लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಗತ್ತಿನಲ್ಲಿ ಎಲ್ಲರೂ ತಮಗಾಗಿ ಬದುಕಿದರೆ, ಕೆಲವರು ಮಾತ್ರ ಸಮಾಜಕ್ಕಾಗಿ ಬದುಕುತ್ತಾರೆ….

1 min read

‎”ಜಗತ್ತಿನಲ್ಲಿ ಎಲ್ಲರೂ ತಮಗಾಗಿ ಬದುಕಿದರೆ, ಕೆಲವರು ಮಾತ್ರ ಸಮಾಜಕ್ಕಾಗಿ ಬದುಕುತ್ತಾರೆ. ಅಂತಹ ಅಪರೂಪದ, ನಿಸ್ವಾರ್ಥ ಮನಸ್ಸಿನ ಮೇರು ವ್ಯಕ್ತಿತ್ವ ನಮ್ಮ ಮುದ್ರೆಮನೆ ಸಂತೋಷಣ್ಣ ಅವರದು. ಇವರ ಬದುಕು ಕೇವಲ ಒಂದು ಜೀವನವಲ್ಲ, ಅದು ನಾವೆಲ್ಲರೂ ಅನುಸರಿಸಬೇಕಾದ ಒಂದು ಆದರ್ಶ ಹಾದಿ.”
“ಅಧಿಕಾರ, ಅಂತಸ್ತು ,ಪ್ರಚಾರದ ಹಪಾಹಪಿಯಿಲ್ಲದೆ, ಕೇವಲ ಸಮಾಜದ ಏಳಿಗೆಯನ್ನು ಉಸಿರಾಗಿಸಿಕೊಂಡು ಕೆಲಸ ಮಾಡುವ ಇವರ ಗುಣ ನಿಜಕ್ಕೂ ಶ್ಲಾಘನೀಯ.
‎             “ಇವರ ಸಮಾಜಮುಖಿ ಕಾರ್ಯಗಳು ಇಂದಿನ ಯುವ ಪೀಳಿಗೆಗೆ ದೊಡ್ಡ ಪ್ರೇರಣೆ. ಕೇವಲ ಮಾತುಗಳಲ್ಲಲ್ಲ, ಕೃತಿಯಲ್ಲಿ ಸಮಾಜ ಸೇವೆಯನ್ನು ಹೇಗೆ ಮಾಡಬೇಕೆಂದು ತೋರಿಸಿಕೊಟ್ಟ ಹೆಮ್ಮೆಯ ವ್ಯಕ್ತಿ ಇವರು.”
‎             “ಅದೆಷ್ಟೋ ಕೆಲಸಗಳ ಮಧ್ಯೆ ಊರಿಗೊಂದು ಶಾಲೆ ಬೇಕು ಅಂದ್ಕೊಂಡು ಸುಂದರ ಕಟ್ಟಡ ಬೇಕು ಎಂದು ಚಿಂತಿಸುವ ಒಬ್ಬ ನಾಗರೀಕ ಅಂತ ಸಿಕ್ಕರೆ  ಆ ಊರು ಆ ಶಾಲೆಗೆ ಬರುವ ಮಕ್ಕಳು ಶಿಕ್ಷಕರ ಸೌಭಾಗ್ಯ ಎಷ್ಟು ಅದ್ಬುತ ಎನಿಸುತ್ತದೆ ಅಲ್ವಾ. ಅಂತಹ ಅದ್ಭುತ ಅನುಭವಿಸಿದ ಪುಣ್ಯ ನನ್ನದು. ಸುಮಾರು 2 ಕೋಟಿ ಮೊತ್ತದಲ್ಲಿ ತಾನೇ ಇಂಜಿನೀಯರ್, ತಾನೇ ಮೇಸ್ತ್ರಿ, ತಾನೇ ಎಲ್ಲ ಆಗಿ ನಿಂತು ರಾಜ್ಯವೇ ಮೆಚ್ಚುವಂತಹ ಶಾಲಾ ಕಟ್ಟಡ ನಿರ್ಮಾಣ ಮಾಡಿ ಕೊಟ್ಟ ಪುಣ್ಯಾತ್ಮ ಇವರು. ಇವರ ಪಕ್ಕ ನಿಂತೂಂದು ಪೋಟೋ ತೆಗೆಸಿಕೊಂಡರೆ ಅದೇನೋ ಸಾಧಿಸಿಬಿಟ್ಟೆ ಅನ್ನುವಷ್ಟು ಯುರೇಕಾ ಯುರೇಕಾ ಅಂತ ಕೂಗಿಬಿಡುವಷ್ಟು ಖುಷಿಯ ಕ್ಷಣ ಅದು.
‎             ಇತ್ತೀಚೆಗೆ ನಮ್ಮ ಶಾಲೆಯಲ್ಲಿ ಎಲ್ ಕೆ ಜಿ ಗೆ ದಾಖಲಾಗಿ ನಮ್ಮ ಶಾಲೆಗೆ ಪ್ರಥಮವಾಗಿ ಹೆಜ್ಜೆ ಇಟ್ಟ ಭವಿಷ್ಯದಲ್ಲಿ ಸಮಾಜ ನಿರ್ಮಿಸುವ ಮುಗ್ಧ ಮನಸುಗಳಿಗಾಗಿ ಆಯೋಜಿಸಿದ್ದ  “ಅಕ್ಷರ ಅಭ್ಯಾಸ” ಕಾರ್ಯಕ್ರಮದಲ್ಲಿ ಭಾಗವಹಿಸಿ ತಾನೇ ಮಂಡಿಯೂರಿ ಕೂತು ಪುಟಾಣಿ ಮಕ್ಕಳಿಗೆ ಅಕ್ಷರ  ಬರೆಸಿ ವಿದ್ಯಾರಂಭ ಮಾಡಿಸಿ ನೆಮ್ಮದಿ ಕಂಡುಕೊಂಡ ಮಹಾನುಭಾವ ನಮ್ಮ ಸಂತೋಷಣ್ಣ. ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸದ ಇವರು ನಮ್ಮ ಶಾಲೆ ನಮ್ಮ ಕಾರ್ಯಕ್ರಮ ಎಂದರೆ ಸಾಕು ಅದೆಷ್ಟೇ ಬ್ಯುಸಿ ಇದ್ದರೂ ಕೂಡ, ಬಿಡುವು ಮಾಡಿಕೊಂಡು ಕುಟುಂಬ ಸಮೇತ ಬಂದುಬಿಡುವ ಅಭಿಮಾನಿ ಇವರು. ನಮ್ಮ ಶಾಲೆಯನ್ನು ತುಂಬ ಎತ್ತರದಲ್ಲಿ ನೋಡಬೇಕೆಂದು ಬಯಸುವ ಇವರು ಮತ್ತಷ್ಟೇ ಮೊತ್ತದಲ್ಲಿ ಅಂತದ್ದೇ ಇನ್ನೊಂದು  ರಿಪ್ಲೇಕಾ ಕಟ್ಟಡ ನಿರ್ಮಾಣ ಮಾಡಿಕೊಟ್ಟು ಹೈಟೆಕ್ ಟಚ್ ಕೊಟ್ಟುಬಿಡುವ ಆಶಾವಾದಿ ಆಗಿದ್ದಾರೆ. ಸುಮ್ಮನೆ ಅನುಸರಿಸಿ ಜೊತೆ ನಡೆದುಬಿಡಬೇಕು ಅನ್ನುವಷ್ಟು ಸರಳತೆ,  ಸದಾ ನಗುತುಂಬಿದ ಅವರ ಮುಖದಲ್ಲಿ ದೂರದೃಷ್ಟಿ ದೀರ್ಘ ಆಲೋಚನೆ ಇರುವದ ಕಂಡರೆ ಸ್ವಾಮಿ ವಿವೇಕಾನಂದ, ಮೋಕ್ಷಗೊಂಡ ವಿಶ್ವೇಶ್ವರಯ್ಯಯ್ಯನವರು ಒಂದೇ ಸಲ ಎದುರು ಬಂದು ನಿಂತ ಹಾಗೆ ಅನ್ನಿಸಿಬಿಡುತ್ತದೆ. ಏಕೆಂದರೆ ಒಬ್ಬ ಮನುಷ್ಯ ತಾನು ಹುಟ್ಟಿದ ರಾಷ್ಟ್ರಕ್ಕೆ, ಜನಿಸಿದ ಮಣ್ಣಿಗೆ ಬದುಕುವ ಸಮಾಜಕ್ಕೆ ಹೇಗೆ ಇರಬೇಕೆಂದು ಎಂದು ತಿಳಿಸುವ “ನಾಗರೀಕ ಸಂಹಿತೆ” ಎಂಬ ಪುಸ್ತಕ ಸಿದ್ಧಪಡಿಸಿ ನಮ್ಮ ಮಕ್ಕಳಿಗೆ ನಾಗರೀಕ ಸಂಹಿತೆ ಕಲಿಸಬೇಕೆಂಬ ಹಂಬಲವಿರುವ ಒಬ್ಬ ಮಹಾನ್ ಸಾಹಿತಿ ಇವರು.
‎         ಒಮ್ಮೆ ಅವರ ಕಚೇರಿಗೆ ಭೇಟಿ ನೀಡಿದ ವೇಳೆ ಸರ್ ಎಂ ವಿ ಅವರ ಕುರಿತ ಅಧ್ಯಯನ ಕೃತಿ ಕೈಗೆ ನೀಡಿ ಮೇಸ್ಟ್ರೆ ಇದುನ್ನ ಓದಿ ಅವರ ಕೆಲಸಗಳು ಇಲ್ಲೇ ನಮ್ಮ ಅಕ್ಕಪಕ್ಕದಲ್ಲೇ ನಡೆದಿವೆ ಅನ್ನುವಷ್ಟು ಸುಂದರವಾಗಿದೆ ಎಂದು ಒಂದೇ ವಾಕ್ಯದಲ್ಲಿ ಹೇಳಿದಾಗಲೇ ಗೊತ್ತಾಗಿದ್ದು ಅವರು ದೊಡ್ಡ ಬಿಸಿನೆಸ್ ಮ್ಯಾನ್ ಆಗಿದ್ದರೂ ಸಮಯವೇ ಇಲ್ಲದಿರುವ ಮಧ್ಯೆ ಓದಿಗಾಗಿ ಒಂದಷ್ಟು ಸಮಯ ಇಟ್ಟಿದ್ದಾರೆ, ಇಂದಿಗೂ ಅವರು ಅಧ್ಯಯನಶೀಲ ವ್ಯಕ್ತಿ ಎಂದು.
‎      ಮೊನ್ನೆ ನಮ್ಮ ಸುರೇಶ್ sir ಅಣ್ಣ ಹೀಗೆ ಮಕ್ಕಳಿಗೆ ಅನುಕೂಲ ಆಗಬೇಕು ಅಂತ  ಕೈತೊಳೆಯುವ ಸಿಂಕ್  ಮಾಡ್ತಾ ಇದೀವಿ ಅಂತ ಒಂದು  ಮಾತು ಹೇಳಿದಷ್ಟೇ  ಲಕ್ಷಕ್ಕೂ ಮೀರಿದ ಕಟ್ಟಡ ಸಾಮಗ್ರಿಗಳನ್ನು (ಸಿಮೆಂಟ್ ಜೆಲ್ಲಿ, ಎಂ ಸ್ಯಾಂಡ್, ಸಿಮೆಂಟ್ ಇಟ್ಟಿಗೆ)ಒಂದೇ ದಿನದ ಅಂತರದಲ್ಲಿ ಶಾಲಾ ಅಂಗಳಕ್ಕೆ ಕಳುಹಿಸಿ ಕೆಲಸ ಹೀಗೆ ಮಾಡಿ ಅಂತ ಹೇಳಿದಂತಹ ಉದಾರವಾದಿ.
