लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎         ಅವಿನ್ ಟಿವಿ ಸುದ್ದಿಜಾಲದ ಈ ದಿನದ ಮುಂಜಾನೆ ಮಾತು….ಮತ್ತು ಒಂದು ಸಾಮಾಜಿಕ ಪಾಠ ✍️ ‎..

1 min read

‎ಇದು,

‎         ಅವಿನ್ ಟಿವಿ ಸುದ್ದಿಜಾಲದ ಈ ದಿನದ ಮುಂಜಾನೆ ಮಾತು….ಮತ್ತು ಒಂದು ಸಾಮಾಜಿಕ ಪಾಠ ✍️

‎

‎ಅದ್ದೂರಿ ಮದುವೆ ವೈಭವದ  ಜೀವನ  ಯಾವ ಸಮಾಜಕ್ಕೂ ಯಾವ ಕಾಲಕ್ಕೂ ಯಾರಿಗೂ  ಮಾದರಿಯಾಗುವುದಿಲ್ಲ…..!

‎

‎ಸರಳತೆ ಎಂಬುದು ಸರಳವಾಗಿ ಕಂಡರೂ ಅದು ಸುಲಭವಾಗಿ ದಕ್ಕುವುದಿಲ್ಲ,ಇದು ಒಂದು ತಪಸ್ಸು ಇದ್ದಂತೆ,ಇಂತಹ ಸರಳತೆಯನ್ನು ದಕ್ಕಿಸಿಕೊಳ್ಳವುದು ಎಂದರೆ ಅದು ಒಂದು ಸಾಧನೆ ಇದ್ದಂತೆಯೇ ಸರಿ.

‎

‎ಮದುವೆಗಳು ಸರಳೀಕರಣಗೊಂಡು ಬದುಕುಗಳು ಉನ್ನತೀಕರಣವಾಗಬೇಕು,

‎ಸರಳತೆ ನಮ್ಮೊಳಗೆ ಶೃಂಗಾರಗೊಳ್ಳವುದು ಸುಲಭದ ಮಾತಲ್ಲ.

‎

‎ಶಿಕ್ಷಣವಂತರಾಗಿ ಕೈಯಲ್ಲಿ ಪದವಿಗಳು ಇದ್ದು ಎಲ್ಲ ತರಹದ ಆರ್ಥಿಕ ಅನುಕೂಲಗಳು ಮನೆಯೊಳಗೆ ನೆಲೆಯೂರಿದ್ದರೂ ಕೂಡ  ಒಂದು ಮಾದರಿ ಜೀವನಕ್ಕಾಗಿ  ಮಂತ್ರ ಮಾಂಗಲ್ಯದ ಪ್ರಕಾರ  ಸರಳ ಸಮಾರಂಭದ ಮೂಲಕ ಬಾಳ ಸಂಗಾತಿಯಾಗಿ  ಪರಸ್ಪರ ಕೈಹಿಡಿಯುತ್ತಿರುವ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಮಡಬೂರಿನ ಗೆಳೆಯ ಪ್ರೀತಿಯ *ಅನಿರುದ್ಧ್ ರಾಜೇಂದ್ರ  💖 ಅನ್ವಿತ ಹೆಗ್ಡೆ*  ಎಂಬ ಈ ನವ ಜೋಡಿ ಅವಿನ್ ಟಿವಿ ಸುದ್ದಿಜಾಲಕ್ಕೆ ಕಳಿಸಿರುವ ಮಂತ್ರ ಮಾಂಗಲ್ಯದ ಆಹ್ವಾನ ಪತ್ರಿಕೆ ಇದು.

‎

‎ಅಹ್ವಾನ ಪತ್ರಿಕೆಯ ವಿಶೇಷವೆಂದರೆ   ನಾವು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ   ಮದುವೆಯಾಗುತ್ತಿದ್ದೇವೆ , ಆದರೆ ನಿಮ್ಮ ಆಶೀರ್ವಾದ ಹಾರೈಕೆ ನಮಗೆ ಅವಶ್ಯಕವಾಗಿ ಈ ಸಂದರ್ಭದಲ್ಲಿ ಬೇಕಾಗಿದೆ, ಆದುದ್ದರಿಂದ  ನೀವು ಇರುವ ಜಾಗದಿಂದಲೇ ನಮ್ಮನ್ನು ಮನದುಂಬಿ  ಹರಸಿ ಹಾರೈಸುವ ಸಂದೇಶ ರವಾನಿಸುವ ಮೂಲಕ ನಮ್ಮಿಬ್ಬರ ಈ ಮದುವೆಯನ್ನು ಸಾಕ್ಷಿಕರಿಸಿ ಎಂದು ಬಿನ್ನಹ ಮಾಡಿಕೊಂಡಿದ್ದಾರೆ.

‎

‎ರಾಷ್ಟ್ರಕವಿ ಕುವೆಂಪು ಅವರು ಕಟ್ಟಿಕೊಟ್ಟ ಮಂತ್ರ ಮಾಂಗಲ್ಯದಂತಹ ಒಂದು ಉತ್ಕೃಷ್ಟ ಜೀವನ ಸಂದೇಶದೊಂದಿಗೆ ದಾಂಪತ್ಯ ಬದುಕಿಗೆ ಕಾಲಿಡುತ್ತಿರುವ ಈ ನವ ಜೋಡಿಗೆ   ಶುಭಾಶಯಗಳು.

‎

‎ದೀರ್ಘಕಾಲ ಆರೋಗ್ಯವಾಗಿ ಬಾಳುವಂತಹ ಒಂದು ಪರಿವರ್ತನಾ ಸಮಾಜಕ್ಕೆ  ಈ ನವ ಜೋಡಿ ಮತ್ತಷ್ಟು ಮುಂದಡಿ ಹೆಜ್ಜೆ ಇಡಲಿ ಎಂಬುದು ಅವಿನ್ ಟಿವಿ ಸುದ್ದಿಜಾಲದ ಆಶಯವಾಗಿದೆ.

‎      •••••••••••••••✍️

‎ಡಿ.ಎಂ.ಮಂಜುನಾಥಸ್ವಾಮಿ

‎ಅವಿನ್ ಟಿವಿ ಸುದ್ದಿಜಾಲ …. ✍️

‎ಚಿಕ್ಕಮಗಳೂರು

‎

About Author

Leave a Reply

Your email address will not be published. Required fields are marked *

You may have missed