लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮುಸ್ಲಿಂ ಸಂಘಟನೆಗಳ ಬೆದರಿಕೆಗೆ ಮಣಿದು ಹಿಜಾಬ್‌ಗೆ ಅನುಮತಿ….

1 min read

‎ಮುಸ್ಲಿಂ ಸಂಘಟನೆಗಳ ಬೆದರಿಕೆಗೆ ಮಣಿದು ಹಿಜಾಬ್‌ಗೆ ಅನುಮತಿ
‎
‎ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬಿಗೆ ಅನುಮತಿ ನೀಡಿ, ಇದರೊಡನೆ ಜನಿವಾರ, ರುದ್ರಾಕ್ಷಿಗಳನ್ನೂ ಎಳೆತಂದಿದೆ. ಕೇಸರಿ ಶಾಲಿಗೆ ನಿಷೇಧ ಹೇರಿ, ಒಂದು ಸುತ್ತೋಲೆ ಹೊರಡಿಸಿದೆ. ಭಾರತೀಯ ಜನತಾ ಪಾರ್ಟಿ ಹಿಜಾಬಿನ ವಿರೋಧಿಯಲ್ಲ. ಶಾಲೆಗಳಲ್ಲಿ ವಸ್ತ್ರ ಸಂಹಿತೆ ಇರಬೇಕೋ ಬೇಡವೊ? ಯಾವಾಗಿನಿಂದ ವಸ್ತ್ರ ಸಂಹಿತೆ ಆರಂಭವಾಯಿತು, ಯಾವ ಉದ್ದೇಶಕ್ಕೆ ಆರಂಭವಾಯಿತು ಎನ್ನುವುದರ ಕುರಿತು ಸ್ವತಃ ಶಿಕ್ಷಣ ಸಚಿವರಿಗೇ ಸ್ಪಷ್ಟತೆ, ಅರಿವು ಇದ್ದಂತಿಲ್ಲ. ಕೇವಲ ಮತೀಯ ಓಲೈಕೆಯ ರಾಜನೀತಿಯ ಭಾಗವಾಗಿ ಶಾಲೆಗಳಲ್ಲಿ ಜಾತ್ಯಾತೀತತೆಯ ಹೆಸರಿನಲ್ಲಿ ಮತೀಯತೆಗೆ ಅವಕಾಶ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು. ಅವರು ರಾಜ್ಯ ಬಿಜೆಪಿ ಕಛೇರಿ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಯಾವ ಮತ ಧರ್ಮದವರಾದರೂ ಶಾಲೆಗಳಲ್ಲಿ ಎಲ್ಲ ಮಕ್ಕಳೂ ಸಮಾನರು. ಇದಕ್ಕಾಗಿ ಬ್ರಿಟಿಷ್ ಕಾಲದಲ್ಲಿ, ಬಳಿಕ ಮೈಸೂರು ಮಹಾರಾಜರ ಆಡಳಿತದಲ್ಲೂ ಸಮವಸ್ತ್ರ ಜಾರಿಯಲ್ಲಿತ್ತು. ಯಾವ ಸಂದರ್ಭದಲ್ಲೂ ಸಮವಸ್ತ್ರದಲ್ಲಿ ಹಿಜಾಬ್ ಪ್ರವೇಶಿಸಿರಲಿಲ್ಲ. 1983ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯ ಮೂಲಕ ವಸ್ತ್ರ ಸಂಹಿತೆಯನ್ನು ಸ್ಪಷ್ಟಪಡಿಸಿ,ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಈಗ ಸರ್ಕಾರ ಮತೀಯ ಓಲೈಕೆ ರಾಜಕಾರಣವನ್ನು ಮುಂದುವರಿಸಿದ್ದು, ಹಿಜಾಬಿಗೆ ಅನುಮತಿ ನೀಡಲಾಗಿದೆ. ಇದಕ್ಕೆ ಜಾತ್ಯಾತೀತತೆಯ ಪೊಳ್ಳು ಕಾರಣಗಳನ್ನು ನೀಡಲಾಗಿದೆ ಎಂದು ರವಿ ಹೇಳಿದರು.
‎
‎ಸರ್ಕಾರ ಮತ್ತು ಶಿಕ್ಷಣ ಸಚಿವರು ಎಲ್ಲ ಮತ ಸಂಪ್ರದಾಯಗಳನ್ನು ಗೌರವಿಸುತ್ತೇವೆ ಎಂದಿಲ್ಲ. ನಮ್ಮಲ್ಲಿ ನಿರ್ವಾಣ ಸ್ಥಿತಿಯಿಂದ ದೇಹದ ಒಂದು ಅಂಗವೂ ಕಾಣದಂತೆ ವಸ್ತ್ರ ಧರಿಸುವ ಮತ ಸಂಪ್ರದಾಯಗಳಿವೆ. ಆದರೆ ಸರ್ಕಾರದ ಸುತ್ತೋಲೆಯನ್ನು ಗಮನಿಸಿದರೆ, ಹಿಜಾಬಿಗೆ ಮಾತ್ರ ಅನುಮತಿ ನೀಡಿ, ಮಿನಿ ತಾಲಿಬಾನ್ ರೀತಿ ವರ್ತಿಸುತ್ತಿರುವಂತಿದೆ. ಹಿಜಾಬಿನ ಸಂಪ್ರದಾಯ ಮನೆಗಳಲ್ಲಿ, ಅನುಮತಿ ಇರುವಲ್ಲಿರಲಿ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸಮವಸ್ತ್ರದ ಭಾಗವಲ್ಲದಿದ್ದರೆ ಅದನ್ನು ಹಾಕಲು ಸಾಧ್ಯವಿಲ್ಲ. ಯಾವುದಾದರೂ ಆಡಳಿತ ಮಂಡಳಿ ನಮ್ಮ ಸಮವಸ್ತ್ರದಲ್ಲಿ ಟೈ ಬದಲು ಕೇಸರಿ ಶಾಲು ಎಂದರೆ, ಅದನ್ನು ಸರ್ಕಾರ ಒಪ್ಪುತ್ತದೆಯೇ? ಎಂದು ಪ್ರಶ್ನಿಸಿ ದರು.
