ಅದಕ್ಕೊಂದು ಸ್ಪಷ್ಟನೆ ನಿದರ್ಶನ ನಮ್ಮ ಹೋರಾಟ ಆರನೇ ದಿನಕ್ಕೆ….
1 min read
ಅದಕ್ಕೊಂದು ಸ್ಪಷ್ಟನೆ ನಿದರ್ಶನ ನಮ್ಮ ಹೋರಾಟ ಆರನೇ ದಿನಕ್ಕೆ
ಸ್ವತಂತ್ರ ಪೂರ್ವ ಹೋರಾಟದಲ್ಲಿ ಭಾರತ ದೇಶದ ಕೆಲವೊಂದು ಸಂಸ್ಥಾನಗಳನ್ನು ಉಳಿಸಿಕೊಳ್ಳಲು ರಕ್ತಸಿಕ್ತ ಹೋರಾಟಗಳ ನಡೆದು ಈ ಭಾರತ ದೇಶವನ್ನು ಉಳಿಸಿದ್ದು ಇತಿಹಾಸ. ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ರಚನೆಯಾಗಿ ಭಾರತ ದೇಶದ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ಸಾಂವಿಧಾನಿಕ ಕೊಡುಗೆಗಳನ್ನು ನೀಡಿದೆ.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಹಲವಾರು ಕರ್ತವ್ಯಗಳಲ್ಲಿ ಸೇರ್ಪಡೆಗೊಂಡಿದ್ದಾರೆ. ಆದರೆ ನಮ್ಮನ್ನು ಆಳುವ ಪ್ರಜಾಪ್ರಭುತ್ವದ ಅರಸರು ದೇಶದ ಉದ್ಧಾರನೆಪದಲ್ಲಿ ಬಂಡವಾಳಶಾಹಿ ,ಮಾಲೀಕರಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಇಡೀ ದೇಶವನ್ನೇ ಒತ್ತೆ ಇಟ್ಟು. ಸಂಪತ್ಭರಿತವಾದ ಭಾರತದ ಸಂಪನ್ಮೂಲವನ್ನು ಮಾರಾಟ ಮಾಡಿರುವುದು ಸತ್ಯ. ಅದರ ಪರಿಣಾಮವಾಗಿ ಈ ದೇಶದ ನೆಲ, ಜಲ ಎಲ್ಲಾ ಮಾರಾಟಗೊಂಡಿದೆ. ಉಳಿದ ಅಲ್ಪಸ್ವಲ್ಪ ಭೂಮಿಯನ್ನು ಬಲಾಢ್ಯ ಮಾಲೀಕರು ಪಡೆದು, ಒಂದು ಕಡೆಯಿಂದ ಕಾರ್ಮಿಕರ ಶೋಷಣೆ ನಡೆಸುತ್ತಿದ್ದರೆ. ಸರ್ಕಾರಿ ಕಾರ್ಮಿಕರು (ನೌಕರರು ) ಕೆಲವೊಂದು ಭ್ರಷ್ಟಾಚಾರದಲ್ಲಿ ಪ್ರಮುಖ ಪಾತ್ರದಾರಿಗಳು. ಯಾಕೆಂದರೆ ತಳಮಟ್ಟದ ಕೆಲಸ ಮಾಡುವ ಕಾರ್ಮಿಕರನು, ಪ್ರಭುತ್ವವನ್ನು ಒಪ್ಪಿಕೊಂಡ ಕಾರ್ಮಿಕರು ಶೋಷಣೆ ಮಾಡುವುದು ಸಹಜವಾಗಿ ನಡೆಯುತ್ತಿದೆ. ಅದರ ಪರಿಣಾಮವಾಗಿ ದೇಶದಲ್ಲಿ ಸಂಪತ್ತು ಇದ್ದವರು, ಇಲ್ಲದವರು. ಬಡವರು,ಶ್ರೀಮಂತರು, ಮೇಲು,ಕೀಳು ಎಂಬುದು ತಾಂಡವಾಡುತ್ತಿದೆ. ದೇಶದ ರಾಜಕಾರಣದಲ್ಲಿ ಧಾರ್ಮಿಕತೆ ಬೆರೆತು, ವಿದ್ಯಾರ್ಥಿ ಯುವಜನರಲ್ಲಿ ಕೋಮುವಾದ, ಮತೀಯವಾದ ಸೃಷ್ಟಿಸಿ ದೇಶದ ಭವಿಷ್ಯ ನಿರ್ಧರಿಸುವ ಯುವಜನತೆ ದೇವರು, ಧರ್ಮದ ಹೆಸರಿನಲ್ಲಿ ಯಾರದೋ ಉದ್ಧಾರಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ. ದೇಶದ ಬಹುತೇಕ ಸಂಪತ್ತು ರಾಜಕಾರಣಿಗಳು ಮತ್ತು ಶ್ರೀಮಂತರ ಪಾಲಾಗಿದ್ದು, ದೇಶದ 85 ಶೇಕಡ ಕಾರ್ಮಿಕರು ಕನಿಷ್ಠ ವೇತನಕ್ಕೂ ಪರದಾಡುತ್ತಿದ್ದಾರೆ. ಸಂವಿಧಾನದಲ್ಲಿ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ನಾಲ್ಕು ಎಕರೆಗೂ ಮೇಲ್ಪಟ್ಟು ಆಸ್ತಿ ಹೊಂದುವ ಹಕ್ಕು ಹೊಂದಿದ್ದರೂ 45 ರಿಂದ 50 ಶೇಕಡ ಪ್ರಜೆಗಳು ಇರಲು ಮನೆಯೂ ಕೂಡ ಇಲ್ಲವೆಂದರೆ ನಂಬಲೇಬೇಕು. ಇದು ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶದ ನೈಜ ಪರಿಸ್ಥಿತಿ. ಕಾರ್ಮಿಕರು ದಿನನಿತ್ಯ ಬದುಕಿಗಾಗಿ ಹೋರಾಟ ಮಾಡುವ ಅನಿವಾರ್ಯವಾಗಿದೆ. ದೇಶದ ಪರಿಸ್ಥಿತಿ ಒಂದೆಡೆ ಭಿನ್ನವಾದರೆ, ಬಯಲು ಸೀಮೆ ಮಲೆನಾಡಿನ ಬದುಕು ಭಿನ್ನವಾಗಿದೆ. ಮಲೆನಾಡು ಸಂಪತ್ಪರಿತ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಯಾಲಕ್ಕಿ,ಮೆಣಸು,ಅಡಿಕೆ ಮೂಲಕ ಸಂಪತ್ತು ಹೆಚ್ಚಿಸಿದರೆ, ದುಡಿಯುವ ವರ್ಗ ಒಂದು ಕಡೆ ಶೋಷಣೆ ಮತ್ತೊಂದು ಕಡೆ ಆರ್ಥಿಕವಾಗಿ ಹಿನ್ನಡೆ ದುಡಿದ ಶ್ರಮಕ್ಕೆ ಸರ್ಕಾರ ನಿರ್ಧರಿಸಿದ ಕನಿಷ್ಠ ವೇತನ ಕೊಡದೆ ದಬ್ಬಾಳಿಕೆ ನಡೆಸುವುದು ಇಲ್ಲಿನ ಒಂದು ಪ್ರತಿಷ್ಠೆ. ಇಲ್ಲಿ ದೇಶದ ಕಂಪನಿಗಳು, ವಿದೇಶಿ ಕಂಪನಿಗಳು, ಕಾರ್ಪೊರೇಟ್ಗಳು ಮಾಲೀಕರು ಎಲ್ಲಾ ಭೂಮಿಯನ್ನು ಕುಳಿತಲ್ಲೇ ನೋಂದಣಿ ಮಾಡಿಸಿ, ಒಂದು ಎಕರಗೆ ಒಂದು ರೂಪಾಯಿ ಕೊಟ್ಟು ಖರೀದಿ ಮಾಡಿರೋದು ದೇಶದಲ್ಲಿ ಸುದ್ದಿಯಾಗಿದೆ. ಆದರೆ ಮಲೆನಾಡಿನಲ್ಲಿ ನಿರಂತರ ಒಂದು ಸೂರಿಗಾಗಿ ಹೋರಾಟ ನಡೆಸುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಯುತ್ತಾ ಸಾಗುವ ಅಸಂಘಟಿತ ಕಾರ್ಮಿಕರ ಪರಿಸ್ಥಿತಿ ಸರಕಾರಕ್ಕಾಗಲಿ ಅಧಿಕಾರ ವರ್ಗಕ್ಕೆ ಆಗಲಿ ಗಮನಕ್ಕೆ ಬಾರದಿರುವುದು, ಅವರನ್ನು ನಿರ್ಲಕ್ಷ ಮಾಡುವುದು aaaaaaaಬಹುದೊಡ್ಡ ಪ್ರಜಾಪ್ರಭುತ್ವದ ಒಂದು ನಿದರ್ಶನ. ಕಳೆದ ಐದು ದಿನಗಳಿಂದ ನಿರಂತರವಾಗಿ ಮಳೆ ಗಾಳಿ ಲೆಕ್ಕಿಸದೆ ಗುಡಿಸಲು ನಿರ್ಮಿಸಿ, ಆಹೋರಾತ್ರಿ ಧರಣಿಯನ್ನು ನಡೆಸುತ್ತಿರುವ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಮತ್ತು ವಸತಿಗಾಗಿ ಹೋರಾಟ ವೇದಿಕೆಯಿಂದ ಧರಣಿಯನ್ನು ಈ ಕ್ಷೇತ್ರದ ಶಾಸಕರಾಗಲಿ,ಮಾಜಿ ಶಾಸಕರಾಗಲಿ, ಯಾವುದೇ ಜನಪ್ರತಿನಿಧಿಗಳು ನಿರ್ಲಕ್ಷಿಸುವುದು ವಿಪರ್ಯಾಸ. Aaaaaaaದುಡಿಯುವ ವರ್ಗ ತನ್ನ ವಿಕೋಪವನ್ನು ಪ್ರದರ್ಶಿಸಿದರೆ ಪರಿಣಾಮ ಯಾವ ರೀತಿಯೆಲ್ಲಾಗುತ್ತದೆಂದು ಹಲವಾರು ನಿದರ್ಶನಗಳಿವೆ..!!
ಅದಕ್ಕೊಂದು ಸ್ಪಷ್ಟನೆ ನಿದರ್ಶನ ನಮ್ಮ ಹೋರಾಟ ಆರನೇ ದಿನಕ್ಕೆ….
ಕೃಷ್ಣಪ್ಪ ಕೆ, ಕೆ
ಟ್ರೇಡ್ ಸೆಂಟರ್ ಆಫ್ ಇಂಡಿಯಾTUCl