‎       ನಾನು ನನ್ನ 18 ವರ್ಷದ ಶಿಕ್ಷಕವೃತ್ತಿಯಲ್ಲಿ ಶಿಷ್ಯಕೋಟಿ ಸಂಪಾದನೆಯಲ್ಲಿ ಮುಳುಗಿಹೋಗಿದ್ದೆ. ಆದರೆ ಇಂದು ಒಂದು ಒಬ್ಬ ಸರಳ ಸಜ್ಜನ ನಮ್ಮ ಶಾಲೆಯ ಅಭಿಮಾನಿಗೆ ಅಭಿಮಾನಿಯಾಗಿ ಅವರ ಒಡನಾಟದಲ್ಲಿ ಶಿಕ್ಷಣ ನೀಡುವ, ಜೀವಮಾನದಲ್ಲಿ ನೆನಪಿನಲ್ಲಿ ಉಳಿಯುವ ಕಾರ್ಯದಲ್ಲಿದ್ದೇನೆ ಎಂಬ ಹೆಮ್ಮೆಯ ಭಾವ ನನ್ನದಾಗಿದೆ.
‎             ಇಂತಹ ಸುಸಂದರ್ಭ ನಿರ್ಮಿಸಿ ಖುಷಿ ತಂದು ಕೊಟ್ಟ ನನ್ನ ವೃತ್ತಿ ಮಾರ್ಗದರ್ಶಕರಂತೆ ಇರುವ ನಮ್ಮ ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ಸರ್ ನಿವೃತ್ತಿ ಅಂಚಿನಲ್ಲಿದ್ದರೂ ಶಾಲೆಗಾಗಿ ಯುವಕನಾಗಿಬಿಡುವ ಇವರಿಗೆ ನನ್ನ ಅಭಿಮಾನದ ವಂದನೆಗಳು.
‎                 ಅವರು ನಂಬಿರುವಂತಹ ಭಗವಂತನು(ತಂದೆ ತಾಯಿ) ಇವರಿಗೆ ನೂರಾರು ಕಾಲ ಆಯುಷ್ಯ, ಆರೋಗ್ಯ ಮತ್ತು ಹೀಗೆಯೇ ಸಮಾಜ ಸೇವೆ ಮಾಡುವ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಭಕ್ತಿಪೂರ್ವಕವಾಗಿ ಹಾರೈಸುತ್ತೇನೆ.”  ಅವರ ದೂರದೃಷ್ಟಿಯ ಬೆಳಕಿನಲ್ಲಿ ನಮ್ಮ ಶಾಲೆಯ ಮಕ್ಕಳ ಭವಿಷ್ಯ ಉಜ್ವಲವಾಗಲಿ. ನಮ್ಮಂತ ಹಲವಾರು ಶಿಕ್ಷಕರಿಗೆ ಸೇವಾತೃಪ್ತಿ ದೊರೆಯುಂತಾಗಲಿ.
‎
‎             ಸುನೀಲ್ ಹೆಚ್ ಸಿ ಸಹಶಿಕ್ಷಕ

      ದಿ|| ಬೆಣ್ಣೂರು ಸಿದ್ದೇಗೌಡ ಸೌಮ್ಯ ಸರ್ಕಾರಿ ಶಾಲೆ ಮುತ್ತಿಗೆಪುರ

About Author

Leave a Reply

Your email address will not be published. Required fields are marked *

You may have missed