लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಅಂಚೆ ವಿಭಾಗದಿಂದ ಪಿನ್ ಕೋಡ್ ಮಾಹಿತಿ ಅಭಿಯಾನ…..

1 min read

ಚಿಕ್ಕಮಗಳೂರು ಅಂಚೆ ವಿಭಾಗದಿಂದ ಪಿನ್ ಕೋಡ್ ಮಾಹಿತಿ ಅಭಿಯಾನ
ಭಾರತದಲ್ಲಿ 1972ರಲ್ಲಿ ಆರಂಭವಾದ ಪಿನ್ ಕೋಡ್ ವ್ಯವಸ್ಥೆಗೆ ಅರ್ಧ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಸರಿಯಾದ ಪಿನ್ ಕೋಡ್ ಬಳಕೆಯು ಪತ್ರಗಳು ಮತ್ತು ಪಾರ್ಸೆಲ್‌ಗಳಿಗೆ ರೆಕ್ಕೆಗಳನ್ನು ನೀಡಿದಂತೆಯೇ. ಅವುಗಳನ್ನು ವೇಗವಾಗಿ ಮತ್ತು ನಿಖರವಾಗಿ ತಲುಪಬೇಕಾದ ಅಂಚೆ ಕಚೇರಿಗೆ ಪಿನ್ ಕೋಡ್ ತಲುಪಿಸುತ್ತದೆ.

ಪಿನ್ ಕೋಡ್ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಚಿಕ್ಕಮಗಳೂರು ಅಂಚೆ ವಿಭಾಗವು ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳ ಪಿನ್ ಕೋಡ್ ವಿವರಗಳನ್ನು ಒಳಗೊಂಡ “ಅಕ್ಷರಾನುಕ್ರಮಣಿಕೆಯ ಪಿನ್ ಕೋಡ್ ಡೈರೆಕ್ಟರಿ’ ಯನ್ನು ಸಿದ್ಧಪಡಿಸಿದೆ. ಈ ಡೈರೆಕ್ಟರಿಯಲ್ಲಿ ಜಿಲ್ಲೆಯ ಅಂಚೆ ಕಚೇರಿಗಳ ಪಿನ್ ಕೋಡ್ ಮಾತ್ರವಲ್ಲದೇ ಭಾರತದಲ್ಲಿನ ಯಾವುದೇ ಅಂಚೆ ಕಚೇರಿಯ ಪಿನ್ ಕೋಡ್ ಅನ್ನು ಸುಲಭವಾಗಿ ಕಂಡು ಹುಡುಕುವ ವಿಧಾನದ ಮಾಹಿತಿಯೂ ಲಭ್ಯವಿದೆ.

ನಾಗರೀಕ ಕೇಂದ್ರಿತ ಸೇವಾ ಕಾರ್ಯಕ್ರಮದ ಭಾಗವಾಗಿ ಈ ಡೈರೆಕ್ಟರಿಯ ಉಚಿತ ಪ್ರತಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಮುಂದಿನ ಒಂದು ತಿಂಗಳ ಒಳಗಾಗಿ ಉಚಿತವಾಗಿ ವಿತರಿಸುವ ಯೋಜನೆಯನ್ನು ಚಿಕ್ಕಮಗಳೂರು ಅಂಚೆ ವಿಭಾಗ ಹೊಂದಿದೆ.

ಈ ಕಾರ್ಯಕ್ರಮದ ಅಂಗವಾಗಿ ಪಿನ್ ಕೋಡ್ ಡೈರೆಕ್ಟರಿಯ ಮೊದಲ ಪ್ರತಿಯನ್ನು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೀರ್ತನಾ ಹೆಚ್. ಎಸ್. ಅವರಿಗೆ ಚಿಕ್ಕಮಗಳೂರು ಅಂಚೆ ವಿಭಾಗದ ಅಧೀಕ್ಷಕರಾದ ಶ್ರೀ ಶ್ರೀನಾಥ ಎನ್. ಬಿ. ಅವರು ಹಸ್ತಾಂತರಿಸಿದರು.

ಸರಿಯಾದ ಪಿನ್ ಕೋಡ್ ಬಳಕೆ ಹೆಚ್ಚಾದಷ್ಟೂ ಅಂಚೆ ಸೇವೆಯ ಗುಣಮಟ್ಟ ಮತ್ತು ವೇಗ ಹೆಚ್ಚುತ್ತದೆ. ಅಂಚೆ ಸೇವೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ಹಾಗೂ ನಾಗರಿಕರಲ್ಲಿ ಅಂಚೆ ಅರಿವು ಮೂಡಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಅಂಚೆ ವಿಭಾಗ ನಿರಂತರವಾಗಿ ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಪಿನ್ ಕೋಡ್ ಡೈರೆಕ್ಟರಿಯ ಪಿ.ಡಿ. ಎಫ್. ಪ್ರತಿಯನ್ನು ಉಚಿತವಾಗಿ ಪಡೆಯಲು ಚಿಕ್ಕಮಗಳೂರು ವಿಭಾಗದ ವ್ಹಾಟ್ಸಪ್ ಸಂಖ್ಯೆ 9448291068 ಅಥವಾ ಇಮೈಲ್ ಐ.ಡಿ. dochikmagalur.ka@indiapost.gov.in ಗೆ SEND PINCODE DIRECTORY ಎಂದು ಸಂದೇಶವನ್ನು ಕಳುಹಿಸಬಹುದಾಗಿದೆ.ಸಹಾಯಕ ಕಾರ್ಯದರ್ಶಿ ಗೌರವ ಶೆಟ್ಟಿ,ಪ್ರಸರಣ ಕಾರ್ಯನಿರ್ವಾಹಕ ಅಧಿಕಾರಿ ದೊಡ್ಡೇಶ್ ಇದ್ದರು.

About Author

Leave a Reply

Your email address will not be published. Required fields are marked *

You may have missed