ಅಂಧ ಮಕ್ಕಳ ಪಾಠಶಾಲೆಗೆ ಎಂ.ಎಂ.ಪಿ.ಎಲ್ ನಗದು ಬಹುಮಾನ ಕೊಡುಗೆ….
1 min read
ಅಂಧ ಮಕ್ಕಳ ಪಾಠಶಾಲೆಗೆ ಎಂ.ಎಂ.ಪಿ.ಎಲ್ ನಗದು ಬಹುಮಾನ ಕೊಡುಗೆ
ಆಲ್ದೂರು: ಈಚೆಗೆ ಆಲ್ದೂರು ಪರಿಸರದಲ್ಲಿ ಆಯೋಜಿಸಿದ್ದ ಮಲ್ನಾಡ್ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಪ್ರಥಮ ಆವೃತ್ತಿಯ ಚಾಂಪಿಯನ್ಸ್ ಮತ್ತು ರನ್ನರ್ಸ್ ತಂಡ ತಮ್ಮ ನಗದು ಬಹುಮಾನವನ್ನು ಚಿಕ್ಕಮಗಳೂರಿನ ಅಂಧ ಮಕ್ಕಳ ಪಾಠಶಾಲೆಗೆ ಭಾನುವಾರ ಕೊಡುಗೆಯಾಗಿ ನೀಡಿದರು.
ಪ್ರಥಮ ಸ್ಥಾನ ಪಡೆದ ಹೆಗ್ಗಡತಿಯರ ತಂಡದ ನಾಯಕಿ ಸಾಧ್ವಿ ಮಧುಸೂದನ್, ದ್ವಿತೀಯ ಬಹುಮಾನ ಪಡೆದ ಡ್ರೀಮ್ ಚೇಜರ್ಸ್ ತಂಡದ ನಾಯಕಿ ರಕ್ಷಿತಾ ವೈಶಾಖ್ ಮಾತನಾಡಿ
ಕ್ರೀಡೆಯನ್ನು ಆರೋಗ್ಯಕರವಾಗಿ ಲೀಗ್ ನಲ್ಲಿ ಆಟವಾಡಿ ಫೈನಲ್ ಪಂದ್ಯದ ಬಳಿಕ ಎರಡು ವಿಜೇತ ತಂಡದ ಆಟಗಾರರ ಸಹಮತದೊಂದಿಗೆ ಪ್ರಥಮ ಬಹುಮಾನದ ಹಣ 11000 ಮತ್ತು ದ್ವಿತೀಯ ಬಹುಮಾನದ ಹಣ 5,500
ರೂಪಾಯಿಗಳನ್ನು ಅಂಧ ಮಕ್ಕಳ ಪಾಠಶಾಲೆಗೆ ನಿರ್ಧರಿಸಲಾಗಿತ್ತು ಅದರಂತೆ ಭಾನುವಾರ ಕ್ರೀಡಾಕೂಟದ ಆರು ಮಂದಿ ಆಯೋಜಕರು ಮತ್ತು ಪ್ರಥಮ ದ್ವಿತೀಯ ಸ್ಥಾನ ಪಡೆದ ಎರಡು ತಂಡದ ಆಟಗಾರರೆಲ್ಲರೂ ಶಾಲೆಗೆ ತೆರಳಿ ಪ್ರಾಂಶುಪಾಲರಾದ ಲಕ್ಷ್ಮಣ್ ಗೌಡರಿಗೆ ಒಟ್ಟು 16500 ರೂಪಾಯಿ ಹಣವನ್ನು ಕೊಡುಗೆಯಾಗಿ ನೀಡಿದ್ದೇವೆ.
ಮತ್ತು ಇಲ್ಲಿರುವ ಮಕ್ಕಳೊಂದಿಗೆ ಪ್ರೀತಿಯಿಂದ ಕೆಲಕಾಲ ಸಮಯ
ಕಳೆದಿದ್ದೇವೆ ಎಂದು ಅಭಿಪ್ರಾಯ ಹಂಚಿಕೊಂಡರು.

