लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ರೈತರ ಹಕ್ಕುಪತ್ರ ವಜಾ; ಲಕ್ಷ್ಮಣ್ ಕುಮಾರ್
‎
‎ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಮತ್ತು ಕಡೂರು
‎ತಾಲ್ಲೂಕಿನ ಹಲವಾರು ರೈತರ ಹಕ್ಕುಪತ್ರಗಳನ್ನು ಕಂದಾಯ ಅಧಿಕಾರಿಗಳು ಸುಳ್ಳು ಆರೋಪ ಮಾಡಿ ವಜಾ ಮಾಡಲಾಗಿದೆ ಎಂದು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲಕ್ಷ್ಮಣ್ ಕುಮಾರ್ ಆರೋಪಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಸಾವಿರ ಹಾಗೂ ಕಡೂರು ತಾಲ್ಲೂಕಿನಲ್ಲಿ ಐದು ಸಾವಿರ ರೈತರ ಅಕ್ರಮ ಸಕ್ರಮ ನಮೂನೆ 50 ಮತ್ತು 53 ಹಕ್ಕಪತ್ರಗಳನ್ನು ವಿನಾಕಾರಣ ವಜಾ ಮಾಡಲಾಗಿದೆ ಎಂದು ಹೇಳಿದರು.
‎
‎ಅನ್ಯಾಯಕ್ಕೆ ಒಳಗಾದ ಕಾನೂನುಬಾಹಿರ ಆಜ್ಞೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಪ್ರಶ್ನಿಸಿದ್ದು, ಉಚ್ಚ ನ್ಯಾಯಾಲಯವು ದಾಖಲೆಗಳನ್ನು ಪರಿಶೀಲಿಸಿ ಮತ್ತು ಸರ್ಕಾರಿ ವಕೀಲರಾದ ಅಡ್ವಕೇಟ್ ಜನರಲ್‌ರವರ ವಾದವನ್ನು ಕೇಳಿ ಅಂತಿಮವಾಗಿ ಕಂದಾಯ ಅಧಿಕಾರಿಗಳು ಮಾಡಿದ ಆಜ್ಞೆಯನ್ನು ತಡೆ ನೀಡಲಾಗಿದೆ ಎಂದರು.
‎
‎ಬಹು ಮುಖ್ಯವಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿದ್ದ ಸರ್ಕಾರ ಆದೇಶ ಸಂಖ್ಯೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಉಚ್ಚ ನ್ಯಾಯಾಲಯ ಏ.28 ರಂದು ತಡೆಯಾಜ್ಞೆ ನೀಡಿದೆ ಎಂದು ವಿವರಿಸಿದರು. ರೈತರ ಪಹಣಿಗೆ ಎಫ್‌ಐಡಿ ಆಗಬೇಕು. ಎಫ್‌ಐಡಿ ಆಗದಿದ್ದರೆ ರೈತರಿಗೆ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕಂದಾಯ ಅಧಿಕಾರಿಗಳು ರೈತರಿಗೆ ಮಲತಾಯಿ ಧೋರಣೆ ಮಾಡುವುದರ ಜೊತೆಗೆ ತೊಂದರೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
‎
‎ಈ ಹಿಂದೆಯೇ ರೈತರಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ನೀಡಲಾಗಿದ್ದು, ಇತ್ತೀಚಿನ ದಿನಗಳಿಂದ ಅವರು ಕೊಟ್ಟಿರುವ ದಾಖಲೆಗಳು ಸರಿಯಿಲ್ಲ ಎಂದು ವಜಾ ಮಾಡಲಾಗುತ್ತಿದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
‎
ಮೂಡಿಗೆರೆ ಮತ್ತು ಕಡೂರು ರೈತರಿಗೆ ಮತ್ತು ಬಡಜನ ರಿಗೆ ವಿನಾಕಾರಣ ಸುಳ್ಳು ಆರೋಪ ಮಾಡಿ ವಜಾಗೊಳಿಸಿರುವ ಹಕ್ಕುಪತ್ರಗಳ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಜಿಲ್ಲಾಧಿಕಾ-ರಿಗಳ ಕಛೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ಚಂದ್ರೇಗೌಡ, ಸುರೇಶ್ ಗೌಡ, ರವಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಖಜಾಂಚಿ ರೆಹಮಾನ್, ಮುಖಂಡರಾದ ಗುರುದೇವ್ ಅನಿಲ್, ನವೀನ್ ಕುಮಾರ್.

About Author

Leave a Reply

Your email address will not be published. Required fields are marked *

You may have missed