लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಗರದ ಒಳಗೆ ರಸ್ತೆಯುದ್ದಕ್ಕು ಪೈಪ್‌ಲೈನ್ ಅಳವಡಿಸಲು ತೆಗೆದಿರುವ ಗುಂಡಿಯನ್ನು ಶೀಘ್ರವಾಗಿ ಮುಚ್ಚಿಸಲು ಕೋರಿ…

1 min read

ಮೂಡಿಗೆರ.ನಗರದ ಒಳಗೆ ರಸ್ತೆಯುದ್ದಕ್ಕು ಪೈಪ್‌ಲೈನ್ ಅಳವಡಿಸಲು ತೆಗೆದಿರುವ ಗುಂಡಿಯನ್ನು ಶೀಘ್ರವಾಗಿ ಮುಚ್ಚಿಸಲು ಕೋರಿ.
‎
‎ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹಲವಾರು ತಿಂಗಳಿನಿಂದ ಮೂಡಿಗೆರೆ ಪಟ್ಟಣದ ಒಳಗೆ ಹಲವಾರು ಕಡೆ ಪೈಪ್ ಲೈನ್ ಅಳವಡಿಸಲು ರಸ್ತೆಯ ಉದ್ದಕ್ಕು ಮೀಟರ್‌ಗಳ ಅಂತರದಲ್ಲಿ ಗುಂಡಿಗಳನ್ನು ತೆಗೆದಿರುತ್ತಾರೆ. ಗುಂಡಿಗಳು ವಾಹನಗಳ ಸಂಚಾರದಿಂದಾಗಿ ಅಡಿಗಳಷ್ಟು ಉದ್ದ ಮತ್ತು ಅಗಲದ ಗುಂಡಿಗಳಾಗಿ ಮಾರ್ಪಟ್ಟಿರುತ್ತವೆ.
‎
‎ಈ ಗುಂಡಿಗಳಿಂದಾಗಿ ದ್ವಿ-ಚಕ್ರ ವಾಹನಗಳಲ್ಲಿ ಸಂಚರಿಸುವವರು ಪದೆ ಪದೆ ಆಯಾ ತಪ್ಪಿ ಬಿಳುವುದು. ಎಲ್ಲಾ ವಾಹನಗಳ ಬಿಡಿ ಭಾಗಗಳು ಅತಿಯಾಗಿ ಹಾಳಾಗಿ ರಿಪೇರಿಗೆ ಬರುತ್ತಿವೆ. ಈ ಕಾಮಗಾರಿಯು ಆಮೇಗತಿಯಲ್ಲಿ ಸಾಗುತ್ತಿದ್ದು, ಗುಂಡಿಗಳನ್ನು ಮುಚ್ಚದೆ ಸರ್ವಾಜನಿಕರಿಗೆ ಮತ್ತು ಸವಾರರಿಗೆ ದಿನ ನಿತ್ಯ ಸಮಸ್ಯೆಗಳು ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಒಂದು ವಾರದ ಒಳಗೆ ಪರಿಹರಿಸದಿದ್ದಲ್ಲಿ ವಿಶ್ವ ಹಿಂದೂ ಪರಿಷದ್, ಭಜರಂಗದಳ ಮೂಡಿಗೆರೆ ಪಟ್ಟಣ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸುತ್ತಿದ್ದೇವೆ.
‎
‎ದಯಮಾಡಿ ಈ ಮನವಿಯನ್ನು ತಾವುಗಳು ತುರ್ತಾಗಿ ಗಮನಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
‎
‎
‎
‎ವಿಶ್ವ ಹಿಂದೂ ಪರಿಷದ್,
‎ಭಜರಂಗದಳ..ಮೂಡಿಗೆರೆ

About Author

Leave a Reply

Your email address will not be published. Required fields are marked *

You may have missed