लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ಶೀ . ನಿರ್ಮಲಾನಂದನಾಥ ಸ್ವಾಮೀಜಿಯಿಂದ ಜಿಲ್ಲಾ ಒಕ್ಕಲಿಗರ ಮಹಿಳಾ ಭವನದ ಉದ್ಘಾಟನೆ….

1 min read

‎ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿ ಮಾದರಿಯಾಗಿದ್ದಾರೆ |
ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ಶೀ . ನಿರ್ಮಲಾನಂದನಾಥ ಸ್ವಾಮೀಜಿಯಿಂದ ಜಿಲ್ಲಾ ಒಕ್ಕಲಿಗರ ಮಹಿಳಾ ಭವನದ ಉದ್ಘಾಟನೆ

‎ ಚಿಕ್ಕಮಗಳೂರು: ಶರೀರ, ಸಂಪತ್ತು, ಸಾವು ಇವು ಶಾಶ್ವತವಲ್ಲ, ಸಿಕ್ಕಿದ ಅಧಿಕಾರವಧಿಯಲ್ಲಿ ಶಾಶ್ವತವಾಗಿರುವ ಕಾಯಕ ಕೈಗೊಂಡಾಗ ಮಾತ್ರ ಧರ್ಮ ಸಂಗ್ರಹದ ಮೂಲಕ ಸಮಾಜದಲ್ಲಿ ಹೆಸರು ಉಳಿಯುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
‎
‎ಅವರು ಗುರುವಾರ ಜಿಲ್ಲಾ ಒಕ್ಕಲಿಗರ ಮಹಿಳಾ ಭವನದ ಉದ್ಘಾಟನೆ ನೆರವೇರಿಸಿ ನಂತರ ನೆಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಸೇವಾ ಮತ್ತು ಧರ್ಮದ ಮಾರ್ಗವಾಗಿ ಸಂಘಟನೆಗಳು ಬೆಳೆಯಬೇಕು ಜೊತೆಗೆ ಸೇವೆ ಮಾಡುವ ಉದ್ದೇಶ ಇರದಿದ್ದರೆ ಹಾಗೂ ಶ್ರೇಷ್ಠವಾದ ತಾಯಂದಿರು ಇಲ್ಲದಿದ್ದರೆ ಸಮಾಜ ಬೆಳೆಯಲು ಅಸಾಧ್ಯ ಎಂದ ಅವರು ದೊಡ್ಡ-ದೊಡ್ಡ ಸಮಸ್ಯೆಗಳು ಎದುರಾದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪುರುಷನಿಗೆ ಸೂಕ್ತ ಸಲಹೆ ನೀಡುವ ತಾಯಂದಿರು ಮನೆಯಲ್ಲಿ ನಗುತ್ತಿದ್ದರೆ ಬದುಕಿನ ಭಾಗ್ಯ ಎಂದು ಭಾವಿಸುತ್ತೇನೆ ಎಂದರು.
‎
‎ಭಾರತದಲ್ಲಿ ತಾಯಂದಿರಿಗೆ ದೇವತಾ ಸ್ಥಾನ ನೀಡಿ ಅಡುಗೆ ಮನೆಗೆ ಸೀಮಿತಗೊಳಿಸಿ ಹೆರಿಗೆ ಯಂತ್ರಗಳನ್ನಾಗಿ ಮಾಡಿದ್ದೇವೆ ಆದರೆ ಅಮೇರಿಕಾದಲ್ಲಿ ಪ್ರತಿಯೋಬ್ಬ ಮಹಿಳೆ ವಿದ್ಯಾವಂತರಾಗಿ ಆ ದೇಶದ ಉದ್ಧಾರಕ್ಕೆ ಮಹಿಳೆಯರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
‎
‎ಅಮೇರಿಕಾ ದೇಶದಲ್ಲಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಜಿಲ್ಲಾ ಮಹಿಳೆಯರ ಒಕ್ಕಲಿಗರ ಸಂಘ ಸಮಾವೇಶದಂತೆ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ ಎಂದು ಶ್ಲಾಘಿಸಿದರು.
‎
‎ರಾಜ್ಯದಲ್ಲಿ ಬಹುದೊಡ್ಡ ಸಮುದಾಯ ಭವನ ಹುಟ್ಟುವ ಮೊದಲು ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗರ ಸಮುದಾಯ ಭವನ ಸ್ಥಾಪನೆ ಮಾಡಲಾಗಿದೆ. ಮಹಿಳೆಯರು ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿರುವುದು ಇದೊಂದು ಕಾರ್ಯಕ್ರಮವಲ್ಲ ಬದಲಾಗಿ ತಾಯಂದಿರ ಸಮಾವೇಶ ಎಂದು ಬಣ್ಣಿಸಿದರು.
‎
