लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಿದ್ದರಾಮಯ್ಯನವರನಡೆ ಯುವರಾಜಕಾರಣಿಗಳಿಗೆ ಮಾದರಿ

ಕಳೆದ ಎಂಟು ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಗಳಾಗಿ ಸಮರ್ಥವಾಗಿ, ಪಾರದರ್ಶಕವಾಗಿ, ನಿಷ್ಕಳಂಕವಾಗಿ ಕಾರ್ಯ ನಿರ್ವಹಿಸಿದ ಸಿದ್ದರಾಮಯ್ಯನವರು ಪಕ್ಷದ ಕಟ್ಟುಪಾಡುಗಳಿಗೆ ಬದ್ದರಾಗಿ ತಮ್ಮ ಸ್ಥಾನಕ್ಕೆ ತುಂಬ ಗೌರವಯುತವಾಗಿ ರಾಜೀನಾಮೆ ನೀಡಿರುವ ವಿಚಾರ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ.

ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಿಯೂ ತಮ್ಮ ಕೈಗಳಿಗೆ ಕೆಸರು ಮಾಡಿಕೊಳ್ಳದೆ, ಯಾವುದೆ ಭ್ರಷ್ಟಾಚಾರದ ಆರೋಪಗಳಿಗೆ ಗು-ರಿಯಾಗದೆ, ರಾಜಕೀಯ ಟೀಕೆಗಳನ್ನು ಹೊರತುಪಡಿಸಿದಂತೆ ವೈಯಕ್ತಿಕ ಟೀಕೆಗಳಿಗೆ ಗುರಿಯಾಗದೆ ಪ್ರಬುದ್ಧತೆಯಿಂದ ವರ್ತಿಸಿರುವ ಮೂಲಕ ರಾಜ್ಯದ ಜನತೆಗೂ ಗೌರವ ತಂದಿದ್ದಾರೆ. ಪಕ್ಷ, ಸೈದ್ಧಾಂತಿಕ ವಿಚಾರಗಳು ವಿಭಿನ್ನವಾಗಿದ್ದರೂ “ಸಿದ್ದರಾಮಯ್ಯನವರನ್ನು ವೈಯಕ್ತಿಕ ದೃಷ್ಟಿಯಿಂದ ನೋಡುವುದಾದರೂ ಸಹ ಎಲ್ಲಿಯೂ ಸ್ಥಾನದ ಘನತೆಗೆ ಚ್ಯುತಿ ಬಾರದಂತೆ ಎಲ್ಲಾ ಜಾತಿ ವರ್ಗ, ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಮಂತ್ರಿ ಮಂಡಲದಲ್ಲಿಯೂ ಯಾವುದೇ ಭಿನ್ನಮತಕ್ಕೆ ಆಸ್ಪದವಿಲ್ಲದಂತೆ 8 ವರ್ಷಗಳ ಕಾಲ ಅವರು ನಡೆದುಕೊಂಡ ರೀತಿ ಅವಿಸ್ಮರಣೀಯ. ಸಹ

ಓರ್ವ ಕಿರಿಯ ರಾಜಕಾರಣಿ ಕಟುವಾಗಿ ಟೀಕಿಸಿದ ಸಂದರ್ಭದಲ್ಲಿಯೂ ಅದನ್ನು ತುಂಬಾ ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಸದನಗಳಲ್ಲಿ ಅವರು ಕಿರಿಯ ರಾಜಕಾರಣಿಗಳನ್ನು ನಡೆಸಿಕೊಂಡ ರೀತಿಯೂ ಸಹ ಮುಂದಿನ ರಾಜಕಾರಣಿಗಳಿಗೆ ದಾರಿ ದೀಪವಾಗಬಲ್ಲದು.ಪವರ ಶೇರಿಂಗ್ ವಿಚಾರ ಚರ್ಚೆಯಲ್ಲಿದ್ದಗಲೂ ಸಹ ತಮ್ಮ ಒಳ ಬೇಗುದಿ ಏನೇ ಇದ್ದರೂ ಎಲ್ಲಿಯೂ ಅದನ್ನು ಮಾತನಾಡಿಕೊಳ್ಳದೆ ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಷ್ಟೇ ಮಾತನಾಡಿದ ಸಿದ್ದರಾಮಯ್ಯನವರು ನುಡಿದಂತೆ ನಡೆದು ರಾಜ್ಯದ ಜನರೆದುರು ತಮ್ಮ ಸ್ಥಾನವನ್ನು ಉತ್ತುಂಗಕ್ಕೇರಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈ ಕಮಾಂಡ್ ಸೂಚಿಸಿದ ನಂತರ ಯಾವುದೇ ಚರ್ಚೆಗೆ ಆಸ್ಪದವಿಲ್ಲದಂತೆ ಪಕ್ಷಕ್ಕೆ ಯಾವುದೇ ಮುಜುಗರ ಮೂಡಿಸದೆ ಬಹು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಸಹ ಉತ್ತೇಜಿಸುತ್ತಾ ಒಂದು ಒಳ್ಳೆಯ ಬಿಸಿ ಅಪ್ಪುಗೆಯನ್ನು ನೀಡಿ ರಾಜ್ಯದ ಜನರಿಗೆ ನಮ್ಮ ಸ್ನೇಹ ಅಚಲ ಎಂಬುದನ್ನು ಸಾರಿದ್ದಾರೆ.

ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ-ಕೀಯವಾಗಿ ಆಕ್ರಮಣಕಾರಿ ಗುಣಗಳನ್ನು ಹೊಂದಿದ್ದರೂ ಸಹ ಸಿದ್ದರಾಮಯ್ಯನವರ ವಿಚಾರದಲ್ಲಿ ಅವರು ನೀಡಿದ ಸಹಕಾರವನ್ನು ರಾಜ್ಯದ ಜನತೆ ಕಣ್ಣಾರೆ ಕಂಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಬ್ರೆಕ್‌ ಫಾಸ್ಟ್ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯನವರ ಆತ್ಮೀಯ ಆಲಿಂಗನ ಮತ್ತು ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯನವರ ಕಾಲಿಗೆರಗಿದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.ಈ ಇಬ್ಬರು ನಾಯಕರ ಸಹನಶೀಲ, ಸ್ನೇಹ ಪರ ವರ್ತನೆ ರಾಜ್ಯ ರಾಜಕಾರಣದಲ್ಲಿ ಆಗಬಹುದಾಗಿದ್ದ ಹಲವು ತಲ್ಲಣಗಳಿಗೆ ಇತಿಶ್ರೀ ಹಾಡಿದೆ. ಈ ಇಬ್ಬರು ನಾಯಕರ ಸ್ನೇಹದ ಮಧುರತೆ ರಾಜ್ಯ ರಾಜಕಾರಣದ ಭವಿಷ್ಯದ ಬಗ್ಗೆ ಭರವೆ ಮೂಡಿಸಿದೆ

About Author

Leave a Reply

Your email address will not be published. Required fields are marked *

You may have missed