ಶ್ರೀ ಶನೇಶ್ವರ ಶ್ರೀ ಆಂಜನೇಯ ಸ್ವಾಮಿ ದ್ವಾದಶ ವಾರ್ಷಿಕ ಮಹೋತ್ಸವ….
1 min read
ಶ್ರೀ ಶನೇಶ್ವರ ಶ್ರೀ ಆಂಜನೇಯ ಸ್ವಾಮಿ ದ್ವಾದಶ ವಾರ್ಷಿಕ ಮಹೋತ್ಸವ
ಆಲ್ದೂರು: ಪಟ್ಟಣದ ಸಂತೆ ಮೈದಾನ ವಾರ್ಡಿನಲ್ಲಿರುವ
ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಬಯಲು ಅಭಯ ಹಸ್ತ ಆಂಜನೇಯ ಸ್ವಾಮಿಯವರ ದೇವಸ್ಥಾನದ ದ್ವಾದಶ ವಾರ್ಷಿಕ ಮಹೋತ್ಸವ ಪೂಜಾ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ಅರ್ಚಕ ರಾಘವೇಂದ್ರ ಭಟ್ ಮತ್ತು ತಂಡದವರಿಂದ ಪರಿವಾರ ದೇವತೆಗಳ ಹೋಮ, ಆಂಜನೇಯ ಹೋಮ,ಗಣ ಹೋಮ, ಪೂರ್ಣಹುತಿ ಕಳಶಾಭಿಷೇಕ ಪೂಜೆ, ಮಹಾಮಂಗಳಾರತಿ, ಮೂಲ ಮಂತ್ರ ಹೋಮ ತೀರ್ಥ ಪ್ರಸಾದ ವಿನಿಯೋಗ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಉತ್ಸವ ಮೂರ್ತಿಗಳಿಗೆ ಎಳ್ಳೆಣ್ಣೆ ಹರಕೆ ಸೇವೆ, ಸಂಜೆ ಉತ್ಸವಮೂರ್ತಿಗಳ ಪೇಟೆ ಸವಾರಿ,
ರಾತ್ರಿ ಕೆಂಡೋತ್ಸವ ,
ಮಹಾ ಮಂಗಳಾರತಿ, ಶ್ವೇತ ಪ್ರಸಾದ ವಿನಿಯೋಗ, ಶ್ರೀ ಶನೇಶ್ವರ ಸ್ವಾಮಿಯವರ ಕಥಾಪ್ರಸಂಗ ನಾರಾಯಣಪುರದ ಗುರು ಆನಂದ ಸ್ವಾಮಿ ಮತ್ತು ಗಿರೀಶ್ ಸಂಗಡಿಗರಿಂದ ನಡೆಯಿತು.
ದೇವಸ್ಥಾನದ ಅರ್ಚಕರಾದ ನಾಗೇಶ್ ಮತ್ತು ಜನಾರ್ಧನ್,
ಸೇವಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಭಕ್ತಾದಿಗಳು ಭಾಗವಹಿಸಿದ್ದರು.