‎ಜಿಲ್ಲಾ ಒಕ್ಕಲಿಗರ ಸಂಘ, ಮಹಿಳಾ ಒಕ್ಕಲಿಗರ ಸಂಘ ಹಾಲು-ಜೇನಿನಂತೆ ಬೆರೆತು ಸಮಾಜದಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಮಾತೃಸಂಘ ಮಹಿಳಾ ಸಂಘಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‎
‎ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಮಹಿಳೆ ಕುಟುಂಬದ ಆಧಾರ ಸ್ಥಂಬವಾಗಿದ್ದು ಅವರ ಶಕ್ತಿ ಸಮಾಜದ ಅಭಿವೃದ್ಧಿಗಾಗಿ ಎಂದ ಅವರು ಪುರುಷನೊಬ್ಬ ಶಿಕ್ಷಣ ಪಡೆದರೆ ಒಬ್ಬ ವ್ಯಕ್ತಿ ಶಿಕ್ಷಣ ಪಡೆದಂತೆ, ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಒಂದು ಶಾಲೆ ತೆರೆದಂತೆ ಅದೇ ರೀತಿಯಲ್ಲಿ ಸಮಾಜದ ಪ್ರಗತಿ ಆ ಸಮಾಜದ ಮಹಿಳೆಯರ ಮೇಲೆ ಅವಲಂಭಿತವಾಗಿದೆ ಎಂದು ಹೇಳಿದರು.
‎
‎ಒಕ್ಕಲಿಗ ಸಮುದಾಯ ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಒಕ್ಕಲಿಗೆ ಸಮುದಾಯದ ಮಹಿಳೆಯರು ತಮ್ಮ ಪ್ರತಿಭೆಯ ಮೂಲಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶ ಮತ್ತು ರಾಜ್ಯದ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದೆ ಅವರು ಮಹಿಳಾ ಅಭಿವೃದ್ಧಿಗಾಗಿ ಮಹಿಳಾ ಭವನ ನಿರ್ಮಾಣ ಮಾಡಲಾಗಿದ್ದು, ಇದು ಕೇವಲ ಕಟ್ಟಡವಾಗದೆ ಮಹಿಳೆಯರ ಜ್ಞಾನ ಸೌಧವಾಗಲಿ ಎಂದು ಆಶಿಸಿದರು.
‎
‎ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ ಒಕ್ಕಲಿಗ ಸಮುದಾಯ ದೇಶಕ್ಕೆ ಅನ್ನದಾತನಾಗಿದ್ದು, ಬೆಂಗಳೂರು ನಗರವನ್ನು ಸುಂದರವಾಗಿ ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡರು ಇಂದು ಸಿಲಿಕಾನ್ ಸಿಟಿ ಎಂದು ಹೆಸುರುವಾಸಿಯಾಗಿದೆ ಹಾಗೂ ಉದ್ಯೋಗ ತಾಣವಾಗಿದೆ ಎಂದು ತಿಳಿಸಿದರು.
‎
‎1973 ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಹಿಂದುಳಿದ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಕ್ಷಾಟನೆ ಮಾಡುವ ಮೂಲಕ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಾರಂಭಿಸಿದರು, ಇಂದು ದೇಶ-ವಿದೇಶಗಳಲ್ಲಿ 550 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ನಿರ್ಮಾಣ ವಾಗಿದೆ ಎಂದು ಹೇಳಿದರು.
‎
‎ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ 1.60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅದೇ ರೀತಿಯಲ್ಲಿ ಶ್ರೀ ಗುಣನಾಥ ಸ್ವಾಮೀಜಿ ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದ ಅವರು ಯಾವುದೇ ಒಂದು ಜವಾಬ್ದಾರಿ ದೊರೆತರು ಅದನ್ನು ಸಾಧಿಸುವ ಛಲ ಒಕ್ಕಲಿಗ ಸಮುದಾಯಕ್ಕೆ ದೊರೆತಿದೆ ಎಂದರು.
