೊಂದು

ಅದಕ್ಕೆ ತಕ್ಕನಾದ ಪರಿಹಾರ ಖಂಡಿತ ಜೊತೆಯಲ್ಲೇ ಇದ್ದೇ ಇರುತ್ತದೆ. ತಾಳ್ಮೆಯಿಂದ ಹುಡುಕ ಬೇಕಷ್ಟೆ. ನಮ್ಮ ಹೆಮ್ಮೆಯ ದಿವಂಗತ ರಾಷ್ಟ್ರಪತಿಗಳು ಆದ “APJ ಅಬ್ದುಲ್ ಕಲಾಂ” ರವರೆ ತಂದೆಯವರು ಆಡಂಬರ ರಹಿತ ಜೀವನವನ್ನೇ ನಡೆಸುತ್ತಿದ್ದರು. ಸರಳ ಸುಂದರ ಬದುಕು ನಡೆಸಿದ್ದು ಅಲ್ಲದೆ, ಮಕ್ಕಳಿಗೂ ಕಲಿಸಿದರು.

ಎಷ್ಟು ನಮ್ಮನ್ನು ನಾವು ಸರಳತೆಗೆ ಒಗ್ಗೂಡಿಸಿಕೊಳ್ಳುತ್ತೇವೋ ಸಮಸ್ಯೆಯ ಸುಳಿಯಿಂದ ಹಂತ ಹಂತವಾಗಿ ಹೊರ ಬರುವ ಉಪಾಯ ಕಂಡುಕೊಳ್ಳುತ್ತೇವೆ.ಅತೀ ಹೆಚ್ಚು ಯೋಚನೆ ಆರೋಗ್ಯ ಹಾಳುಗೆಡುವುದೇ ಹೊರತು ಆರೋಗ್ಯವಂತನಾಗಿರಲು ಬಿಡುವುದಿಲ್ಲ. ಹಗಲೆಲ್ಲಾ ಯಾಂತ್ರಿಕ ಬದುಕು ಸಾಗಿಸಿ, ಯೋಚನೆ ಮಾಡಿ ನಿದ್ದೆ ಮಾಡುವಷ್ಟರಲ್ಲಿ ಅರ್ಧ ರಾತ್ರಿಯೆ ಮುಗಿದಿರುತ್ತದೆ. ಚೆನ್ನಾಗಿ ನಿದ್ದೆ ಬರುವಷ್ಟರಲ್ಲಿ ಬೆಳಕು ಹರಿದಿರುತ್ತದೆ. ಚಿಂತೆ ಚಿತೆಯತ್ತ ಮುಖ ಮಾಡಿ ನಿಲ್ಲಿಸುತ್ತದೆ.

ನಿರೀಕ್ಷೆಗಳು ಹೆಚ್ಚಾದಂತೆಲ್ಲ, ನಿರಾಶೆಗಳು ಕೂಡ “ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಇತರರ ಬದುಕನ್ನು ನೋಡಿ ಯಾವತ್ತೂ ನಾವು ನಮ್ಮ ಬದುಕನ್ನು ಕೀಳಾಗಿ ಕಾಣಲೇ ಬಾರದು. ಯಾಕೆಂದರೆ ನಮ್ಮ ಹಾಡಿಯೇ ಬೇರೆ, ನಮ್ಮ ಗುರಿಯೇ ಬೇರೆಯಾಗಿರುತ್ತದೆ. ನಮ್ಮ ಸ್ಪರ್ಧೆ ಕೇವಲ ನಮ್ಮ ನೆನ್ನೆಯ ದಿನಗಳ ಜೊತೆ ಇರಬೇಕೆ ಹೊರತು ಅತ್ಯುನ್ನತ

ಬದುಕು ಸಾಗಿಸುತ್ತಿರುವ ವ್ಯಕ್ತಿಗಳೊಂದಿಗೆ ಅಲ್ಲ. ಇಂದಿನ ನಮ್ಮ ಕಷ್ಟದ ಜೀವನ ನಮ್ಮ ಪೂರ್ವ ಕರ್ಮ ಫಲವಾಗಿರುವುದೇ ವಿನಃ ಇನ್ಯಾರೋ ಅಲ್ಲ. ನಮ್ಮ ಹಣೆಯ ಬರಹಕೆ ಯಾರು ಹೊಣೆಯಾಗಿರುವುದಿಲ್ಲ.

ನಮ್ಮ ಜೀವನ ನಡೆಸುವ ಸಲುವಾಗಿ ಯಾರ ಬಳಿಯೂ ಬೇಡುವ ಕೆಲಸಕ್ಕೆ ಕೈ ಹಾಕಬಾರದು. ಜನರ ಆಟದಲ್ಲಿ ಮೋಸವಿರಬಹುದು ಆದರೆ ದೇವರ ಆಟದಲ್ಲಿ ಮೋಸವೆಂದಿಗೂ ಇರುವುದಿಲ್ಲ. ಯಾರಿಗೆ ಯಾವಾಗ ಏನು ಸಿಗಬೇಕೋ ಅದು ಖಂಡಿತವಾಗಿಯೂ ಎಲ್ಲವೂ ಸಿಕ್ಕೇ ಸಿಗುತ್ತದೆ.

ಈ ನಶ್ವರ ಜಗತ್ತಿನಲ್ಲಿ ಒಂದು ದಿನ ನಾವು ಬರೀ ನೆನಪು ಅಷ್ಟೇ. ಹಾಗಾಗಿ ಸುಖ-ದುಃಖ, ನೋವು ನಲಿವು ಇದ್ದದ್ದೇ. ಬಂದದ್ದು ಬಂದ ಹಾಗೆ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಬದುಕು ಸಾಗಿಸಬೇಕು. ಇರುವಷ್ಟು ಆಯಸ್ಸಿನಲ್ಲಿ ಜೀವಿಸಬೇಕು. ಎಲ್ಲದಕ್ಕೂ ಮೂಲ ಮಂತ್ರ ನಗು. ನಗುವಿನೊಡನೆ ಆರೋಗ್ಯಕರ ಬದುಕು ಸಾಗಿಸಬೇಕು.

ರೂಪಸುಧೀರ್

ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed