लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಬದಲಾವಣೆ ಯಾರಿಂದ ಮತ್ತು ಹೇಗೆ ?……. ‎ ‎ಸಮಾಜ ಬದಲಾಗಬೇಕು ನಿಜ, ‎ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.?…

1 min read

‎ಬದಲಾವಣೆ ಯಾರಿಂದ ಮತ್ತು ಹೇಗೆ ?…….
‎
‎ಸಮಾಜ ಬದಲಾಗಬೇಕು ನಿಜ,
‎ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.?
‎
‎ಸಾಮಾಜಿಕ ಜಾಲತಾಣಗಳಲ್ಲಿ  ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ  ?
‎
‎ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ, ನಮ್ಮಿಂದ ಸಾಧ್ಯವೇ  ?
‎
‎ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ. ಆದರೆ ವಾಸ್ತವ ಅಳವಡಿಕೆ ಅಸಾಧ್ಯ. !
‎
‎ಶ್ರೀಮಂತರಿಗೆ ಬದಲಾವಣೆ ಅಗತ್ಯವಿಲ್ಲ, ಬಡವರಿಗೆ ಬದಲಾಯಿಸುವ ಶಕ್ತಿ ಇಲ್ಲ. !
‎
‎ನಮ್ಮ ಜನ ಬದಲಾಗದೆ ಏನೂ ಮಾಡಲು ಸಾಧ್ಯವಿಲ್ಲ. !
‎
‎ಮೊದಲು ನೀವು ಬದಲಾಗಿ,
‎ಆಮೇಲೆ ಬೇರೆಯವರ ಬಗ್ಗೆ ಮಾತನಾಡಿ.!
‎
‎ಎಲ್ಲ ಎಲ್ಲವನು ಅರಿತು ಫಲವೇನು,
‎ತನ್ನ ತಾನು ಅರಿಯಬೇಕಲ್ಲವೇ !
‎
‎ಲೋಕದಾ ಡೊಂಕ ನೀವೇಕೆ ತಿದ್ದುವಿರು,
‎ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
‎ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ !
‎
‎ಎಲ್ಲರೂ ಕಳ್ಳರು, ಎಲ್ಲರೂ ಭ್ರಷ್ಟರು, ಹಾಗಾದರೆ ಬದಲಾವಣೆ ಮಾಡುವುದು ಯಾರನ್ನು ?
‎
‎ಬದಲಾವಣೆ ಒಂದು ಕನಸು ಭ್ರಮೆ. ಸುಮ್ಮನೆ ಬೇರೆ ಕೆಲಸ ನೋಡಿಕೊಳ್ಳಿ. !
‎
‎ಜನ ಬದಲಾದರೆ ಸಮಾಜ ತನ್ನಿಂದ ತಾನೇ ಬದಲಾಗುತ್ತದೆ. !
‎
‎ಸಮಾಜ ಬದಲಾಗಬೇಕಾದರೆ ಮೊದಲು ಜನ ಬದಲಾಗಬೇಕು. !
‎
‎ಒಳ್ಳೆಯ ಸರ್ಕಾರದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. !
‎
‎ಸರ್ಕಾರ ಒಳ್ಳೆಯದು ಬರಬೇಕಾದರೆ ಮೊದಲು ಜನ ಬದಲಾಗಬೇಕು. !
‎
‎ಹೌದು, 
‎ಈ ರೀತಿಯ ಚರ್ಚೆಗಳು ದಿನನಿತ್ಯ ನಿರಂತರವಾಗಿ ಆಗುತ್ತಲೇ ಇದೆ.
‎
‎ಸ್ವಲ್ಪ ಮಟ್ಟಿಗೆ ಉತ್ತರಗಳೂ ಸಿಗಬಹುದು.
‎
‎ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಬಹುದು.
‎
‎ಬದಲಾವಣೆ ಒಪ್ಪದ ಜನ ಇನ್ನೂ ಅನೇಕ ರೀತಿಯಲ್ಲಿ ವೇದಾಂತಗಳನ್ನು ಉವಾಚಿಸಿ ನಮ್ಮ ಬಾಯಿ ಮುಚ್ಚಿಸಬಹುದು !
‎
‎ಹಾಗೆಂದು ಸುಮ್ಮನೆ ಇರುವುದು ಉಚಿತವೇ ?
‎
‎ಯಥಾಸ್ಥಿತಿ ಒಪ್ಪಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕೆ ?
‎
‎ವ್ಯವಸ್ಥೆಯ ಲಾಭ ಪಡೆಯುತ್ತಿರುವ ಶೋಷಕರ ಶೋಷಣೆ ಪ್ರಶ್ನೆಸಬಾರದೆ ?
‎
‎ಕನಿಷ್ಠ ನಮ್ಮ ಪ್ರಯತ್ನ ಮಾಡಬಾರದೆ‌ ?
‎
‎ಆದರೆ ವಾಸ್ತವ. ?
‎
‎ನಮ್ಮ ಮನಗಳಲ್ಲಿ,
‎ನಮ್ಮ ಮನೆಗಳಲ್ಲಿ,
‎ನಮ್ಮ ಮತಗಳಲ್ಲಿ.
‎ಬದಲಾವಣೆಯಾಗಬೇಕಿದೆ.
‎
‎ಆಗ ನಮ್ಮೆಲ್ಲರ ಕನಸಿನ ಸಮ ಸಮಾಜದ ಕನಸು ಸಾಧ್ಯವಾಗಬಹುದು.
‎
‎ಜನರ ಜೀವನಮಟ್ಟ ಸುಧಾರಣೆಯಾಗಬಹುದು.
‎
‎ಅದಕ್ಕಾಗಿ ನಾವು ಮಾಡಬೇಕಾದ ಮೊದಲನೆಯ ಕೆಲಸ ಸಂಘಟನೆ ಅಥವಾ ಒಂದು ಗೂಡುವುದು.
‎
‎ನಮ್ಮ ಮನಸ್ಸುಗಳನ್ನು ಜಾಗೃತಾವಸ್ಥೆಯಲ್ಲಿ ಇರುವಂತೆ ನೋಡಿಕೊಳ್ಳುವುದು.
‎
‎ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಬಗ್ಗೆ ಯೋಚಿಸುವಂತೆ ಮಾಡುವುದು.
‎
‎ಆ ಬದಲಾವಣೆಯ ನಿರೀಕ್ಷೆಯಲ್ಲಿ …………………………..
‎
‎ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
‎ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
‎ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
‎ಮನಸ್ಸುಗಳ ಅಂತರಂಗದ ಚಳವಳಿ,
‎ವಿವೇಕಾನಂದ. ಎಚ್. ಕೆ.
‎9663750451…….
‎9844013068…….

About Author

Leave a Reply

Your email address will not be published. Required fields are marked *

You may have missed