‎
‎ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಮಾತನಾಡಿ ಒಕ್ಕಲಿಗ ಸಮುದಾಯ ನಾಡಿಗೆ ನೀಡಿರುವ ಕೊಡುಗೆ
‎
‎ಅಪಾರವಾಗಿದ್ದು, ಇಂದಿನ ಯುವಕರಲ್ಲಿ ಮಠ-ಮಂದಿರಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವುದರ ಜೊತೆಗೆ ಸಂಬಧಗಳ ಮೌಲ್ಯಗಳ ಬಗ್ಗೆ ತಿಳಿಸುವುದು ಮುಖ್ಯವಾಗಿದೆ ಎಂದರು.
‎
‎ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖ‌ರ್ ಮಾತನಾಡಿ ರಾಜ್ಯಕ್ಕೆ ಜಿಲ್ಲಾ ಮಹಿಳಾ ಸಂಘ ಮಾದರಿಯಾಗಿ ಕೆಲಸ ಮಾಡುತ್ತಿದೆ, ಇಂದು ಸ್ವಂತ ನಿವೇಶನಹೊಂದಿ ಅನೇಕ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. ಅವರ ಸಮಾಜಸೇವೆ ಕೆಲಸಗಳಿಗೆ ನಾವು ಹೆಚ್ಚು ಕೈಜೊಡಿಸುತ್ತೇವೆ ಎಂದು ತಿಳಿಸಿದರು.
‎
‎ಮಹಿಳಾ ಸಂಘದ ಅಧ್ಯಕ್ಷೆ ರೀನಾಸುಜೇಂದ್ರ ಮಾತನಾಡಿ ನಮ್ಮ ಸಂಘವು ಪ್ರಾರಂಭವಾಗಿ 21 ವರ್ಷಗಳು ಕಳೆದೆದೆ, ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘ ನಮ್ಮದು ಇಂದು ಸ್ವಂತ ಭವನ ನಿರ್ಮಿಸಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.
‎
<span;>‎ಈ ಸಂದರ್ಭದಲ್ಲಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ವಿಧಾನಪರಿಷತ್ ಶಾಸಕ ಆರತಿಕೃಷ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎ.ಪೂಣೇಶ್, ಸಿಡಿಎ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ನಗರಸಭೆ ಅಧ್ಯಕ್ಷ ಭವ್ಯಮಂಜುನಾಥ್ ಮಹಿಲಾ ಸಂಘದ ಉಪಾಧ್ಯಕ್ಷೆ ಕಾವ್ಯಸುಕುಮಾ‌ರ್, ಗೌ.ಕಾರ್ಯದರ್ಶಿ ಸಹಕಾರ್ಯದರ್ಶಿ ಅಮಿತವಿಜೇಂದ್ರ, ಕೋಮಲರವಿ, ನಿರ್ದೇಶಕರುಗಳಾದ ಶಕುಂತಲಾವೀರೇಗೌಡ, ವೇದಚಂದ್ರಶೇಖರ್, ಚಂಪಜಗದೀಶ್, ವಿನುತಪ್ರಸಾದ್, ಸಂಧ್ಯಾನಾಗೇಶ್, ಮಂಜುಳಹರೀಶ್, ಅನುಪಮರಮೇಶ್, ರಾಜೇಶ್ವರಿಅಭಿಷೇಕ್, శతికాశ్రాతిరో. ತನುಜಸುರೇಶ್‌, ಸ್ಥಿತಸುನೀಲ್, ಸುನಿತನವೀನ್, ನಿಕಟಪೂರ್ವ ಅಧ್ಯಕ್ಷರಾದ ಸವಿತರಮೇಶ್, ಹರಿಣಾಕ್ಷಿನಾಗರಾಜ್, ರಾಜಶ್ರೀ ಮಂಜುನಾಥ್, ಲೀಲಾನಾಗರಾಜ್, ಗಾಯಿತ್ರಿಗೋವಿಂದಸ್ವಾಮಿ, ಕಲ್ಪನಾಪ್ರದೀಪ್ ಕಾರ್ಯದರ್ಶಿ ಜಾಹ್ನವಿಜಯರಾಮ್, ನಿರ್ದೇಶಕರಾದ ಪವಿತ್ರರತೀಶ್, ಭವ್ಯನಟೇಶ್, ಇದ್ದರು.

About Author

Leave a Reply

Your email address will not be published. Required fields are marked *

You may have missed