‎
‎1983ರಲ್ಲಿ ಯಾವ ಶಿಕ್ಷಣ ಕಾಯ್ದೆ ಜಾರಿಗೆ ಬಂದಿತ್ತೋ, ಅದನ್ನು ಮುಂದುವರಿಸಬೇಕು. ಇಲ್ಲವಾದರೆ ಸರ್ಕಾರ ಶಾಲೆಗಳನ್ನು ಮತೀಯವಾಗಿ ವಿಭಜಿಸುತ್ತದೆ. ಕಾಂಗ್ರೆಸ್ ವಂದೇ ಮಾತರಂ ಅನ್ನು ವಿಭಜಿಸಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ತಿದ್ದುಪಡಿ ಮಾಡಿ, ಶಾಬಾನೋ ಪ್ರಕರಣದಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದೆ. ಎಲ್ಲ ಮಕ್ಕಳನ್ನೂ ಶಾಲೆಯಲ್ಲಿ ಒಂದೇ ಎಂದು ನೋಡುವ ಭಾವನೆಗೆ ಸರ್ಕಾರ ಮಾಡಿದೆ.
‎
‎ನೋವುಂಟುಮಾಡುತ್ತಿದೆ. ದಾವಣಗೆರೆ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಮತಗಳು ಎಸ್‌ಡಿಪಿಐಗೆ ಹೋಗಿದ್ದವು. ಮುಸ್ಲಿಂ ಸಂಘಟನೆಗಳು ಬಳಿಕ ಕಾಂಗ್ರೆಸ್‌ಗೆ ಒಂದಷ್ಟು ಬೆದರಿಕೆ ಒಡ್ಡಿದ್ದವು. ಇದರಲ್ಲಿ ಹಿಜಾಬ್ ವಿಚಾರವೂ ಸೇರಿತ್ತು. ಇದಕ್ಕೆ ಹೆದರಿದ ಕಾಂಗ್ರೆಸ್ ಸರ್ಕಾರ ಹಿಜಾಬ್ ಅನುಮತಿಯ ಸುತ್ತೋಲೆ ಹೊರಡಿಸಿದೆ ಎಂದರು.
‎
2022.ರಲ್ಲಿ ಸರ್ಕಾರಿ ಶಾಲೆಗೂ ಕರ್ನಾಟಕ ಶಾಲೆಯಲ್ಲಿ ಕೇಸರಿ ಅವಕಾಶವಿಲ್ಲ. ಹಿಜಾಬಿಗೂ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಮುಸ್ಲಿಂ ಸಂತ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲು ಹತ್ತಿದಾಗ, ಕೋರ್ಟ್ ಹಿಜಾಬ್ ಎನ್ನುವುದು ಇಸ್ಲಾಂ ಪ್ರಕಾರ ಕಡ್ಡಾಯವಲ್ಲ ಎಂದಿದ್ದು, ಶಾಲಾ ಸಮವಸ್ತ್ರ ಸಮಾನತೆ ಮತ್ತು ಶಿಸ್ತನ್ನು ಪ್ರತಿನಿಧಿಸಬೇಕು ಎಂದು ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ದೊಡ್ಡ ಬೆಂಚಿಗೆ ಹೋಗಿದೆ.
‎
‎ಅದರ ತೀರ್ಪು ಬರುವಷ್ಟು ಕಾಯುವ ತಾಳ್ಮೆಯೂ ರಾಜ್ಯ ಸರ್ಕಾರಕ್ಕಿಲ್ಲ. ಜನಿವಾರ, ನಿವಾರ, ರುದ್ರಾಕ್ಷಿ ಸಮವಸ್ತ್ರದ ಹೊರತು ಒಳಗಿರುತ್ತದೆಯೇ ಹೊರಗಿರುವುದಿಲ್ಲ. ಸರ್ಕಾರದ ಸುತ್ತೋಲೆ ಮತೀಯವಾದಕ್ಕೆ ಕಾರಣವಾಗಿದೆ. ಶಾಲೆ ಕಾಲೇಜುಗಳಲ್ಲಿ, ನ್ಯಾಯಾಲಯದಲ್ಲಿ, ಎನ್‌ಸಿಸಿಯಲ್ಲಿ, ಎಲ್ಲದರಲ್ಲೂ ಮೊದಲಿಗೆ ಸರ್ಕಾರ ಸೇವಾದಳದಲ್ಲಿ, ಸಮವಸ್ತ್ರವಿದೆ. ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ರವಿ ಸಲಹೆ ನೀಡಿ ದರು.

About Author

Leave a Reply

Your email address will not be published. Required fields are marked *

You may have missed