लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಮೀಪದ ಕೆಳಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಸರ್ವಧರ್ಮ ಸಂಸ್ಥೆ ಮತ್ತು ಸ್ಥಳೀಯ ದಾನಿಗಳ ವತಿಯಿಂದ ಸೋಮವಾರ ಕಲಿಕೋಪಕರಣಗಳನ್ನು ಕೊಡುಗೆಯಾಗಿ ವಿತರಿಸಲಾಯಿತು…

1 min read

ಶಾಲಾ ಮಕ್ಕಳಿಗೆ ಕಲಿಕಾ ಪರಿಕರ ಕೊಡುಗೆ

ಆಲ್ದೂರು: ಸಮೀಪದ ಕೆಳಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಸರ್ವಧರ್ಮ ಸಂಸ್ಥೆ ಮತ್ತು ಸ್ಥಳೀಯ ದಾನಿಗಳ ವತಿಯಿಂದ ಸೋಮವಾರ ಕಲಿಕೋಪಕರಣಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ನಿವೃತ್ತ ಶಿಕ್ಷಕ ಚಂದ್ರಪ್ಪ ಕೆಳಗೂರು ಸರ್ಕಾರಿ ಶಾಲೆ ಸ್ಥಾಪನೆಯಾಗಲು ನಡೆದ ಹೋರಾಟದ ಹಾದಿಯ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಸರ್ವಧರ್ಮ ಸಂಸ್ಥೆಯ ಅಧ್ಯಕ್ಷರಾದ ಭರತ್, ಸರ್ಕಾರಿ ಶಾಲೆಗಳ ಉಳಿವಿಗೆ ಸಮಾಜದ ಸರ್ವ ಸಮುದಾಯಗಳು ಒಗ್ಗೂಡಿ ಶ್ರಮಿಸಬೇಕಿದೆ. ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಸಮವಸ್ತ್ರ ಉಚಿತ ಪಠ್ಯ ಪುಸ್ತಕ, ಪ್ರತಿಭಾನ್ವಿತ ಶಿಕ್ಷಕರು ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರುಗಳು ಎಲ್ಲಾ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳ ದಾಖಲಾತಿ ಕೊರತೆಗೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣ, ಇಂದು ಈ ಶಾಲೆಗೆ ನಾವು ಕೊಡುಗೆ ನೀಡಿದಂತೆ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳೆಲ್ಲರೂ ಮುಂದೆ ಈ ಶಾಲೆಯ ಮುಂದಿನ ಪೀಳಿಗೆ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕಿ ಶೋಭಾ ರಾಣಿ ಮಾತನಾಡಿ ಸರ್ವಧರ್ಮ ಸಂಸ್ಥೆ ವತಿಯಿಂದ 27,000 ವೆಚ್ಚದಲ್ಲಿ ನೋಟ್ ಪುಸ್ತಕ, ಲೇಖನಿಗಳು, ಪೆನ್ಸಿಲ್, ಆಟಿಕೆಗಳನ್ನು ಕೊಡುಗೆಯಾಗಿ ನೀಡಿದ್ದು, ಮಾಜಿ ಪಂಚಾಯತಿ ಸದಸ್ಯರಾದ ದೇವರಾಜ್ ಗೌಡ 10 ಸಾವಿರ ಮೌಲ್ಯದಲ್ಲಿ ನೋಟ್ ಪುಸ್ತಕಗಳನ್ನು ನೀಡಿದ್ದು, ತಮ್ಮ ಪುತ್ರ ಎಹೆಚ್ ವಿನಯ್ 5 ಸಾವಿರ ವೆಚ್ಚದಲ್ಲಿ ಎಲ್ಕೆಜಿ ಯುಕೆಜಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡುಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಲಾ ಅಭಿವೃದ್ಧಿ ಸಮಿತಿಯ ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಹ ಶಿಕ್ಷಕರು ಗಳಾದ ಸುಜಾತ, ಶೈಲಾ,ದಿವ್ಯ,ಗ್ರಾಮದ ಚಂದ್ರಶೇಖರ್, ಪೋಷಕರುಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed