ಶಾಲಾ ಪ್ರಾರಂಭೋತ್ಸವ ಶಾಲಾ ಮಕ್ಕಳಿಗೆ ಅದ್ದೂರಿ ಸ್ವಾಗತ….
1 min read
ಶಾಲಾ ಪ್ರಾರಂಭೋತ್ಸವ ಶಾಲಾ ಮಕ್ಕಳಿಗೆ ಅದ್ದೂರಿ ಸ್ವಾಗತ




ಆಲ್ದೂರು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾದರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆ ಪುನರಾರಂಭ ಹಿನ್ನೆಲೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ಮಾತನಾಡಿ ಒಂದು ಸುಂದರ ಉದ್ಯಾನವನವಾದರೆ ಅದರೊಳಗಿನ ಹೂ ತೋಟದ ಸುಂದರ ಮೊಗ್ಗುಗಳು ವಿದ್ಯಾರ್ಥಿಗಳಾಗಿದ್ದು, ಅವರ ಭವಿಷ್ಯವನ್ನು ಭದ್ರವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರು ಪೋಷಕರು ನಮ್ಮೆಲ್ಲರದ್ದು ಆಗಿದೆ ಎಂದು ತಿಳಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತುಳಸೇಗೌಡ ಸಿಟಿ, ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ರವಿಕುಮಾರ್ ಎಚ್ಎಲ್, ಮಾಜಿ ಪಂಚಾಯತಿ ಸದಸ್ಯ ಗಿರೀಶ್, ಮಕ್ಕಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸಿಹಿಯನ್ನು ಹಂಚಲಾಯಿತು.
ವಲಯ ಸಂಪನ್ಮೂಲ ವ್ಯಕ್ತಿ ಕಮಲ, ಮುಖ್ಯ ಶಿಕ್ಷಕಿ ಕಮಲಾಕ್ಷಿ, ಸಹ ಶಿಕ್ಷಕರಾದ ಸುನಿತಾ ,ಗೀತಾ ,ಲಲಿತ, ಅಶೋಕ್, ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್, ಸದಸ್ಯರುಗಳು ,ಅಡುಗೆ ಸಿಬ್ಬಂದಿಗಳು
ಪೋಷಕರು ಭಾಗವಹಿಸಿದ್ದರು.

