ಬಸ್ಕಲ್ ಸಂತ ಜೋಸೆಫರ ಚರ್ಚ್ 38ನೇ ವಾರ್ಷಿಕ ಮಹೋತ್ಸವ….
1 min read
ಬಸ್ಕಲ್ ಸಂತ ಜೋಸೆಫರ ಚರ್ಚ್ 38ನೇ ವಾರ್ಷಿಕ ಮಹೋತ್ಸವ
ಆಲ್ದೂರು: ಸಮೀಪದ ಬಸ್ಕಲ್ ನಲ್ಲಿ 1977ರಲ್ಲಿ ಆರಂಭವಾಗಿ 1983 ರಲ್ಲಿ ಅಧಿಕೃತವಾಗಿ ಧರ್ಮ ಕೇಂದ್ರವಾಗಿ ಮಾರ್ಪಾಡದ ಸಂತ ಜೋಸೆಫರ ಚರ್ಚ್ 38ನೇ ವಾರ್ಷಿಕ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ವಾರ್ಷಿಕೋತ್ಸವದ ಪೂರ್ವಭಾವಿಯಾಗಿ
ಚರ್ಚ್ ಪಾಲಕ ಸಂತರಾದ ಸಂತ ಜೋಸೆಫ್ ರವರ ಹೆಸರಿನಲ್ಲಿ ಮೂರು ದಿನಗಳ ಪೂರ್ವಭಾವಿ ನೋವೇನ ಪ್ರಾರ್ಥನೆ ನಡೆದಿದ್ದು, ಪ್ರಾರ್ಥನಾ ಸಂಸ್ಕಾರವನ್ನು ಫಾ.ಆರೋಗ್ಯ ಸ್ವಾಮಿ ಬೆಂಗಳೂರು,ಫಾ.ಸುನಿಲ್ ರೋಡ್ರಿಗಸ್ ಮೂಡಿಗೆರೆ,ಫಾ. ಜೋಸೆಫ್ ಮಾಡ್ತಾ, ಪೂರೈಸಿದ್ದು,ವಾರ್ಷಿಕ ಮಹೋತ್ಸವ ದಿನದಂದು ಸಂತ ಜೋಸೆಫ್ ರವರ ಸ್ವರೂಪವನ್ನು ಬಸ್ಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕ್ರೈಸ್ತ ಭಕ್ತಾದಿಗಳು ಮತ್ತು ವಾದ್ಯ ಮೇಳಗಳ ತಂಡದೊಂದಿಗೆ ವಿಶೇಷ ಮೆರವಣಿಗೆ ಮೂಲಕ ಚರ್ಚ್ ಗೆ ಕೊಂಡೊಯ್ಯಲಾಯಿತು.
ಧರ್ಮ ಕೇಂದ್ರದ ಗುರುವಾಗಿ ಸೇವೆ ಸಲ್ಲಿಸಿದ ಫಾದರ್ ಜೇಮ್ಸ್ ಚಾರ್ಲಿ ರವರನ್ನು ಸನ್ಮಾನಿಸಲಾಯಿತು
ಬಳಿಕ ಹಬ್ಬದ ಬಲಿ ಪೂಜೆಯನ್ನು ಅರ್ಪಿಸಿದ ಬೆಂಗಳೂರು ಮಹಾ ಧರ್ಮ ಕ್ಷೇತ್ರ ಮೈಲಸಂದ್ರ ದ ಧರ್ಮ ಕೇಂದ್ರ ಗುರು ಫಾ. ಅಂತೋಣಿ ಸ್ವಾಮಿ ಶುಭಕೋರಿದರು.
ಹಬ್ಬದ ವಿಶೇಷ ಸಂದೇಶವನ್ನು ನೀಡಿದ ಬೆಳಗಾಂ ಧರ್ಮ ಕ್ಷೇತ್ರದ ಗುರು ಫ್ರಾನ್ಸಿಸ್ ಬುದಿನಿ, ದೇಶದ ಸಮುದಾಯದ ಸಮಾಜದ ಮೂಲ ಪ್ರಾರಂಭವಾಗುವುದು ಕುಟುಂಬದಿಂದ, ಸುಸಂಸ್ಕೃತ ಮತ್ತು ಪ್ರಾರ್ಥನೆಯ ಸಂಸ್ಕಾರಯುತ ಧಾರ್ಮಿಕ ಶಿಕ್ಷಣ ಕುಟುಂಬದಿಂದಲೇ ಪಡೆದ ವ್ಯಕ್ತಿಗಳು ಸಮಾಜಕ್ಕೆ ಮತ್ತು ದೇಶಕ್ಕೆ ಆಸ್ತಿಯಾಗಿ ಧರ್ಮಸಭೆಗೆ ಮಾದರಿಯಾಗುತ್ತಾರೆ ಆದರೆ ಪ್ರಸ್ತುತ ದಿನಗಳಲ್ಲಿ ಕುಟುಂಬ ಜೀವನದ ಘನತೆ ಕ್ಷೀಣಿಸುತ್ತಿದ್ದು, ಯುವ ಜನಾಂಗ ಬದುಕಿಗೆ ಹೊಂದಿಕೊಳ್ಳುವುದಕ್ಕಿಂತ ವೇಗವಾಗಿ ವಿಚ್ಛೇದನಕ್ಕೆ ಹೊಂದಿಕೊಳ್ಳುತ್ತಿರುವುದು ವಿಷಾದನೀಯ ಅದರಿಂದ ಕುಟುಂಬದ ಮಹತ್ವವನ್ನು ಅರಿತು ವಾತ್ಸಲ್ಯವನ್ನು ಪ್ರೀತಿಯನ್ನು ಸಹೋದರತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಪ್ರಬೋಧನೆ ನೀಡಿದರು. ಹಬ್ಬದ ನೇತೃತ್ವವನ್ನು ಧರ್ಮ ಕೇಂದ್ರ ಗುರು ಜೆಮ್ಸ್ ಚಾರ್ಲಿ ವಹಿಸಿದ್ದರು.
ಚಿಕ್ಕಮಗಳೂರು ಧರ್ಮ ಕ್ಷೇತ್ರದ ಚಾನ್ಸಿಲರ್ ಫಾ. ಚಾರ್ಲ್ಸ್ ಪೆರೇರ,
ಸಂತ ಜೋಸೆಫ್ ಪರ ಪ್ರಧಾನ ಲಯದ ಮುಖ್ಯ ಗುರು ಶಾಂತರಾಜ್,ಹಿರಿಯ ಫಾ. ಗಳಾದ ಲ್ಯಾನ್ಸಿ ಪಿಂಟೊ, ಪೌಲ್ ಮಚಾದೋ, ಸೇರಿ ಒಟ್ಟು 29 ಗುರುಗಳು ವಿವಿಧ ಧರ್ಮ ಕೇಂದ್ರಗಳಿಂದ ಮತ್ತು
ಚರ್ಚ್ ವ್ಯಾಪ್ತಿಯ ಗೆಂಡೇಹಳ್ಳಿ,ಹಚ್ಚಡ ಮನೆ, ಗಬ್ಬಳ್ಳಿ,ಬಸ್ಕಲ್, ಬಾಳೆಹಳ್ಳಿ ಭಾಗಗಳಿಂದ ಕ್ರೈಸ್ತ ಭಕ್ತಾದಿಗಳು ಭಾಗವಹಿಸಿದ್ದರು.



