ನಷ್ಟದಲ್ಲಿದ್ದ ಕಾಫಿಡೇ 210 ಕೋಟಿ ರೂ. ಲಾಭಕ್ಕೆ ತಂದ ಸಿದ್ದಾರ್ಥ ಪತ್ನಿ ಮಾಳವಿಕ….
1 min read
ನಷ್ಟದಲ್ಲಿದ್ದ ಕಾಫಿಡೇ 210 ಕೋಟಿ ರೂ. ಲಾಭಕ್ಕೆ ತಂದ ಸಿದ್ದಾರ್ಥ ಪತ್ನಿ ಮಾಳವಿಕ
ಸಾಲಕ್ಕೆ ಹೆದರಿ 2019ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಎಸ್ಸೆಂ ಕೃಷ್ಣ ಅಳಿಯ
ಇನ್ನೇನು ಮುಳುಗೇಹೋಯಿತು ಎಂದಿದ್ದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಇದೀಗ ಲಾಭದತ್ತ ಮುಖ ಮಾಡಿದೆ. 2026ರ ಆರ್ಥಿಕ ವರ್ಷದಲ್ಲಿ ಸಂಸ್ಥೆ 210. ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 143 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದ್ದ ಸಂಸ್ಥೆ ಈಗ ಲಾಭದತ್ತ ಬಂದಿದೆ. ಇದಕ್ಕೆ ದಿವಂಗತ ವಿ.ಜಿ. ಸಿದ್ದಾರ್ಥ್ ಪತ್ನಿ ಕಾಫಿ ಡೇ ಅಧ್ಯಕ್ಷೆ ಹಾಗೂ ಸಿಇಓ ಆಗಿರುವ ಮಾಳವಿಕ ಹೆಗ್ಡೆ ಅವರ ಯೋಚನೆಗಳು ಸಂಸ್ಥೆ ಮತ್ತೆ ಮುಂಚೂಣಿಗೆ ಬರಲು ಕಾರಣವಾಗಿದೆ.
ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ದ ಮಾಳವಿಕಾ ಹೆಗ್ಡೆ ಅವರ ಸಾಧನೆಯನ್ನು ಭಾರತೀಯ ಕಾರ್ಪೊರೇಟ್ ವಲಯದ ಅತಿ ದೊಡ್ಡ ಮರುಜೀವ ಎಂದು ಪರಿಗಣಿಸಲಾಗಿದೆ. ವ್ಯವಹಾರದ ನಿರಂತರತೆಯನ್ನು ಕಾಪಾಡಿಕೊಂಡು, ಆಸ್ತಿಗಳನ್ನು ಮಾರಾಟ ಮಾಡಿ ಮತ್ತು ಅನಾವಶ್ಯಕ ಮಳಿಗೆಗಳನ್ನು ಮುಚ್ಚುವ ಮೂಲಕ ಕಂಪನಿಯ ಸಾಲದ ಹೊರೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ.
ವಿ.ಜಿ. ಸಿದ್ಧಾರ್ಥ 1996 ರಲ್ಲಿ ಕಾಫಿ ಡೇ ಸರಪಳಿಯ ಮೂಲ ಸಂಸ್ಥೆಯಾದ ಕಾಫಿ ಡೇ ಗ್ಲೋಬಲ್ ಅನ್ನು ಪ್ರಾರಂಭಿಸಿದರು. ಮೊದಲ ಸಿಸಿಡಿ ಔಬ್ಲೆಟ್ ಅನ್ನು ಜುಲೈ 11, 1996 ರಂದು ಕರ್ನಾಟಕದ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಸ್ಥಾಪಿಸಲಾಯಿತು.
’ಇದು ಭಾರತದ ಇತರ ನಗರಗಳಿಗೆ ವೇಗವಾಗಿ ವಿಸ್ತರಿಸಿತು. 2011 ರ ಹೊತ್ತಿಗೆ ದೇಶಾದ್ಯಂತ 1,000 ಕ್ಕೂ ಹೆಚ್ಚು ಕೆಫೆ ಔಟ್ಲೆಟ್ಗಳು ಆರಂಭವಾದವು.
