ಸಾರಳ್ಳಿ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ನಯನ….
1 min read
ಸಾರಳ್ಳಿ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ನಯನ
ಆಲ್ದೂರು: ಸಮೀಪದ
ದೊಡ್ಡಮಾಗರವಳ್ಳಿ ಪಂಚಾಯಿತಿ ವ್ಯಾಪ್ತಿಯ ಸಾರಳ್ಳಿ ಗ್ರಾಮದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಶಾಸಕಿ ನಯನ ಮೋಟಮ್ಮ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಸಾರಳ್ಳಿ ಸೇತುವೆ ಬಹಳಷ್ಟು ಹಳೆಯದು ಮತ್ತು ಶಿಥಿಲಾವಸ್ಥೆ ತಲುಪಿರುವ ವಿಷಯ ಗಮನಕ್ಕೆ ಬಂದಿದ್ದು, ಈ ಸೇತುವೆ ಬೆಳಗೋಡು ಚಂಡಗೋಡು ಕಂಚಿನ ಕಲ್ ದುರ್ಗಕ್ಕೆ ಗ್ರಾಮಗಳಿಗೆ ಸಂಪರ್ಕ ಸೇತುವೆ ಕೂಡ ಆಗಿದೆ ಆದ್ದರಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿ 2.5 ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು 1 ಕಿಮೀ 300 ಮೀಟರ್ ರಸ್ತೆಯನ್ನು ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಮುದಾಬಿರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಚ್ ಎಸ್, ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ಕೆಳಗೂರು ಪೂರ್ಣೇಶ್ ಡಿಆರ್, ಕಾರ್ಯದರ್ಶಿ ರವಿಚಂದ್ರ ಸಿ, ಚಂಡಗೋಡು ಬೂತ್ ಅಧ್ಯಕ್ಷ ರುದ್ರಯ್ಯ, ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಯು, ಇಬ್ರಾಹಿಂ,
ಸಾರಳ್ಳಿ ಸತ್ಯನಾರಾಯಣ,
ಅಖಿಲ್ ಪಾಶ, ಮುಖಂಡರಾದ ವಸಂತ್ ಆಲ್ದೂರು,ಅನೂಪ್ ಗೌಡ, ಚಂದ್ರು,ಕಲಂದರ್,ದೋ ಗುಡಿಗೆ ನಾಗೇಶ್,
ಗುತ್ತಿಗೆದಾರ ಆಪ್ತ ಪಟೇಲ್,ಅರ್ಚಕ ಚಂದ್ರನಾಥ ಭಟ್, ಸಂಕೇತ್, ರುದ್ರೇಗೌಡ, ಶಾಸಕರ ಆಪ್ತ ಸಹಾಯಕರಾದ ಶಂಶುದ್ದೀನ್, ಮಧು, ಸುನಿತಾ, ಕಾರ್ಯಕರ್ತರು ಭಾಗವಹಿಸಿದ್ದರು.

