ಎನ್.ಎಲ್.ಸುಂದರೇಶ್ವರ್ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟ….
1 min read
ಎನ್.ಎಲ್.ಸುಂದರೇಶ್ವರ್ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟ
ಮೂಡಿಗೆರೆ ಎಂಜಿಎಂ ಆಸ್ಪತ್ರೆ ಟ್ರಸ್ಟಿ ಅಧ್ಯಕ್ಷ ಹಾಗೂ ಹಿರಿಯ ಕಾಫಿ ಬೆಳೆಗಾರ ಎನ್.ಎಲ್.ಸುಂದರೇಶ್ಚರ್ ಅವರ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್. ಜಯರಾಂಗೌಡ ಹೇಳಿದರು.”
ಅವರು, ಹಿರಿಯ ಕಾಫಿ ಬೆಳೆಗಾರ ಎನ್.ಎಲ್.ಸುಂದರೇಶ್ವರ್ ನಿಧನದ ಹಿನ್ನಲೆಯಲ್ಲಿ ಶನಿವಾರ ಪಟ್ಟಣದ ವಿಎಸ್. ಬಿಜಿಎಸ್ ಶಾಲೆಯಲ್ಲಿ ಒಕ್ಕಲಿಗರ ಸಂಘ ಎಜುಕೇಷನ್ ಟ್ರಸ್ಟಿಯಿಂದ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ಎನ್. ಎಲ್.ಸುಂದರೇಶ್ವರ್ ಅವರು ಎಂಜಿಎಂ ಟ್ರಸ್ಟಿಯಾಗಿ, ನಂತರ ಅಧ್ಯಕ್ಷರಾಗಿ ಅವರ ಆಸ್ಪತ್ರೆ ಅಭಿವೃದ್ಧಿಗೆ ಶ್ರಮಿಸಿದ್ದಾರೆಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಹಿರಿಯ ವೈದ್ಯ ಡಾ.ಅನಂತ ಪದ್ಮನಾಭ, ಎಲ್.ಪುಣ್ಯಮೂರ್ತಿ, ವಿವೇಕ್ ಪುಣ್ಯಮೂರ್ತಿ, ಎಂ.ಡಿ.ಜಯಪಾಲ್, ನವೀನ್ ಪಲ್ಗುಣಿ ಮಾತನಾಡಿದರು. ಪ್ರಾಂಶುಪಾಲ ಸಂದೇಶ್, ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