ನಂತರ ಸಂಸ್ಥೆ ನಷ್ಟಕ್ಕೆ ಒಳಗಾಯಿತು ಎಂದು ಹೇಳಲಾಗಿದ್ದು, 2019ರ ಜುಲೈ 29ರಂದು ಸಿದ್ದಾರ್ಥ ಕಾಣೆಯಾದರು. ನಂತರ ಅವರ ಮೃತದೇಹ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ಸಿದ್ಧಾರ್ಥ ಅವರು ನಿರ್ದೇಶಕರ ಮಂಡಳಿ ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಬರೆದಿದ್ದಾರೆಂದು ಭಾವಿಸಲಾದ ಪತ್ರವನ್ನು ಬಹಿರಂಗಪಡಿಸಲಾಯಿತು. ನಂತರ ಮಾರ್ಚ್ 2020 ರಲ್ಲಿ, ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್, ಬೆಂಗಳೂರಿನ ಹೊರವಲಯದಲ್ಲಿರುವ 90 ಎಕರೆ ವಿಸ್ತೀರ್ಣದ ಟೆಕ್ ಪಾರ್ಕ್ ಗ್ಲೋಬಲ್ ವಿಲೇಜ್ ಟೆಕ್ನಾಲಜಿ ಪಾರ್ಕ್ ಅನ್ನು ಕೆಫೆ ಕಾಫಿ ಡೇಯ ಸಹವರ್ತಿ ಸಂಸ್ಥೆಗಳು ಮತ್ತು ಅವುಗಳ ಪ್ರವರ್ತಕರ ಸಾಲವನ್ನು ಮರುಪಾವತಿಸಲು ಒಟ್ಟು 2.700 ಕೋಟಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿತು.
ಔಬ್ಲೆಟ್ಗಳು: 2018 ರಲ್ಲಿ ಸಿದ್ದಾರ್ಥ ಅವರ ಮರಣದ
ಮೊದಲು, ಕಾಫಿ ಡೇ ಸುಮಾರು 1,700 ಕೆಫೆಗಳು, 500 ಕ್ಕೂ ಹೆಚ್ಚು ಕಿಯೋಸ್ಟ್ಗಳು, 400 ಕ್ಕೂ ಹೆಚ್ಚು ಫ್ರೆಶ್ ಮತ್ತು ಗೌಂಡ್ ಔಟ್ಲೆಟ್ಗಳು ಮತ್ತು ವಿವಿಧ ಕಂಪನಿಗಳ ಕಚೇರಿಗಳಲ್ಲಿ 47,500 ಕ್ಕೂ ಹೆಚ್ಚು ವೆಂಡಿಂಗ್ ಮೆಷಿನ್ಗಳನ್ನು ಹೊಂದಿತ್ತು. ಸೆಪ್ಟೆಂಬರ್ 2024 ರ ಹೊತ್ತಿಗೆ, ಕಂಪನಿಯು 141 ನಗರಗಳಲ್ಲಿ 450 ಕೆಫೆ ಔಟ್ಲೆಟ್ಗಳನ್ನು ಹೊಂದಿತ್ತು. ಸೆಪ್ಟೆಂಬರ್ 30, 2025 ರ ಹೊತ್ತಿಗೆ. ಕೆಫೆಗಳ ಸಂಖ್ಯೆ 423 ರಷ್ಟಿತ್ತು. ಆದರೆ ವೆಂಡಿಂಗ್ ಮೆಷಿನ್ ವ್ಯವಹಾರವು 55,733 ಯಂತ್ರಗಳೊಂದಿಗೆ ಉಳಿದುಕೊಂಡಿದ್ದು ಸಂಸ್ಥೆ ಲಾಭದತ್ತ ಸಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

