ಜಾತ್ಯತೀತ, ಸಾಮಾಜಿಕ, ನ್ಯಾಯದ ಪರ್ವ ಈಗ ಆರಂಭವಾಗಿದೆ: ಸಿ.ಜೋಸೆಫ್ ವಿಜಯ್ ~ತಮಿಳುನಾಡು ಮುಖ್ಯಮಂತ್ರಿ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಜಾತ್ಯತೀತ, ಸಾಮಾಜಿಕ, ನ್ಯಾಯದ ಪರ್ವ ಈಗ ಆರಂಭವಾಗಿದೆ: ಸಿ.ಜೋಸೆಫ್ ವಿಜಯ್ ~ತಮಿಳುನಾಡು ಮುಖ್ಯಮಂತ್ರಿ.
ಚೆನ್ನೈ ಮೇ ೧೦: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಚಲನಚಿತ್ರ ನಟ ಸಿ. ಜೋಸೆಫ್ ವಿಜಯ್ ಪ್ರಮಾಣ ವಚನ ಇಂದು ಸ್ವೀಕಾರಮಾಡಿದ್ದಾರೆ.
ತಮಿಳುನಾಡಿನ ಜನತೆಯ ಮುಂದೆ ವಿಜಯ್‌ಯನಮ್ ನಾನ್… ಎಂಬ ಈ ಒಂದು ಸಾಲಿನ ಗೌಪ್ಯತೆ ಮತ್ತು ಪ್ರಮಾಣವಚನ ಸ್ವೀಕಾರಕ್ಕಾಗಿ ಜೋಸೆಫ್ ವಿಜಯ್ ಅವರು ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದೊಂದಿಗೆ ಪ್ರತಿಜ್ಞೆ ಮಾಡಿದ್ದು ಕಳೆದ 17 ವರ್ಷಗಳ ಹಿಂದೆ. ಈಗ ಅದು ಗೊನೆ ಬಿಟ್ಟು ಫಲ ನೀಡಿ ರಾಜಕೀಯ ಭವಿಷ್ಯ ಅರಳಿದೆ.
ನನ್ನ ಜೊತೆ ಇರುವವರು ಯಾರೇ ತಪ್ಪು ಮಾಡಿದರು ಅವರನ್ನು ಕ್ಷಮಿಸುವ ಮಾತೇ ಇಲ್ಲ ಎಂಬ ಎಚ್ಚರಿಕೆಯೊಂದಿಗೆ, ತನ್ನ ಕೈಗಡಿಯಾರವನ್ನು ತೋರಿಸುತ್ತಾ ಜಾತ್ಯತೀತ ಸಾಮಾಜಿಕ ನ್ಯಾಯದ ಪರ್ವ ಈಗ ಆರಂಭವಾಗಿದೆ ಎಂಬ ಮಾತಿನೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಈ ಸಂಬಂಧ ಹಿರಿಯ ಪತ್ರಕರ್ತ ಗಾಣದಾಳು ಶ್ರೀಕಂಠ ಅವರು ಬರೆದಿರುವ ಈ ಕೆಳಕಂಡ ಸುದ್ದಿಯನ್ನು ಅವಿನ್ ಟಿವಿ ಸುದ್ದಿಜಾಲವು ತನ್ನ ಓದುಗರಿಗಾಗಿ ಕೊಡ ಮಾಡುತ್ತಿದೆ…. 👇
••••••••••••••••
ಸಿ.ಜೋಸೆಫ್ ವಿಜಯ್‌ಯನಮ್ ನಾನ್.. ಎನ್ನುತ್ತಿದ್ದಂತೆ ಸಭಾಂಗಣವೇ ಸಂಂಭ್ರಮದಲ್ಲಿ ತೇಲಿತು. ಶಿಳ್ಳೆ, ಚಪ್ಪಾಳೆ, ಜೈಕಾರ ಮೊಳಗಿದವು. ಅವು ವಿಜಯ್ ಅವರ ರಾಜಕೀಯ ಯಶಸ್ಸಿನ ಸಂಭ್ರಮ ಎನಿಸಲಿಲ್ಲ. ನಟನೆಯ ಜೊತೆಗೆ, ಜನಪರ ಚಿಂತನೆಗೆ ಸಿಕ್ಕ ಬೆಂಬಲವಾಗಿತ್ತು…
ಥೇಟ್ ಸಿನಿಮಾ ಶೈಲಿಯಲ್ಲೇ ಪ್ರಮಾಣವಚನ ಸ್ವೀಕರಿಸಿದ ವಿಜಯ್ ಪ್ರತಿ ಮಾತಿನಲ್ಲೂ, ಸಾಮಾಜಿಕ ಕಾಳಜಿ, ಜನಪರ ನಿಲುವು, ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತದ ಕುರಿತಾಗಿತ್ತು.
ವಿಜಯ್ ಕೈಯಲ್ಲಿರುವ ಗಡಿಯಾರ ತೋರಿಸುತ್ತಾ.
’ಜಾತ್ಯತೀತ, ಸಾಮಾಜಿಕ ನ್ಯಾಯದ ಪರ್ವ ಈಗ ಆರಂಭವಾಗಿದೆ…’ ಎಂದು ಹೇಳುತ್ತಿದ್ದಂತೆ, ಟಿವಿಯಲ್ಲಿ ಪ್ರಮಾಣವಚನ ಸಮಾರಂಭ ವೀಕ್ಷಿಸುತ್ತಿದ್ದ ಮಹಿಳಾ ಕಾರ್ಮಿಕರು ಶಿಳ್ಳೆ ಹೊಡೆದು ಸಂಭ್ರಮಿಸಿದರು!!
ವಿಜಯ್ ಅವರದ್ದು ಸುಲಭದ ಗೆಲುವಲ್ಲ. ಈ ಸಂಭ್ರಮಕ್ಕಾಗಿ ಅವರು 2009 ರಿಂದಲೂ ತಾಲೀಮು ನಡೆಸಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ತಮಿಳುನಾಡಿಗಾಗಿ ಮಾಡುವಷ್ಟು ಜನಪರ ಕೆಲಸಗಳ ಒಂದಷ್ಟು ಭಾಗದಷ್ಟನ್ನು(ನನ್ನರಿವಿಗೆ ಬಂದಿದ್ದು), ಕಳೆದ ಹದಿನೇಳು ವರ್ಷಗಳಲ್ಲಿ ಮಾಡಿದ್ದಾರೆ ವಿಜಯ್. ಇದಕ್ಕೊಂದು ಸಣ್ಣ ಉದಾಹರಣೆ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿನ ಮೀನುಗಾರರ ಸಮುದಾಯಕ್ಕೆ ವಿಜಯ್ ಕೊಟ್ಟಿರುವ ಕೊಡುಗೆ. ಅದನ್ನು ಆ ಸಮುದಾಯದವರ ಬಳಿಯೇ ಕೇಳಬೇಕು. ಕೋವಿಡ್ ಸಮಯದಲ್ಲಿ ನಾಡಿನಾದ್ಯಂತ ವಿಜಯ್ ತನ್ನ ಸಂಘಟನೆಯೊಂದಿಗೆ ಮಾಡಿದ ಸೇವಾ ಕಾರ್ಯಗಳು ಅಷ್ಟಾಗಿ ಪ್ರಚಾರಕ್ಕೆ ಬರಲಿಲ್ಲ, ಅವು ಈ ಚುನಾವಣೆಯಲ್ಲಿ ಕೆಲಸ ಮಾಡಿವೆ.
ತುಂಬಾ ಪರಿಶ್ರಮದೊಂದಿಗೆ ಕಟ್ಟಿರುವ ಈ ‘ಕಿಚಡಿ’ ಸರ್ಕಾರವನ್ನು, ಅಷ್ಟೇ ಎಚ್ಚರಿಕೆಯಿಂದ ವಿಜಯ್ ನಡೆಸಬೇಕಿದೆ. ಮೇಲ್ನೋಟಕ್ಕೆ ಆಡಳಿತದ ಅನುಭವದ ಕೊರತೆ ಇರುವವರೇ ಹೆಚ್ಚಿದ್ದಂತೆ ಕಾಣುತ್ತಿದೆ. ಒಂದು ‘ಅನುಭವೀ ಚಿಂತಕರ ಚಾವಡಿಯ’ ಅಗತ್ಯ ಬಹಳ ತುರ್ತಾಗಿ ಬೇಕಾಗಿದೆ.
ಏನೇ ಆಗಲಿ, ವಿಜಯ್ ಗೆಲುವು, ಇವರ ನಡೆಸುವ ಆಡಳಿತ ಬೇರೆ ರಾಜ್ಯಗಳಿಗೆ ಮಾದರಿ ಯಾಗುವಂತಿರಲಿ.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

